ಯೊಲೊ ಫೌಂಡೇಶನ್ ಮತ್ತು ಕಿನ್ನರ್ ಟ್ರಸ್ಟ್ ಜೊತೆಗೆ ನಡೆಯುತ್ತಿರುವ ಗಣೇಶ ಹಬ್ಬದ ಆಚರಣೆಯಲ್ಲಿ ಬಾಲಿವುಡ್ ಖ್ಯಾತ ನಟಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಭಾಗಿಯಾಗಿ ಸಂಭ್ರಮಿಸಿದರು. ಮಂಗಳಮುಖಿಯರ ಜೊತೆ ಸರಳವಾಗಿ ಹಬ್ಬವನ್ನು ಆಚರಿಸಿದ ಶ್ರೀಲಂಕಾ ಚೆಲುವೆ ಜಾಕ್ವೆಲಿನ್.
ಜಾಕ್ವೆಲಿನ್ ತನ್ನ ಸಾಮಾಜಿಕ ಜಾಲದಲ್ಲಿ ಫೋಟೋವೊಂದನ್ನು ಹಂಚಿಕೊಂಡು, “ಗಣಪತಿ ಬಪ್ಪಾ ಮೋರೆಯಾ! ಇದೀಗ, ಎಲ್ಲ ಗಲ್ಲಿಗಳು ಈ ಧ್ವನಿಯಿಂದ ಪ್ರತಿಧ್ವನಿಸುತ್ತಿವೆ. ನಾನು ಎಲ್ಲಿಗೆ ಹೋದರೂ, ಗಣೇಶ ದೇವರು ನಮಗೆ ನೀಡಿದ ನಗುವನ್ನು ನಾನು ನೋಡುತ್ತಿದ್ದೇನೆ. ಈ ಶುಭ ಸಂದರ್ಭದಲ್ಲಿ ನನ್ನ ಜೊತೆಗೆ ಯೋಲೋ ಫೌಂಡೇಷನ್ ಅವರ ಆಚರಣೆಯ ಭಾಗವಾಗಿ ಕಿನ್ನರ್ ಟ್ರಸ್ಟ್‌ಗೆ ಭೇಟಿ ನೀಡಿದೆ. ಗಣೇಶನು ಈ ಸುಂದರ ಸಮುದಾಯವನ್ನು ಆಶೀರ್ವದಿಸಲಿ ಎಂದು ಬರೆದುಕೊಂಡಿದ್ದಾರೆ.
ಈ ಹಿಂದೆ, ಯೊಲೊ ಫೌಂಡೇಶನ್‌ನೊಂದಿಗೆ ಕೊರೋನಾ ಸಂಕಷ್ಟದ ಸಮಯದಲ್ಲಿ ನಿರ್ಗತಿಕರಿಗೆ ಜಾಕ್ವೆಲನ್ ಅವರು ಆಹಾರವನ್ನು ನೀಡಿ ಸಹಾಯ ಮಾಡಿದ್ದರು. ಬೀದಿ ನಾಯಿಗಳಿಗೆ ಸಹಾಯ ಮಾಡಿದರು. ಹಾಗೆಯೇ ಪೊಲೀಸ್ ಉದ್ಯೋಗಿಗಳಿಗೆ ಸಹಾಯ ಹಸ್ತ ಚಾಚಿದ್ದರು.
ಸದ್ಯ ಜಾಕ್ವೆಲಿನ್ ಸರ್ಕಸ್, ಬಚ್ಚನ್ ಪಾಂಡೆ, ಕಿಕ್ 2 ಮತ್ತು ರಾಮ ಸೇತು ಸಿನಿಮಾದಲ್ಲಿ ನಟಿಸಿದ್ದಾರೆ. ಕೊನೆಯದಾಗಿ ಭೂತ್ ಪೊಲೀಸ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಜಾಕಿ ಸಖತ್ ಕಾಮೆಡಿ ಮತ್ತು ಹಾರರ್ ಸೀನ್‌ಗಳಲ್ಲಿ ಮಿಂಚಿದ್ದರು.