ಬೆಂಗಳೂರು; ಮಾರುಕಟ್ಟೆಯ ಸಾಲವೂ ಸೇರಿ ಇತರೆ ಮೂಲಗಳಿಂದ ಪಡೆದ ಕೋಟ್ಯಂತರ ರೂ ಸಾಲವನ್ನು ಆಸ್ತಿ ಸೃಜನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಬಳಸಿಕೊಳ್ಳದ ಬಿಜೆಪಿ ಸರ್ಕಾರ ಹಣವನ್ನು ಸಾಲ ಮರುಪಾವತಿ ಸಾಲದ ಮೇಲಿನ ಬಡ್ಡಿಗೆ ಬಳಸುವ ಮೂಲಕ ಅಧಿಕಾರ ದುರ್ಬಳಕೆ ಮಾಡಿರುವುದನ್ನು‘ದಿ ಫೈಲ್’(thefile) ಸುದ್ದಿ ಸಂಸ್ಥೆ ವರದಿ ಮಾಡಿದೆ
ಹೆಚ್ಚಿನ ವಿವರಕ್ಕಾಗಿ Login : https://the-file.in/2021/09/governance/8776/
ಅಧಿಕ ಪ್ರಮಾಣದಲ್ಲಿ ನಗದು ಶಿಲ್ಕು ಹೊಂದಿದ್ದರೂ ಹಲವು ಸಂದರ್ಭಗಳಲ್ಲಿ ಮಾರುಕಟ್ಟೆಯಿಂದ ಹೆಚ್ಚಿನ ಬಡ್ಡಿ ದರದಲ್ಲಿ ಸಾಲ ಪಡೆದಿದೆ.2019-20 ರಲ್ಲೇ ಸರಾಸರಿ ಶೇ.6.38 ದರದಲ್ಲಿ 19,903 ಕೋಟಿ ರೂ ಬಡ್ಡಿ ಪಾವತಿಸಿರುವುದನ್ನು ಭಾರತದ ಲೆಕ್ಕ ನಿಯಂತ್ರ ಕರು ಮತ್ತು ಮಹಾಲೆಕ್ಕಪರಿಶೋಧಕರ ವರದಿ ಬಹಿರಂಗಗೊಳಿಸಿದೆ.
ಸಿಎಜಿ ವರದಿ ವಿಧಾನ ಸಭೆಯಲ್ಲಿ ಮಂಡನೆ : ವಿಧಾನಸಭೆಯಲ್ಲಿ ಮಂಡಿಸಲಾಗಿರುವ ಮಹಾಲೇಖಪಾಲಕರ(ಸಿಎಜಿ)ವರದಿಯು 2020ರ ಮಾರ್ಚ್ 31ಅಂತ್ಯಕ್ಕೆ ರಾಜ್ಯ ಹಣಕಾಸಿನ ವ್ಯವಹಾರಗಳ ಮಾಹಿತಿಯನ್ನು ಬಹಿರಂಗ ಗೊಳಿಸಿದೆ. ಬಹುಪಾಲು ಸಾಲವ ನ್ನು ತಪ್ಪಿಸಬಹುದಾಗಿದ್ದರೂ 48,499ಕೋಟಿಯಷ್ಟು ಸಾಲ ಪಡೆಯುವ ಮೂಲಕ ರಾಜ್ಯದ ಹಣಕಾಸು ವ್ಯವಸ್ಥೆಗೆ ಬಿಜೆಪಿ ಸರ್ಕಾರ ಭಾರೀ ಪೆಟ್ಟು ನೀಡಿದೆ.

ಕಾಂಗ್ರೆಸ್ ಗಿಂತ ಬಿಜೆಪಿ ಸರ್ಕಾರದಲ್ಲಿ ಸಾಲ ಹೆಚ್ಚು : ಹಿಂದಿನ ಕಾಂಗ್ರೆಸ್ ಸರ್ಕಾರದಿಂದಲೂ ಅಗತ್ಯಕ್ಕಿಂತಲೂ ಹೆಚ್ಚಿನ ಸಾಲ ವನ್ನು ಪಡೆದಿದೆ.ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಅದರಲ್ಲೂ ತಾರ್ಕಿಕ ಕಾರಣಗಳಿಲ್ಲದಿದ್ದ ರೂ ಸಾವಿರಾರು ಕೋಟಿ ಸಾಲ ಪಡೆದಿತ್ತು.ಬಹುಪಾಲು ಸಾಲವನ್ನು ತಪ್ಪಿಸಬಹುದಾಗಿ ದ್ದರೂ ಮಾರುಕಟ್ಟೆಯಿಂದ 48,499 ಕೋಟಿ ಗಳಷ್ಟು ಸಾಲ ಪಡೆದಿರುವುದನ್ನು ಸಿಎಜಿ ವರದಿಯು ಇದೀಗ ಬಹಿರಂಗಗೊಳಿಸಿದೆ.
‘ಹಿಂದಿನ ವರ್ಷಗಳಿಗೆ ಹೋಲಿಸಿದರೆ 2019-20ರ ಅವಧಿಯಲ್ಲಿ ರಾಜ್ಯದ ಬಂಡವಾಳ ವೆಚ್ಚದಲ್ಲಿ ಹೆಚ್ಚಿನ ಏರಿಕೆ ಕಂಡು ಬಂದಿ ಲ್ಲ.ಆದ್ದರಿಂದ ಹೆಚ್ಚಿನ ಬಡ್ಡಿ ದರದಲ್ಲಿ ಸಾಲ ಪಡೆಯಲು ಯಾವು ದೇ ತಾರ್ಕಿಕ ಕಾರಣವಿರಲಿಲ್ಲ.ಶೇ.60ರಷ್ಟು ನಗದು ಶಿಲ್ಕನ್ನು ಭಾರತೀಯ ರಿಸರ್ವ್ ಬ್ಯಾಂಕ್‌ನ ಮೀಸಲು ನಿಧಿಯಲ್ಲಿ ತೊಡಗಿಸಿತ್ತು.ಈ ಶೇಕಡ 60 ಭಾಗದ ಹೂಡಿಕೆಯನ್ನು ತೂಗಿಸಲು ರಾಜ್ಯ ಸರ್ಕಾರದ ಮಾಸಿಕ ನಗದು ಶಿಲ್ಕು ಸಮಾಧಾನಕರವಾಗಿದ್ದರಿಂದ ಹೆಚ್ಚಿನ ಸಾಲಗಳಿಗೆ ಮೊರೆ ಹೋಗುವ ಅಗತ್ಯವೇ ಇರಲಿಲ್ಲ. ಆದ್ದರಿಂದ ಸಾಲ ಅದರಲ್ಲೂ ಮಾರುಕಟ್ಟೆ ಸಾಲವನ್ನು ಮತ್ತು ಅದರ ಮೇಲಿನ ಬಡ್ಡಿ ಹೊರೆಯನ್ನು ತಪ್ಪಿಸಬಹುದಾಗಿತ್ತು,’ ಎಂದು ಸಿಎಜಿ ವರದಿಯು ಶೃತಪಡಿಸಿದೆ.
ಪಡೆದ ಸಾಲ ಅಭಿವೃದ್ದಿ ಮತ್ತು ಆಸ್ತಿ ಸೃಜನೆಗೆ ಬಳಸಿಲ್ಲ : ಸಾಲಗಳಿಂದ ಪಡೆದ ಮೊತ್ತಗಳನ್ನು ಸಾಮಾನ್ಯವಾಗಿ ಬಂಡವಾಳ ಸೃಜನೆ ಹಾಗೂ ಅಭಿವೃದ್ಧಿ ಚಟುವಟಿಕೆಗಳಿಗೆ ಮಾತ್ರ ಬಳಸಬೇಕು.ವರ್ತಮಾನ ವೆಚ್ಚಕ್ಕೆ ಹಾಗೂ ಬಾಕಿ ಉಳಿದ ಸಾಲಗಳ ಬಡ್ಡಿ ಮರು ಪಾವತಿಗೆ ಸಾಲದ ಮೂಲಕ ಪಡೆದ ಮೊತ್ತವನ್ನು ಬಳಸುವುದು ಸಹಿಷ್ಣುತೆಯಲ್ಲ,’ ಎಂದು ಸಿಎಜಿ ವರದಿಯು ಅಭಿಪ್ರಾ ಯಪಟ್ಟಿದೆ.

ಅಗತ್ಯಕ್ಕಿಂತ ಹೆಚ್ಚು ಸಾಲ : 2015-16ರಿಂದ 2019-20ರವರೆಗೆ ಒಟ್ಟು 1,69,723 ಲಕ್ಷ ಕೋಟಿ ರು.ಗಳನ್ನು ವಿವಿಧ ಮೂಲಗಳಿಂದ ಸಾಲ ಪಡೆದಿದೆ.ಈ ಪೈಕಿ 42,062 ಕೋಟಿ ರು.ಗಳನ್ನು ಹಿಂದೆ ಪಡೆದ ಸಾಲದ (ಅಸಲು) ಮರು ಪಾವತಿ ಮಾಡಲಾಗಿದೆ.ಈ 5 ವರ್ಷ ದಲ್ಲಿ ಬಂಡವಾಳ ವೆಚ್ಚವನ್ನು (ಸಾಲ ಮತ್ತು ಮುಂಗಡಗಳ ನ್ನೊಳಗೊಂಡು) ಭರಿಸಲು ಪಡೆದ ಸಾಲ ಅಪರ್ಯಾಯವಾಗಿರುವುದನ್ನು ಸಿಎಜಿ ಉಲ್ಲೇಖಿಸಿದೆ.
2019-20ರಲ್ಲಿ ಪಡೆದ ಸಾಲದ ಮೊತ್ತವು ಬಂಡವಾಳ ವೆಚ್ಚ ಭರಿಸುವಲ್ಲಿ ಪರ್ಯಾಪ್ತವಾಗಿತ್ತು.ಇದು ಸರ್ಕಾರವು ಅಗತ್ಯಕ್ಕಿಂತ ಹೆಚ್ಚು ಮೊತ್ತದ ಸಾಲವನ್ನು ಪಡೆಯಲಾಗಿದೆ ಎಂಬುದನ್ನು ಸೂಚಿಸುತ್ತದೆ,’ ಎಂದು ಸಿಎಜಿ ವರದಿ ತಿಳಿಸಿದೆ.
2015-16ರಲ್ಲಿ 21,072 ಕೋಟಿ ರು.ಸಾಲ ಪಡೆಯಲಾಗಿತ್ತು.ಅದೇ ರೀತಿ 2016-17ರಲ್ಲಿ 31,156 ಕೋಟಿ, 2017-18ರಲ್ಲಿ 25,122 ಕೋಟಿ, 2018-19ರಲ್ಲಿ 41,914 ಕೋಟಿ ಮತ್ತು 2019-20ರಲ್ಲಿ 50,459 ಕೋಟಿ ರು. ಸಾಲ ಪಡೆದಿರುವುದು ಸಿಎಜಿ ವರದಿಯಿಂದ ಪ್ರಕಟಿಸಿದೆ.
ದೊಡ್ಡಪ್ರಮಾಣದ ನಗದು ಶಿಲ್ಕನ್ನು ಹೊಂದಿದ್ದರೂ ಸಹ ರಾಜ್ಯ ಸರ್ಕಾರವು ಮಾರುಕಟ್ಟೆ ಸಾಲಗಳನ್ನು ಅವಲಂಬಿಸಿತ್ತು. ಉತ್ಪಾದಕ ಬಳಕೆಗೆ ಬಾರದ ನಗದು ಶಿಲ್ಕುಗಳನ್ನು ಹೆಚ್ಚಿಸಲು ಇದು ಕಾರಣವಾಯಿತು.ಅದೇ ರೀತಿ ವರ್ಷದ ಕೊನೆಯಲ್ಲಿ ರಾಜ್ಯದ ನಗದು ಶಿಲ್ಕು 34,463 ಕೋಟಿ ಇದ್ದಿತಾದರೂ ನಗದು ಹೆಚ್ಚಳವು ಹಿಂದಿನ ವರ್ಷಕ್ಕಿಂತ ಶೇ.57ರಷ್ಟಿತ್ತು ಎಂಬುದನ್ನು ವಿವರಿಸಿದೆ.

ನಗದು ಶಿಲ್ಕು ಇದ್ದರೂ ಸಾಲ ಎತ್ತುವಳಿ : ಪ್ರಸಕ್ತ ವರ್ಷದ ಕೊನೆಯಲ್ಲಿ ರಾಜ್ಯ ಸರ್ಕಾರದ ನಗದು ಶಿಲ್ಕು 2018-19ರಲ್ಲಿದ್ದ 22,003.87 ಕೋಟಿ ಯಿಂದ 2019-20ರಲ್ಲಿ 34,463.13 ಕೋಟಿಗೆ ಏರಿತ್ತು. ಇದು ಒಟ್ಟಾರೆ 12,459 ಕೋಟಿಗಳಷ್ಟು ಗಣನೀಯವಾಗಿ ಹೆಚ್ಚಿತ್ತು. ಹೆಚ್ಚುವರಿ ನಗದು ಶಿಲ್ಕು ಮುಖ್ಯವಾಗಿ 2019-20ರ ಅವಧಿಯಲ್ಲಿ 48,499 ಕೋಟಿ ರು. ಮಾರುಕಟ್ಟೆ ಸಾಲದಿಂದಲೇ ಉಂಟಾಗಿದೆ ಎಂದು ಸಿಎಜಿ ವಿವರಿಸಿದೆ.
‘ರಾಜ್ಯ ಸರ್ಕಾರವು ಅಧಿಕ ಪ್ರಮಾಣದ ನಗದು ಶಿಲ್ಕು ಹೊಂದಿದ್ದರೂ ಸಹ ವರ್ಷದ ಹಲವಾರು ಸಂದರ್ಭಗಳಲ್ಲಿ ಮಾರುಕಟ್ಟೆ ಸಾಲಗಳನ್ನು ಪಡೆದುಕೊಂಡಿದೆ ಮತ್ತು ಅದನ್ನು ಉತ್ಪಾದಕ ಬಳಕೆಗೆ ಒಳಪಡಿಸದೇ ನಗದು ಶಿಲ್ಕುಗಳು ಹೆಚ್ಚಾಗಲು ಕಾರಣವಾಗಿದೆ,’ ಎಂದು ಸಿಎಜಿ ವರದಿ ಹೇಳಿದೆ.

ಮಾರ್ಚ್ 2020ರ ಅಂತ್ಯಕ್ಕೆ 13,654 ಕೋಟಿಯಷ್ಟಿದ್ದು 34,464 ಕೋಟಿಯಷ್ಟಲ್ಲ ಎಂದು ಆರ್ಥಿಕ ಇಲಾಖೆ ತಿಳಿಸಿತ್ತು. ಹಣಕಾಸು ಲೆಕ್ಕಗಳ ಪ್ರಕಾರ ನಗದು ಶಿಲ್ಕು 34,464 ಕೋಟಿಗಳಾಗಿದ್ದು ಇದು ಹಿಂದಿನ ಎಲ್ಲಾ ರಾಜ್ಯ ಹಣಕಾಸು ವರದಿಗಳಲ್ಲಿ ತಿಳಿಸಿರುವಂತೆ ಮೀಸಲು ನಿಧಿಗಳಲ್ಲಿನ ಹೂಡಿಕೆ ಮತ್ತು ಇತರ ಬಾಬ್ತನ್ನು ಒಳಗೊಂಡಿದೆ.ನಗದು ಶಿಲ್ಕುಗಳಲ್ಲಿನ ಹೂಡಿಕೆಯು 5,139.28 ಕೋಟಿ ಗಳಿಂದ 13,634 ಕೋಟಿಗಳಾಗಿರುವುದನ್ನು ಗಮನಿಸಿರುವ ಲೆಕ್ಕ ಪರಿಶೋಧನೆ ವರದಿಯು 2019-20ರಲ್ಲಿ ಹೂಡಿಕೆಗಳಿಂದ ಸರಾಸರಿ ಶೇ. 2.31ರಂತೆ 535 ಕೋಟಿಗಳ ಬಡ್ಡಿಯನ್ನು 14 ದಿನಗಳ ಖಜಾನೆ ಬಿಲ್‌ಗಳಿಂದ ಗಳಿಸಿತ್ತು ಎಂಬ ಅಂಶವು ಸಿಎಜಿ ವರದಿಯಿಂದ ತಿಳಿದು ಬಂದಿದೆ.
ಸಾಲಕ್ಕೆ ಸರಾಸರಿ ಶೇ 6.38 ರೂ ಬಡ್ಡಿ ದರ : ‘ಸರಾಸರಿ ಶೇಕಡ 6.38ರ ದರದಲ್ಲಿ 19.903 ಕೋಟಿ ರು.ಗಳ ಬಡ್ಡಿಯನ್ನು ಪಾವತಿಸಿದೆ. ಆದ್ದರಿಂದ ರಾಜ್ಯ ಸರ್ಕಾರವು ಅಧಿಕ ನಗದು ಶಿಲ್ಕನ್ನು ಹೊಂದಿದ್ದರೂ ಹೆಚ್ಚಿನ ಸಾಲಕ್ಕೆ ಮೊರೆ ಹೋಗಿತ್ತು,’ ಎಂದು ಸಿಎಜಿ ಆಭಿಪ್ರಾಯಿಸಿದೆ.