ಬೆಂಗಳೂರು : ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ದ್ವಿತಿಯಾರ್ಧ ಯುಎಇಯಲ್ಲಿ ನಡೆಯಲಿದೆ. ಇದೇ ತಿಂಗಳ 17 ರಿಂದ ಆರಂಭವಾಗುವ ಪಂದ್ಯದಲ್ಲಿ ರಾಯಲ್ ಚಾಲಂಜರ್ಸ್ ಬೆಂಗಳೂರು ತಂಡ ಸೆಪ್ಟಂಬರ್ 20ರಂದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ
ಈ ಪಂದ್ಯದಲ್ಲಿ ಆರ್ ಸಿ ಬಿ ತಂಡದ ಆಟಗಾರರು ನೀಲಿ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಪ್ರಾಂಚೈಸಿ ಈ ಸಂಬಂಧ ಟ್ವೀಟ್ ಮಾಡಿ ಸ್ಪಷ್ಟಪಡಿಸಿದೆ. ಕೊರೊನಾ ಸಂದರ್ಭದಲ್ಲಿ ಸಮಾಜಕ್ಕೆ ತಮ್ಮ ನಿಸ್ವಾರ್ಥ ಸೇವೆ ಸಲ್ಲಿಸಿರುವ ಯೋಧರ ಗೌರವಾರ್ಥವಾಗಿ ಆರ್ ಸಿ ಬಿ ತಂಡ ನೀಲಿ ಬಣ್ಣದ ಪೋಷಾಕು ಧರಿಸಲಿದೆ.
ಈ ಹಿಂದೆಯೂಕೂಡ ಆರ್ ಸಿ ಬಿ ತಂಡ ಪರಿಸರ ಸಂರಕ್ಷಣೆಯ ಅಭಿಯಾನವಾಗಿರುವ ಗೋ ಗ್ರೀನ್ ಸಂದರ್ಭದಲ್ಲಿ ಹಸಿರು ಪೋಷಾಕಿನಲ್ಲಿ ಕಾಣಿಸಿಕೊಂಡಿತ್ತು.