ವೈದ್ಯಕೀಯ ಸೌಲಭ್ಯಕ್ಕೆ ನೀಡಿದ 12 ಲಕ್ಷ ಹಣವನ್ನು ಸರ್ಕಾರಕ್ಕೆ ಹಿಂದಿರುಗಿಸಿದ ಶಾಸಕ ರಾಜೂಗೌಡ

ಬೆಂಗಳೂರು : ತನ್ನ ತಾಯಿಯ ಚಿಕಿತ್ಸೆಗೆ ಶಾಸಕರ ವೈದ್ಯಕೀಯ ಸೌಲಭ್ಯದಡಿ ಆಸ್ಪತ್ರೆಯವರು ಪಡೆದಿದ್ದ ಸುಮಾರು ಹನ್ನೆರೆಡು ಲಕ್ಷ ರೂಪಾಯಿ ಹಣವನ್ನು ಶಾಸಕ ರಾಜೂಗೌಡ ಹಿಂತಿರುಗಿಸಿದ್ದಾರೆ. ಹನ್ನೆರೆಡು ಲಕ್ಷ ರೂಪಾಯಿಯ ಚೆಕ್ ಅನ್ನು ವಿಧಾನ ಸಭೆ ಸ್ಪೀಕರ್ ವಿಶ್ವೇಶ್ವೇರ ಹೆಗಡೆ ಕಾಗೇರಿ ಅವರಿಗೆ ಹಸ್ತಾಂತರಿಸಿದರು.

ತನ್ನ ತಾಯಿ  ಹುಷಾರಿಲ್ಲದ ಸಂದರ್ಭದಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೂ ಎರಡೆರೆಡು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಈ ಸಂದರ್ಭದಲ್ಲಿ ಎರಡೂ ಆಸ್ಪತ್ರೆಗಳಿಂದ ಒಟ್ಟು 38 ಲಕ್ಷ ರೂಪಾಯಿ ಬಿಲ್ ಆಗಿತ್ತು. ಅದರಲ್ಲಿ 12 ಲಕ್ಷ 90 ಸಾವಿರ ಬಿಲ್ ಶಾಸಕರ ಕುಟುಂಬಕ್ಕೆ ಸಿಗುವ ಸೌಲಭ್ಯದಿಂದ ಮರುಪಾವತಿ ಆಗಿತ್ತು.

ಪ್ರತಿಯೊಬ್ಬ ಶಾಸಕರಿಗೆ, ಕುಟುಂಬದವರಿಗೆ ವೈದ್ಯಕೀಯ ಸೌಲಭ್ಯ ಇದೆ, ಅದನ್ನ ಆಸ್ಪತ್ರೆ ಅವರು ಕ್ಲೈಮ್ ಮಾಡಿಕೊಂಡಿದ್ದು ಎಂದು ರಾಜೂಗೌಡ ವಿಧಾನಸೌಧದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಅದನ್ನ ನಾನು ಪರಿಶೀಲನೆ ಮಾಡಿ ನೋಡಿದಾಗ ಸರ್ಕಾರದಿಂದ 12 ಲಕ್ಷ 90 ಸಾವಿರ ರೂಪಾಯಿ ಬಿಲ್ ಪಾವತಿಯಾಗಿತ್ತು.

ಮಾಧ್ಯಮದಲ್ಲೂ ಬಿಲ್ ಪಾವತಿ ಬಗ್ಗೆ ವರದಿಯಾಗಿತ್ತು, ಹಾಗಾಗಿ ನಾನೇ ಸರ್ಕಾರದ ಬಿಲ್ ಅನ್ನು ವಾಪಸ್ ಮಾಡಿದ್ದೇನೆ. ಸ್ವೀಕರ್ ಅವರಿಗೆ ಚೆಕ್ ಮೂಲಕ ಹಣ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

More News

You cannot copy content of this page