ಬಾಗಲಕೋಟೆ : ಮಲಪ್ರಭಾ ನದಿಯಲ್ಲಿ ಕೊಚ್ಚಿ ಹೋಗಿ, ನದಿಯ ಮಧ್ಯೆ 2 ಗಂಟೆಗಳ ಕಾಲ ಮುಳ್ಳಿನಕಂಟಿಯಲ್ಲಿ ಆಶ್ರಯ ಪಡೆದ ವ್ಯಕ್ತಿಯನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಗೋವಿನಕೊಪ್ಪ ಬಳಿ ನದಿಯಲ್ಲಿ ಸ್ನಾನಕ್ಕೆಂದು ತೆರಳಿ ಕಾಲುಜಾರಿ ಬಿದ್ದಿದ್ದ ಬಸಪ್ಪ ತಳವಾರ ಅವರನ್ನು ರಕ್ಷಿಸಲಾಗಿದೆ. ಬಸಪ್ಪ ಅವರು ಕೊಣ್ಣೂರ ಗ್ರಾಮದ ನಿವಾಸಿಯಾಗಿದ್ದಾರೆ. ಅಗ್ನಿ ಶಾಮಕ ದಳದ ಸಿಬ್ಬಂದಿ ನಿರಂತರ ಎರಡು ಗಂಟೆಗಳ ಕಾರ್ಯಾಚರಣೆ ನಡೆಸಿ ರಕ್ಷಣೆಮಾಡಿದ್ದಾರೆ.
ನಿನ್ನೆಯಿಂದ ಮಲಪ್ರಭಾ ನದಿಯ ಹೊರಹರಿವು ಹೆಚ್ಚಾಗಿದ್ದ ಹಿನ್ನೆಲೆ ಈ ಘಟನೆ ಸಂಭವಿಸಿತ್ತು ಎಂದು ಅಧಿಕಾರಿಗಳಉ ತಿಳಿಸಿದ್ದಾರೆ.