ಟಿ-20 ವಿಶ್ವಕಪ್ ಬಳಿಕ ಭಾರತ ಕ್ರಿಕೆಟ್ ತಂಡದ ಚುಟುಕು ಕ್ರಿಕೆಟ್ ನ ನಾಯಕ ಸ್ಥಾನವನ್ನು ವಿರಾಟ್ ಕೊಯ್ಲಿ ಬಿಟ್ಟುಕೊಡಲು ನಿರ್ಧರಿಸಿರುವುದಾಗಿ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದಿದ್ದಾರೆ.
ಮುಂದಿನ ತಿಂಗಳಿಂದ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿ ನಡೆಯಲಿದೆ. ಇದಾದ ಬಳಿಕ ನಾಯಕತ್ವ ಬಿಟ್ಟು ಬೇರೆಯವರಿಗೆ ಅವಕಾಶ ಕಲ್ಪಿಸಿಕೊಡವುದಾಗಿ ಟಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಆಟಗಾರನಾಗಿ,ನಾಯಕನಾಗಿ ನನ್ನೆಲ್ಲಾ ಸಮರ್ಥ್ಯವನ್ನು ಭಾರತ ತಂಡಕ್ಕಾಗಿ ಧಾರೆಯೆರೆದಿದ್ದೇನೆ. ಇನ್ನು ಮುಂದೆ ಕೇವಲ ಆಟಗಾರನಾಗಿ ಸೇವೆ ಸಲ್ಲಿಸಲಿದ್ದೇನೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕೋಚ್ ರವಿಶಾಸ್ತ್ರಿ, ಕಾರ್ಯದರ್ಶಿ ಜಯ್ ಷಾರೊಂದಿಗೆ ಚರ್ಚಿಸಿ ಈನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿರಾಟ್ ತಿಳಿಸಿದ್ದಾರೆ.
ಇನ್ನು ಮುಂದೆ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ನಲ್ಲಿ ಮಾತ್ರ ನಾಯಕನಾಗಿ ಮುಂದುವರೆಯುವುದಾಗಿ ಕೊಯ್ಲಿ ತಿಳಿಸಿದ್ದಾರೆ. ಟಿ-20ಯಲ್ಲಿ ಕೇವಲ ಆಟಗಾರನಾಗಿ ಅತ್ಯುತ್ತಮ ಕಾಣಿಕೆ ತಂಡಕ್ಕೆ ನೀಡುವುದಾಗಿ 32 ವರ್ಷ ವಯಸ್ಸಿನ ವಿರಾಟ್ ಕೊಯ್ಲಿ ತಿಳಿಸಿದ್ದಾರೆ.
ಐದಾರು ವರ್ಷಗಳಿಂದ ಎಲ್ಲಾ ರೀತಿಯ ಕ್ರಿಕೆಟ್ ನಲ್ಲಿ ಅನೇಕ ರೀತಿಯ ಒತ್ತಡಗಳನ್ನು ನಿಭಾಯಿಸಿ ತಂಡವನ್ನು ಮುನ್ನೆಡೆಸಿದ್ದೇನೆ, ಈಗ ಸ್ವಲ್ಪ ಬಿಡುವಿನ ಅವಶ್ಯಕತೆ ಇದೆ. ಆದ್ದರಿಂದ ಈನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.