ಪ್ರಸ್ತುತ ದುಬೈನಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಿಯ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಸ್ಥಾನಕ್ಕೆ ವಿದಾಯ ಹೇಳುವುದಾಗಿ ವಿರಾಟ್ ಕೊಯ್ಲಿ ತಿಳಸಿದ್ದಾರೆ.
ಕಳೆದ ರಾತ್ರಿ ಆರ್ ಸಿ ಬಿ ತಂಡವು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಈ ತಿಳಿಸಿದ್ದಾರೆ. ಆರ್ ಸಿ ಬಿ ನಾಯಕನಾಗಿ ಇದು ನನ್ನ ಕೊನೆಯ ಐಪಿಎಲ್ ಟೂರ್ನಿ, ಆದರೆ ಆರ್ ಸಿ ಬಿ ಆಟಗಾರನಾಗಿ ನಾನು ಮುಂದುವರಿಯುವೆ. ನನ್ನಲ್ಲಿ ನಂಬಿಕೆ ಇಟ್ಟ ಅಭಿಮಾನಿಗಳಿಗೆ, ಬೆಂಬಲಿಗರಿಗೆ ಹಾಗೂ ತಂಡದ ಮ್ಯಾನೇಜಮೆಂಟ್ ಗೆ ಆಭಾರಿಯಾಗಿದ್ದೇನೆ ಎಂದು ತಿಳಿಸಿದೆ.
ಇದೊಂದು ಬಹಳ ಕಠಿಣ ನಿರ್ಧಾರವಾಗಿದ್ದು, ಆರ್ ಸಿ ಬಿ ತಂಡದಲ್ಲಿ ಪ್ರತಿಭಾವಂತ ಆಟಗಾರರೊಂದಿಗೆ ಆಡಿದ್ದು ನನಗೆ ಬಹಳ ದೊಡ್ಡ ಅನುಭವ. ಆರ್ ಸಿಬಿ ಆಡಳಿತ ಮಂಡಳಿ, ಕೋಚ್, ನೆರವು ಸಿಬ್ಬಂದಿ ಹಾಗೂ ಸಮಗ್ರ ನನ್ನ ಕ್ರಿಕೆಟ್ ಕುಟುಂಬಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ ಎಂದುವಿರಾಟ್ ತಿಳಿಸಿದ್ದಾರೆ.