ತಮಿಳುನಾಡು: ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟ್ಯಾಲಿನ್ ಅಲ್ಲಿನ ಜನರ ಹತ್ತಿರಕ್ಕೆ ತೆರಳುತ್ತಿದ್ದಾರೆ. ಮುಖ್ಯಮಂತ್ರಿಯಾದ ಬಳಿಕ ಅವರು ಅಲ್ಲಿನ ಜನತೆಗೆ ಸಾಕಷ್ಟು ಕೊಡುಗೆಗಳನ್ನು ಘೋಷಿಸಿದ್ದರು. ಹಾಗೆನೇ, ತಾವು ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಒಂದೊಂದಾಗಿ ಈಡೇರಿಸುತ್ತಿದ್ದಾರೆ.
ಆದರೆ, ಈಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಬೆಳಗ್ಗಿನ ಸಮಯದಲ್ಲಿ ವಾಕಿಂಗ್ ಮಾಡುವ ಪಾರ್ಕ್ ಗೆ ತೆರಳುತ್ತಿದ್ದಾರೆ. ಅವರು ಅಲ್ಲಿ ಜನರನ್ನು ಮಾತನಾಡಿಸಿ ಅವರ ಸಮಸ್ಯೆಗಳೇನು ಎಂದು ಕೇಳುತ್ತಿದ್ದಾರೆ. ಇಂದು ಬೆಳಗ್ಗೆ ಚೆನ್ನೈನ ಪಾರ್ಕಿಗೆ ತೆರಳಿ ಅಲ್ಲಿ ಜನರ ಸಮಸ್ಯೆಗಳನ್ನು ಆಲಿಸಿದರು.
ವಾಕಿಂಗ್ ಮಾಡುವ ಮಹಿಳೆಯೊಬ್ಬರು ಮುಖ್ಯಮಂತ್ರಿ ಸ್ಟ್ಯಾಲಿನ್ ಅವರನ್ನು ಕಂಡು ಖುಷಿಪಟ್ಟರಲ್ಲದೆ, ಅವರೊಂದಿಗೆ ಸುದೀರ್ಘವಾಗಿ ಮಾತನಾಡಿದರು. ಅಲ್ಲದೆ, ಜನಸಾಮಾನ್ಯರಂತೆ ಬಂದಿರುವ ಮುಖ್ಯಮಂತ್ರಿ ಅವರನ್ನು ಕಂಡು ಎವರ್ ಗ್ರೀನ್ ಎಂದು ಹೇಳಿದರು.
ಡಿಎಂಕೆ ಆಗಲಿ, ಎಐಎಡಿಎಂಕೆ ಪಕ್ಷವೇ ಅಧಿಕಾರಕ್ಕೆ ಬರಲಿ, ಜನಸಾಮಾನ್ಯರಿಗಂತೂ ಬಂಪರ್ ಕೊಡುಗೆ ಖಚಿತ. ಇತ್ತೀಚಿನ ಚುನಾವಣೆಯಲ್ಲಿ ಡಿಎಂಕೆ ಗೆಲುವು ಸಾಧಿಸಿ, ಸ್ಟ್ಯಾಲಿನ್ ಮುಖ್ಯಮಂತ್ರಿಯಾಗಿದ್ದರು.
..