ಬೆಂಗಳೂರು : ಕಳೆದ 13 ತಿಂಗಳ ಸುರಂಗ ಮಾರ್ಗ ಕಾರ್ಯಾಚರಣೆ ಮುಗಿಸಿ ಊರ್ಜಾ ಯಂತ್ರ ಇಂದು ಶಿವಾಜಿನಗರದಲ್ಲಿ ಹೊರಬಂತು. ಈ ಕ್ಷಣವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಇನ್ನಿತರ ಸಚಿವರು, ಶಾಸಕರು, ಅಧಿಕಾರಿಗಳು ವಿಕ್ಷೀಸಿ, ಹರ್ಷ ವ್ಯಕ್ತಪಡಿಸಿದರು.

ಈಗಾಗಲೇ 9 ಯಂತ್ರಗಳು ಮೆಟ್ರೋ ಸುರಂಗ ಮಾರ್ಗ ಕೊರೆಯುತ್ತಿದ್ದು, ಈ ಪೈಕಿ ಊರ್ಜಾ 855 ಮೀಟರ್ ಉದ್ದದ ಸುರಂಗ ಮಾರ್ಗದ ಕೆಲಸ ಮುಗಿಸಿ ಇಂದು ಹೊರಬಂದಿದೆ. ಶಿವಾಜಿನಗರ ಭಾಗದಲ್ಲಿ ಭೂಮಿಯೊಳಗೆ ಸುರಂಗ ಮಾರ್ಗ ಕೊರೆಯುವುದು ದೊಡ್ಡ ಸವಾಲಾಗಿತ್ತು, ಸಡಿಲ ಮಣ್ಣು ಹಾಗೂ ಸಾಕಷ್ಟು ಬೋರ್ವೆಲ್ ಗಳು ಸಿಕ್ಕಿದ್ದವು, ಇದನ್ನೆಲ್ಲಾ ಬೇಧಿಸಿ ಊರ್ಜಾ ಯಶಸ್ವಿಯಾಗಿ ತನ್ನ ಕೆಲಸ ಮುಗಿಸಿ ಸುರಂಗ ಮಾರ್ಗ ದಿಂದ ಹೊರಬಂದಿರುವುದು ಸಂತಸ ಎಂದು ಮುಖ್ಯಮಂತ್ರಿ ಅವರು ಇದೇ ಸಂದರ್ಭದಲ್ಲಿ ಸಂತಸ ವ್ಯಕ್ತಪಡಿಸಿದರು.

ಮೆಟ್ರೋ ಫೇಸ್ 2 ನಲ್ಲಿ, ಗೊಟ್ಟಿಗೆರೆ ಯಿಂದ ನಾಗಾವರವರೆಗೆ 21 ಕಿ. ಮೀ ಉದ್ದ ಮೆಟ್ರೋ ಕಾಮಗಾರಿ ನಡೆಯುತ್ತಿದೆ, ಇದರಲ್ಲಿ ಸುಮಾರು 13 ಕಿ. ಮೀ ನಷ್ಟು ಸುರಂಗ ಮಾರ್ಗ ಕಾಮಗಾರಿ ಮಾಡಲಾಗುತ್ತಿದೆ, ಇದಕ್ಕಾಗಿ 9 ಟಿಬಿಮ್ (ಟನಲ್ ಬೋರಿಂಗ್ ಮೆಷಿನ್)ಗಳು ಕೆಲಸ ನಿರ್ವಹಿಸುತ್ತಿವೆ, ಈ ಕಾಮಗಾರಿಗಳನ್ನು ನಿಗಧಿತ ಸಮಯದೊಳಗೆ ಮುಗಿಸಬೇಕೆಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಅವರು ತಾಕೀತು ಮಾಡಿದರು.
ಇದೊಂದು ಮೈಲಿಗೈಲ್ಲು, ಮೆಟ್ರೋ ಬೆಂಗಳೂರು ಜನರ ಬಹುನಿರೀಕ್ಷಿತ ಯೋಜನೆಯಾಗಿದೆ,ಇದನ್ನು ರಾಜ್ಯ ಸರ್ಕಾರ ಸಮಪೂರ್ಣ ಸಹಕಾರ ನೀಡಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಇವತ್ತು ಬಿಎಂಆರ್ ಸಿಎಲ್ ಗೆ ಖುಷಿಯ ದಿನ, ಆರ್ ವಿ ರಸ್ತೆ – ಬೊಮ್ಮಸಂದ್ರ ಹಾಗೂ ಡೈರಿ ಸರ್ಕಲ್ , ಕಂಟೋನ್ಮೆಂಟ್ ಮಾರ್ಗ ಸವಾಲಿನ ಸುರಂಗ ಮಾರ್ಗವಾಗಿದ್ದು, ನಿತ್ಯ 9 ಟಿಬಿಎಂ ಗಳಿಂದ ಮೂರೂವರೆ ಕಿಲೋ ಮೀಟರ್ ಸುರಂಗ ಕೊರೆಯುತ್ತವೆ ಎಂದು ಮೆಟ್ರೋ ನಿಗಮ ಎಂಡಿ ಅಂಜುಂ ಫರ್ವೇಜ್ ತಿಳಿಸಿದರು.
ಮೆಟ್ರೊ ಟಾರ್ಗೆಟ್ ಗಿಂತ ಒಂದು ವರ್ಷ ಮೊದಲೆ ಕೆಲಸ ಮುಗಿಸಲು ಪ್ರಯತ್ನ ಪಡುತ್ತಿದ್ದೇವೆ, ಮರ ಕಡಿಯುವ ಸಂಬಂಧ ಹೈಕೋರ್ಟ್ ಆದೇಶವಾಗಿದೆ, ಮರಗಳ ತೆರವು ಮಾಡಿ ಒಂದು ಮರಕ್ಕೆ 10 ಸಸಿ ನೆಡುವಂತೆ ಆದೇಶವಿದೆ, ಇದರಂತೆ ನಡೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
2025 ಕ್ಕೆ ಏರ್ ಪೋರ್ಟ್ ಮೆಟ್ರೋ ಮಾರ್ಗ ಪೂರ್ಣಗೊಳ್ಳಲಿದೆ, ಕಂಟೋನ್ಮೆಂಟ್ ನಿಂದ ಟ್ಯಾನರಿ ರಸ್ತೆವರೆಗೆ ವಿಂದ್ಯಾ ಯಂತ್ರ ಸುರಂಗ ಕೊರೆಯುತ್ತಿದೆ, 20 ದಿನಗಳ ಬಳಿಕ ವಿಂದ್ಯಾ ಟಿಬಿಎಂ ಕೂಡ ಬ್ರೇಕ್ ಥ್ರೂ ಆಗಲಿದೆ ಎಂದು ವಿವರಿಸಿದರು.