ಜಂಟಿ ಸದನವನ್ನುದ್ದೇಶಿಸಿ ಲೋಕಸಭೆ ಸ್ಪೀಕರ್ ಭಾಷಣ : ಸಂವಿಧಾನ ವಿರೋಧಿ ಕ್ರಮ ಕಾಂಗ್ರೆಸ್ ಟೀಕೆ

ಬೆಂಗಳೂರು : ನಾಳೆ ಎರಡು ಸದನವನ್ನು ಉದ್ದೇಶಿಸಿ ಲೋಕಸಭೆ ಸ್ವೀಕರ್ ಓಂ ಬಿರ್ಲಾ ಅವರು ಮಾತನಾಡಲಿದ್ದಾರೆ. ಇದೊಂದು ಹೊಸ ಸಂಪ್ರದಾಯವನ್ನು ಹುಟ್ಟುಹಾಕಲು ಈ ಸರ್ಕಾರ ಹೊರಟಿದೆ, ನಮ್ಮ ಪಕ್ಷ ಇದನ್ನು ಬಹಿಷ್ಕರಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕಾರ್ಯಕ್ರಮಕ್ಕೆ ಆಹ್ವಾನ ಪತ್ರಿಕೆ ಕೂಡ ಮುದ್ರಿಸಲಾಗಿದೆ, ಆರು ತಿಂಗಳ ನಂತರ ವಿಧಾನ ಸಭೆ ಕರೆಯಲಾಗಿದೆ, ಜನಸಾಮಾನ್ಯರ ಸಮಸ್ಯೆ ಚರ್ಚೆಯಾಗಬೇಕು, ಅದನ್ನು ಬಿಟ್ಟು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ನಾಲ್ಕು ವಾರ ಕಲಾಪ ನಡೆಸೋಕೆ ಮನವಿ ಮಾಡಿದ್ದೇವು, ಬಿಎಸಿ ‌ಸಭೆಯಲ್ಲಿ ಹೇಳಿದ್ದೆವು, ಕನಿಷ್ಟ ಒಂದು ವಾರ ಕಲಾಪ ವಿಸ್ತರಣೆಗೆ ಕೇಳಿದ್ದೇವು, ಸರ್ಕಾರ ಒಪ್ತಿಲ್ಲ ನಾನೇನು ಮಾಡ್ಲಿ ಅಂತಾರೆ, ಸ್ಪೀಕರ್ ಕಾಗೇರಿ, ಇಂತಹ ಪರಿಸ್ಥಿತಿಯಲ್ಲಿ ಜನರ ಸಮಸ್ಯೆಗಳನ್ನು ಎಲ್ಲಿ ಚರ್ಚಿಸೋದು ಎಂದು ಪ್ರಶ್ನಿಸಿದ್ದಾರೆ.

ನಾಳಿನ ಜಂಟಿ ಅಧಿವೇಶನ ಮಾಡ್ತಾರೆ, ಈವಿಚಾರ ಬಿಎಸಿಯಲ್ಲೂ ಚರ್ಚೆಯಾಗಿಲ್ಲ, ಕೌನ್ಸಿಲ್ ನಲ್ಲೂ ಚರ್ಚಿಸಿಲ್ಲ, ಲೋಕಸಭೆ ಸ್ಪೀಕರ್ ಜಂಟಿ ಸದನ ನಡೆಸೋಕೆ ಬರಲ್ಲ, ನನ್ನ ರಾಜಕೀಯದಲ್ಲೇ ನೋಡಿಲ್ಲ, ಇದು ಸಂಪ್ರದಾಯಕ್ಕೆ ವಿರೋಧವಾಗಿದೆ, ರಾಜ್ಯಪಾಲರು, ರಾಷ್ಟ್ರಪತಿಗಳಿಗೆ ಮಾತ್ರ ಅವಕಾಶವಿದೆ, ಇದೇ ಕಾರ್ಯಕ್ರಮವನ್ನು ಬ್ಯಾಂಕ್ವೆಟ್ ಹಾಲ್ ನಲ್ಲಿ ಮಾಡಿ ಎಂದೆವು, ಅದಕ್ಕೂ ಅವರು ತಯಾರಿಲ್ಲ, ವಿಧಾನಸಭೆಯಲ್ಲಿ ನಡೆಸೋಕೆ ಬರಲ್ಲ ಎಂದು ಆರೋಪಿಸಿದರು.

ಡಿ ಕೆ ಶಿವಕುಮಾರ್ ಆಕ್ರೋಶ

ನಾಳೆ ವಿಧಾನಸೌಧದಲ್ಲಿ ಇತಿಹಾಸ ಸೃಷ್ಟಿ ‌ಮಾಡೋದ್ದಕ್ಕೆ ರಾಜ್ಯ ಸರ್ಕಾರ ಹೊರಟಿದೆ, ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಈ ಕಾರ್ಯಕ್ರಮವನ್ನು ಸರ್ಕಾರ ಮಾಡ್ತಿದೆ, ಪಾರ್ಲಿಮೆಂಟ್ ವ್ಯವಸ್ಥೆಯಲ್ಲಿ ಇದಕ್ಕೆ ಅವಕಾಶ ಇಲ್ಲ ದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ವಿರೋಧ ಪಕ್ಷದ ನಾಯಕರಿಗೆ ಇದುವರೆಗೂ ಮಾಹಿತಿ ನೀಡಿರಲಿಲ್ಲ, ನಾವು ವಿಧಾನಸಭೆಯಲ್ಲಿ ಜಂಟಿ ಅಧಿವೇಶನ ‌ಮಾಡಬೇಕು ಅಂತ ಸಿಎಂ ಪಟ್ಟು ಹಿಡಿದಿದ್ದಾರೆ, ಆದರೂ ಈ ರೀತಿಯ ಕೆಟ್ಟ ಪದ್ದತಿಗೆ ಮುಂದಾಗುತ್ತಿದ್ದಾರೆ. ಇದಕ್ಕೆ ವಿಧಾನಸಭೆ ಬಳಸಿಕೊಳ್ಳುವುದು ಸರಿಯಲ್ಲ, ನಾವೆಲ್ಲ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತೇವೆ ಎಂದು ತಿಳಿಸಿದರು.

More News

You cannot copy content of this page