ಸಿಎಂ ಜಗನ್ ಮೋಹನ್ ರೆಡ್ಡಿ ಅವರಿಗೆ ಧನ್ಯವಾದ ಅರ್ಪಿಸಿದ ಶಾಸಕ ಎಸ್ ಆರ್ ವಿಶ್ವನಾಥ್

ಸಿಎಂ ಜಗನ್ ಮೋಹನ್ ರೆಡ್ಡಿ ಅವರಿಗೆ ಧನ್ಯವಾದ ಅರ್ಪಿಸಿದ ಶಾಸಕ ಎಸ್ ಆರ್ ವಿಶ್ವನಾಥ್
ಹೈದ್ರಾಬಾದ್ : ಬಿಡಿಎ ಅಧ್ಯಕ್ಷ, ಶಾಸಕ ಎಸ್.ಆರ್.ವಿಶ್ವನಾಥ್ ಅವರು ಹೈದರಾಬಾದ್ ನಲ್ಲಿ ಇಂದು ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರನ್ನು ಭೇಟಿ ಮಾಡಿದರು.
ಈ ಸಂದರ್ಭದಲ್ಲಿ ಅವರು, ತಮ್ಮನ್ನು ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರನ್ನಾಗಿ ನೇಮಕ ಮಾಡಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು.
ಬೆಳ್ಳಿಯ ಗದೆಯನ್ನು ಜಗನ್ ಅವರಿಗೆ ನೀಡಿ, ಸನ್ಮಾನ ಮಾಡಿ, ಧನ್ಯವಾದ ಅರ್ಪಿಸಿದರು. ಹಾಗೆಯೇ ಕೆಲಹೊತ್ತು ತಿರುಪತಿ – ತಿರುಮಲ ಸಂಬಂಧ ಚರ್ಚೆ ನಡೆಸಿದರು.

More News

You cannot copy content of this page