ಬೆಂಗಳೂರು :ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಲು ಶಾಸಕಾಂಗ ಮಾತ್ರವಲ್ಲ,ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾರಂಗವು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯ ಇದೆ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಪಾದಿ ಸಿದ್ದಾರೆ.
ವಿಧಾನಸಭೆಯಲ್ಲಿ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಪ್ರಯುಕ್ತ ಪ್ರಜಾಪ್ರಭುತ್ವ ಸಂಸದೀಯ ಮೌಲ್ಯಗಳ ರಕ್ಷಣೆ ಕುರಿತು ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಮಾತನಾ ಡಿದ ಅವರು,ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುವುದು ಕೇವಲ ಶಾಸಕಾಂಗ ಮಾತ್ರ ಎಂಬ ಭಾವನೆ ಇದೆ.ಪ್ರತಿ ಕ್ಷೇತ್ರದ ಕರ್ತವ್ಯವೂ ಇದೆ.ಕಾರ್ಯಾಂಗ,ನ್ಯಾಯಾಂಗ ಮತ್ತು ಪತ್ರಿಕಾ ರಂಗವು ಸಹ ಈ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.ಕಾರ್ಯಾಂಗದಲ್ಲಿ ಕೆಲ ಘಟನೆಗಳಿಂದಾಗುತ್ತಿರುವ ಶಿಥಿಲತೆಯನ್ನು ಗಮ ನಿಸಿದರೆ ಆತಂಕವಾಗುತ್ತದೆ.ನ್ಯಾಯಾಂಗವು ಯಾವ ಹಂತ ತಲುಪಿದೆ ಎಂಬುದು ಎಲ್ಲರಿಗೂ ಗೊತ್ತಿದೆ.ಮಾಧ್ಯಮ ಕ್ಷೇತ್ರದ ಬಗ್ಗೆ ಯೂ ಜನತೆ ಹೇಗೆ ಮಾತನಾಡಿಕೊಳ್ಳುತ್ತಿದ್ದಾರೆ ಎಂಬುದು ಸಹ ತಿಳಿದಿದೆ.ಹೀಗಾಗಿ ಆದರ್ಶಯುಳ್ಳ ಸೇವೆ ಮಾಡಿದರೆ ಮಾತ್ರ ಬದಲಾವಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಪ್ರಪಂಚದಲ್ಲಿ ಪ್ರಜಾಪ್ರಭುತ್ವ,ಕಮ್ಯೂನಿಸ್ಟ್,ರಾಜ್ಯಾಡಳಿತ ನಡೆಸುತ್ತಿರುವ ದೇಶಗಳಿವೆ.ಈ ಪೈಕಿ ಪ್ರಜಾಪ್ರಭುತ್ವ ವ್ಯವಸ್ಥೆ ಅತ್ಯಂತ ಶ್ರೇಷ್ಠ ವ್ಯವಸ್ಥೆ ಎಂಬುದು ಹಲವು ದೇಶಗಳ ಅಭಿಪ್ರಾಯವು ಆಗಿದೆ.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಂಡರೆ ಅರಾಜಕತೆ ಸೃಷ್ಟಿಯಾಗಲಿದೆ. ಹೀಗಾಗಿ ಈ ವ್ಯವಸ್ಥೆಗೆ ಮತ್ತಷ್ಟು ಶಕ್ತಿ ಕೊಡುವ ಕೆಲಸವಾಗಬೇಕಿದೆ.ಪ್ರಜಾಪ್ರಭುತ್ವವು ಸಂಸದೀ ಯ ವ್ಯವಸ್ಥೆ ಎಂಬ ಬುನಾದಿ ಮೇಲೆ ನಿಂತಿದೆ.ರಾಜಕೀಯ ಪಕ್ಷಗಳ ಪಾತ್ರವು ಅತ್ಯಂತ ಮಹತ್ವ ದ್ದಾಗಿದೆ.ರಾಜಕೀಯ ಪಕ್ಷಗಳಿಲ್ಲದೆ ಪ್ರಜಾಪ್ರಭುತ್ವ ಅಸಾಧ್ಯ.ರಾಜಕೀಯ ಪಕ್ಷಗಳನ್ನು ಪ್ರಜಾಪ್ರಭು ತ್ವದ ಬೆನ್ನೆಲುಬು ಎಂದು ಪರಿಗಣಿಸಲಾಗುತ್ತದೆ ಎಂದು ಅವರು ಹೇಳಿದರು.

ಸದನದ ಉತ್ತಮ ಹೆಸರು ಮತ್ತು ಘನತೆಯನ್ನು ನಾವು ಕಾಪಾಡಬೇಕಾಗಿದೆ.ಹಲವು ಬಾರಿ ಚರ್ಚೆ ಗಳನ್ನು ಮಾಡುವ ನಾವು ಗಂಭೀ ರವಾದ ಜವಾಬ್ದಾರಿಯುತವಾದ ಸಂಸತ್ ಸದಸ್ಯರಂತೆ ವರ್ತಿಸ ದೆ,ಬೇಜವಾಬ್ದಾರಿಯುತ ವೃತ್ತಿಪರ ಚಳವಳಿಕಾರರಂತೆ ವರ್ತಿಸು ತ್ತಿದ್ದಾರೆ.ಸದನದ ಎಲ್ಲ ಸದಸ್ಯ ರು ಯಾವುದೇ ವರ್ಗಕ್ಕೆ ಸೇರಿರಲಿ ಈ ಬಗೆಯ ಕಳಂಕವನ್ನು ತಡೆಗಟ್ಟಬೇಕು.ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳು ಪ್ರಮುಖ ಪಾತ್ರಹಿಸುತ್ತವೆ.ಆಡಳಿತ ಮತ್ತು ಪ್ರತಿಪಕ್ಷ ಪ್ರಜಾ ಪ್ರಭುತ್ವವೆಂಬ ರಥದ ಎರಡು ಚಕ್ರ ಗಳು.ಅವು ಸರಿಯಾಗಿ ಚಲಿಸಿದಾಗ ಮಾತ್ರ ರಥ ಸರಿ ಯಾದ ದಿಕ್ಕಿನಲ್ಲಿ ಸಾಗಿ ಗುರಿ ತಲುಪುತ್ತದೆ.ಟೀಕಿಸುವ ಮಾತ್ರವಲ್ಲ,ಪಕ್ಷ,ಸಿದ್ಧಾಂ ತ ವನ್ನೂ ಮೀರಿ ಒಳಿತ ನ್ನು ಮೆಚ್ಚುವ ಪ್ರಬುದ್ಧತೆ ರಾಜಕಾರಣದ ಈ ಹೊತ್ತಿನ ಅಗತ್ಯ ಎಂಬುದನ್ನು ಹಲವು ನಾಯಕರು ತೋರಿಸಿಕೊಟ್ಟಿದ್ದಾರೆ ಎಂದರು.