ಬೆಂಗಳೂರು : ಆಸ್ತಿ ತೆರಿಗೆ ಕಟ್ಟದೆ ಬಾಕಿ ಉಳಿಸಿಕೊಂಡಿರುವ ಹಿನ್ನಲೆಯಲ್ಲಿ ಬೆಂಗಳೂರು ನಗರದ ಪ್ರತಿಷ್ಠಿತ ಮಂತ್ರಿ ಮಾಲ್ ಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಹಾಕಲು ಮುಂದಾದ ಘಟನೆ ಇಂದು ನಡೆದಿದೆ.

ತೆರಿಗೆ ಪಾವತಿಗಾಗಿ ಅನೇಕ ಬಾರಿ ನೋಟಿಸ್ ನೀಡಿದ್ರು ಕೂಡ ಮಂತ್ರಿ ಮಾಲ್ ನ ಆಡಳಿತ ಮಂಡಳಿಯವರು ತೆರಿಗೆಯನ್ನು ಪಾವತಿಸದೇ ಇದ್ದುದ್ದರಿಂದ ಬಿಬಿಎಂಪಿ ಅಧಿಕಾರಿಗಳು ಈನಿರ್ಧಾರ ಕೈಗೊಂಡಿದ್ದಾರೆ.
ಮಂತ್ರಿ ಮಾಲ್ 2017 ರಿಂದ ಒಟ್ಟು 39 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ತೆರಿಗೆ ಪಾವತಿಸುವಂತೆ ಬಿಬಿಎಂಪಿ ಬಿಬಿಎಂಪಿ ಪಶ್ಚಿಮ ವಲಯ ಜಂಟಿ ಆಯುಕ್ತ ಅವರು ನೋಟಿಸ್ ನೀಡಿದ್ದರು. ಹಲವು ಬಾರಿ ನೋಟಿಸ್ ನೀಡಿದ್ದರೂ ತೆರಿಗೆ ಪಾವತಿ ಮಾಡದೇ ಇದ್ದುದ್ದರಿಂದ ಈನಿರ್ಧಾರ ಕೈಗೊಂಡಿದೆ.

ಈ ವಿಚಾರವನ್ನು ತಿಳಿದ ಮಂತ್ರಿ ಮಾಲ್ ಆಡಳಿತ ಮಂಡಳಿ ಸದ್ಯಕ್ಕೆ ಐದು ಕೋಟಿ ರೂಪಾಯಿ ಡಿಡಿ ಕೊಟ್ಟು ಉಳಿದ ತೆರಿಗೆ ಹಣಕ್ಕಾಗಿ ಸ್ವಲ್ಪ ಕಾಲಾವಕಾಶ ಕೋರಿದೆ. ಹೀಗಾಗಿ ಮಾಲ್ ನ ಬಾಗಿಲು ತೆರೆಯಲು ಅಧಿಕಾರಿಗಳು ಅವಕಾಶ ನೀಡಿದ್ದಾರೆ.
ಮುಂಬರುವ ಅಕ್ಟೋಬರ್ ಒಳಗಾಗಿ ಉಳಿಕೆ ಹಣವನ್ನು ಕಟ್ಟುವುದಾಗಿ ತಿಳಿಸಿದ್ದರಿಂದ ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಶಿವಸ್ವಾಮಿ ಹಾಗೂ ಬಿಬಿಎಂಪಿ ಅಧಿಕಾರಿಗಳು ವಾಪಾಸ್ಸಾಗಿದ್ದಾರೆ.