ಡ್ರಗ್ಸ್ ಕೇಸ್ : ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನ

ಮುಂಬೈ: ಸೂಪರ್ ಸ್ಟಾರ್, ಬಾಲಿವುಡ್ ಕಾ ಬಾದ್ ಷಾ  ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ನನ್ನು ಮಾದಕ ದ್ರವ್ಯ ನಿಯಂತ್ರಣ ಪ್ರಕರಣದಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಎನ್ ಸಿ ಬಿ ಸೂಪರಿಟೆಂಡೆಂಟ್ ವಿಶ್ವ ವಿಜಯ್ ಸಿಂಗ್ ತನಿಖೆಯನ್ನು ಕೈಗೊಂಡಿದ್ದಾರೆ.

ಐಷಾರಾಮಿ ಹಡಗಿನಲ್ಲಿ ತೆರಳುತ್ತಿದ್ದಾಗ, ಮಾಹಿತಿ ಪಡೆದ  ಮುಂಬೈ ಮಾದಕ ದ್ರವ್ಯ ನಿಯಂತ್ರಣ ವಿಭಾಗದ ಪೊಲೀಸರು ಆರ್ಯನ್ ನನ್ನು ಬಂಧಿಸಿದ್ದರು. ಬಂಧನ ಪತ್ರದ ಪ್ರಕಾರ 13 ಗ್ರಾಂ ಕೊಕೇನ್, 5 ಗ್ರಾಂ ಎಂಡಿ, 21 ಗ್ರಾಂ ಚರಸ್ ಮತ್ತು 22 ಮಾತ್ರೆಗಳ ಎಂಡಿಎಂಎ ಮತ್ತು 1.33 ಲಕ್ಷ ನಗದು ವಿಚಾರವಾಗಿ ಬಂಧಿಸಲಾಗಿದೆ. ನಮ್ಮ ಮೂಲಗಳ ಪ್ರಕಾರ ಆರೋಪಿಯೊಬ್ಬನು ಕಣ್ಣಿನ ಲೆನ್ಸ್ ಕವರ್‌ನಲ್ಲಿ ಅಡಗಿಸಿಟ್ಟಿದ್ದ ನಿಷೇಧಿತ ವಸ್ತುವನ್ನು (ಕೊಕೇನ್) ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ ಎಂದು ತಿಳಿದಿದೆ.

ಭಾನುವಾರ ರಾತ್ರಿ ಆರ್ಯನ್ ಖಾನ್ ಮತ್ತು ಇತರ ಏಳು ಜನರು ಪಾರ್ಟಿಯಲ್ಲಿ ತೊಡಗಿದ್ದಾಗ ದಾಳಿ ನಡೆಸಿದ ಪೊಲೀಸರು (ಎನ್‌ಸಿಬಿ) ಅವರನ್ನು ಬಂಧಿಸಿದೆ. ಆರ್ಯನ್ ಖಾನ್ ಹೊರತುಪಡಿಸಿ, ಮುನ್ಮುನ್ ಧಮೇಚಾ, ನೂಪುರ್ ಸಾರಿಕಾ, ಇಸ್ಮೀತ್ ಸಿಂಗ್, ಮೋಹಕ್ ಜಸ್ವಾಲ್, ವಿಕ್ರಾಂತ್ ಚೋಕರ್, ಗೋಮಿತ್ ಚೋಪ್ರಾ ಮತ್ತು ಅರ್ಬಾಜ್ ಮರ್ಚೆಂಟ್ ಅವರನ್ನು ಎನ್ ಸಿ ಬಿ ಪೊಲೀಸರು ಬಂಧಿಸಿದ್ದಾರೆ

More News

You cannot copy content of this page