ಪಶ್ಚಿಮಬಂಗಾಳ : ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭವಾನಿಪುರ ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ, ಕಳೆದ ಹಲವಾರು ತಿಂಗಳಿಂದ ಇದ್ದ ಅನಿಶ್ಚಿತತೆಗೆ ಹಾಗೂ ದೇಶದ ಗಮನ ಸೆಳೆದಿದ್ದ ಕುತೂಹಲಕ್ಕೆ ಫುಲ್ ಸ್ಟಾಪ್ ಹಾಕಿದ್ದಾರೆ.
ತೃಣಮೂಲ ಕಾಂಗ್ರೆಸ್ ನ(ಟಿಎಂಸಿ) ಅಭ್ಯರ್ಥಿ ಮಮತಾ ಬ್ಯಾನರ್ಜಿ ಅವರು ಬಿಜೆಪಿಯ ಅಭ್ಯರ್ಥಿ ಪ್ರಿಯಾಂಕಾ ಟೆಬ್ರೂವಾಲ್ ವಿರುದ್ಧ 58ಸಾವಿರಕ್ಕೂ ಹೆಚ್ಚುಮತಗಳಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಇಂದು ಬೆಳಗ್ಗ ಮತಏಣಿಕೆ ಆರಂಭವಾದಾಗಿನಿಂದ ಮಮತಾ ಮುನ್ನೆಡೆಯನ್ನು ಕಾಯ್ದುಕೊಂಡಿದ್ದರು. ಕೊನೆಯಲ್ಲಿ ಅವರು ಭವಾನಿಪುರದಿಂದ ಭರ್ಜಿರಿ ಗೆಲುವು ಸಾಧಿಸುವುದರ ಮೂಲಕ ಎದುರಾಳಿಗಳಿಗೆ ಸರಿಯಾದ ಉತ್ತರ ನೀಡಿದ್ದಾರೆ. ಇದರಿಂದ ಅವರು ತಮ್ಮ ಸಿಎಂ ಕುರ್ಚಿಯನ್ನು ಉಳಿಸಿಕೊಂಡಿದ್ದಾರೆ.
ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ನಂದಿಗ್ರಾಮದಿಂದ ಮಮತಾ ಬ್ಯಾನರ್ಜಿ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದರು. ಟಿಎಂಸಿಯಲ್ಲಿಯೇ ಇದ್ದು ಬಿಜೆಪಿಗೆ ಸೇರಿದ್ದ ಸುವೇಂದು ಅಧಿಕಾರಿ ಮುಂದೆ ಮಮತಾ ಪರಾಭವಗೊಂಡಿದ್ದರು.