ನವದೆಹಲಿ : ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಮತ್ತೆ ಗ್ಯಾಸ್ ಏರಿಕೆಯಿಂದ ಗಾಯದ ಮೇಲೆ ಬರೆ ಎಳೆದಿದೆ. ಎಲ್ ಪಿ ಜಿ ಸಿಲಿಂಡರ್ ದರದಲ್ಲಿ ಮತ್ತೆ 15 ರೂಪಾಯಿಯನ್ನು ಹೆಚ್ಚಳ ಮಾಡಿದೆ.
ದೇಶದಾದ್ಯಂತ ಈ ಹೊಸ ಆದೇಶ ಇಂದಿನಿಂದಲೇ ಜಾರಿಯಾಗಲಿದೆ. ಪೆಟ್ರೋಲಿಯಂ ಕಂಪನಿಗಳು ದೇಶಿಯ ಎಲ್ ಪಿ ಜಿ ಸಿಲಿಂಡರ್ ಹೆಚ್ಚಳ ಮಾಡುವುದರಿಂದ ಜನಸಾಮಾನ್ಯರಿಗೆ ಗ್ಯಾಸ್ ಕೈಗಟುಕದ ದರಕ್ಕೆ ತಲುಪುತ್ತಿದೆ. ದೆಹಲಿಯಲ್ಲಿ ಸಬ್ಸಿಡಿ ರಹಿತ 14.2 ಕೆ ಜಿ ಸಿಲಿಂಡರ್ ಬೆಲೆ 899.50 ರೂಪಾಯಿ ಆಗಿದೆ. ಕೋಲ್ಕತ್ತಾ 926 ರೂಪಾಯಿ, ಮುಂಬೈ 899.50ರೂಪಾಯಿ, ಚನ್ನೈ 915.50 ರೂಪಾಯಿ, ಬೆಂಗಳೂರು 902 ರೂಪಾಯಿ ಗೆ ತಲುಪಿದೆ
ಈಗಾಗಲೇ ತೈಲ ಬೆಲೆ ಏರಿಕೆಯಿಂದ ಜನತೆ ಕಂಗೆಟ್ಟಿದೆ. ಇನ್ನು ಗ್ಯಾಸ್ ಬೆಲೆ ಏರಿಕೆಯಿಂದ ಇನ್ನಷ್ಟು ಸಂಕಷ್ಟಕ್ಕೆ ಅವರನ್ನು ದೂಡಿದಂತಾಗಿದೆ. ಜುಲೈ ತಿಂಗಳಲ್ಲಿ 25ರೂಪಾಯಿ, ಅಗಸ್ಟ್ ತಿಂಗಳಲ್ಲಿ 25 ಮತ್ತು ಸೆಪ್ಟಂಬರ್ ತಿಂಗಳಲ್ಲಿ 25 ರೂಪಾಯಿ ಏರಿಕೆ ಕಂಡಿತ್ತು. ಈಗ ಅಕ್ಟೋಬರ್ ತಿಂಗಳಲ್ಲಿ 15 ರೂಪಾಯಿ ಏರಿಕೆ ಕಂಡಿದೆ.
ಪೆಟ್ರೋಲ್, ಡೀಸಲ್ ಬೆಲೆ ಏರಿಕೆ
ಒಂದೆಡೆ ಗ್ಯಾಸ್ ಬೆಲೆ ಏರಿಕೆ ಬಿಸಿ ಜನಸಾಮಾನ್ಯರಿಗೆ ತಟ್ಟಿದರೆ, ಇನ್ನೊಂದೆಡೆ ಪೆಟ್ರೋಲ್, ಡೀಸಲ್ ಬೆಲೆನೂ ಇಂದು ಏರಿಕೆ ಕಂಡಿದೆ. ಪೆಟ್ರೋಲ್ ಲೀಟರ್ ವೊಂದಕ್ಕೆ 30 ಪೈಸೆ ಹಾಗೂ ಡೀಸಲ್ ಲೀಟರ್ ವೊಂದಕ್ಕೆ 35 ಪೈಸೆ ಏರಿಕೆ ಕಂಡಿದೆ.

ಕಳೆದ ಎರಡು ವಾರಗಳಲ್ಲಿ ಸತತವಾಗಿ ಪೆಟ್ರೋಲ್, ಡೀಸಲ್ ಬೆಲೆ ಏರಿಕೆ ಕಂಡಿದ್ದು, ಬೆಂಗಳೂರಿನಲ್ಲಿ ಪೆಟ್ರೋಲ್ 106.52 ರೂಪಾಯಿಗಳಾದರೆ, ಡೀಸಲ್ 96.66 ರೂಪಾಯಿಯಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಗ್ಯಾಸ್, ಪೆಟ್ರೋಲ್ ಮತ್ತು ಡೀಸಲ್ ಬೆಲೆ ಏರಿಕೆಯಿಂದ ಜನಸಾಮಾನ್ಯರು ಬಳಸುತ್ತಿರುವ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಪ್ರತಿದಿನ ಹರಸಾಹಸ ಪಡುವಂತಾಗಿದೆ.