ಒಳನುಸುಳುವಿಕೆವಿಕೆ ಮಟ್ಟಹಾಕಲು ಸೇನಾಪಡೆಗಳು ಸಮರ್ಥವಾಗಿವೆ – ಜನರಲ್ ಎಂ ಎಂ ನರವಣೆ

ಒಳನುಸುಳುವಿಕೆವಿಕೆ ಮಟ್ಟಹಾಕಲು ಸೇನಾಪಡೆಗಳು ಸಮರ್ಥವಾಗಿವೆ – ಜನರಲ್ ಎಂ ಎಂ ನರವಣೆ
ನವದೆಹಲಿ : ಅಫ್ಗಾನಿಸ್ತಾನದಲ್ಲಿ ಸಹಜ ಸ್ಥಿತಿ ಮರಳಿದ ನಂತರ ಉಗ್ರರು ಜಮ್ಮು- ಕಾಶ್ಮೀರಕ್ಕೆ ನುಸುಳುವ ಸಾಧ್ಯತೆಗಳಿವೆ ಎಂದು ಸೇನಾಪಡೆ ಮುಖ್ಯಸ್ಥ ಜನರಲ್ ಎಂ ಎಂ ನರವಣೆ ಅಭಿಪ್ರಾಯಪಟ್ಟಿದ್ದಾರೆ.
ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಅಲ್ಲಿ ತಾಲಿಬಾನ್ ಆಡಳಿತ ಇತ್ತು. ಅಂದುಕೂಡ ಇಂತಹ ಘಟನೆಗಳು ನಡೆದಿದ್ದು, ಅಫ್ಗನ್ ಮೂಲದ ಉಗ್ರರು ದೇಶದೊಳಗೆ ನುಸುಳುವ ಸಾಧ್ಯತೆಗಳಿವೆ ಎಂದರು.
ಇಂಡಿಯಾ ಟುಡೆ ನಿಯತಕಾಲಿಕ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂತಹ ಯಾವುದೇ ಸಮಸ್ಯೆಗಳನ್ನು ಎದುರಿಸಲು ಭಾರತೀಯ ಸೇನಾ ಪಡೆಗಳು ಸನ್ನದ್ದ ಸ್ಥಿತಿಯಲ್ಲಿವೆ ಎಂದು ಸ್ಪಷ್ಟಪಡಿಸಿದರು. ಉಗ್ರರಮೇಲೆ ನಿಗಾ ಇಡುವ ನೂತನ ವ್ಯವಸ್ಥೆ ನಮ್ಮಲ್ಲಿವೆ, ಆದ್ದರಿಂದ ಒಳನುಸುಳುವಿಕೆಯನ್ನು ಮಟ್ಟಹಾಕಲು ನಾವು ಸನ್ನದ್ದರಾಗಿದ್ದೇವೆ ಎಂದು ತಿಳಿಸಿದರು.
ಕಾಶ್ಮೀರದಲ್ಲಿ ನಡೆಯುತ್ತಿರುವ ನಾಗರಿಕರ ಹತ್ಯೆ ಮತ್ತು ಅಫ್ಗಾನಿಸ್ತಾನವನ್ನುತಾಲಿಬಾನಿಯರು ವಶಪಡಿಸಿಕೊಂಡಿರುವುದಕ್ಕೆ ಸಂಬಂಧವಿದೆಯಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ನರವಣೆ ಅವರು, ಸಂಬಂಧ ಇಲ್ಲ ಎಂದು ಹೇಳಲಾಗದು ಎಂದು ತಿಳಿಸಿದರು. ಗಡಿಯಲ್ಲಿ ಚೀನಾದ ಎಲ್ಲಾ ಚಟುವಟಿಕೆಗಳ ಮೇಲೆ ನಿಗಾ ವಹಿಸಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

More News

You cannot copy content of this page