ಕೆಆರ್‌ಎಸ್ ಹಿನ್ನೀರಿನಲ್ಲಿ ಜಲಕ್ರೀಡೆಗೆ ಚಾಲನೆ : ಸಚಿವರಿಂದ ಮೋಟಾರ್ ಬೋಟ್ ಓಡಿಸಿ ಉದ್ಘಾಟನೆ

ಮಂಡ್ಯ: ಶ್ರೀರಂಗಪಟ್ಟಣ ದಸರಾ ಹಬ್ಬದ ಆಚರಣೆ ಅಂಗವಾಗಿ KRS ಹಿನ್ನೀರಿನಲ್ಲಿ ಯುವಜನ ಕ್ರೀಡಾ ಸಚಿವ ನಾರಾಯಣಗೌಡ ಜಲಕ್ರೀಡೆಗೆ ಚಾಲನೆ ನೀಡಿದರು.
KRS ಡ್ಯಾಂ ಸಮೀಪ ಹೊಸಕನ್ನಂಬಾಡಿ ಗ್ರಾಮದ ವೇಣುಗೋಪಾಲಸ್ವಾಮಿ ದೇವಸ್ಥಾನದ ಬಳಿಯ ಕೆಆರ್‌ಎಸ್ ಹಿನ್ನೀರಿನಲ್ಲಿ ಜಲಕ್ರೀಡೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಹಾಗೂ ಯುವಜನ ಕ್ರೀಡಾ ಸಚಿವ ನಾರಾಯಣಗೌಡ ಅವರು ಸ್ವತಃ ಜೆಟ್‌ ಸ್ಕಿ ಮೋಟಾರ್ ಬೋಟ್ ಓಡಿಸುವ ಮೂಲಕ ಚಾಲನೆ ನೀಡಿದರು.


ದಸರಾ ಸಂಧರ್ಭದಲ್ಲಿ ಪ್ರವಾಸಿಗರ ಆಕರ್ಷಣೆಗೆಂದು ಜಲಕ್ರೀಡೆ ಉದ್ಘಾಟನೆ ಮಾಡಿದ್ದು, ಮಂಡ್ಯ ಹಾಗೂ ಮೈಸೂರು ಜಿಲ್ಲೆಯ ಜನತೆ ಕೋವಿಡ್ ಮಾರ್ಗಸೂಚಿ ಪಾಲಿಸಿ ಜಲಕ್ರೀಡೆಯನ್ನು ಯಶಸ್ವಿಗೊಳಿಸಿ ಎಂದು ಕರೆನೀಡಿದರು.


ದಸರಾ ಹಬ್ಬದ ಹಿನ್ನೆಲೆ ಯಲ್ಲಿ ಕೆಆರ್‌ಎಸ್ ಹಿನ್ನೀರಿನಲ್ಲಿ ಜಿಲ್ಲಾಡಳಿತ, ಶ್ರೀರಂಗಪಟ್ಟಣ ದಸರಾ ಸಮಿತಿ ಸಹಯೋಗದೊಂದಿಗೆ ಮಾಂಡವ್ಯ ವಾಟರ್ ಸ್ಪೋರ್ಟ್‌ನವರು ಪ್ರವಾಸಿಗರಿಗಾಗಿ ಜಲಕ್ರೀಡೆ ಆಯೋಜನೆ ಮಾಡಿದ್ದು, ಸ್ಪೀಡ್ ಬೋಟ್, ಜೆಟ್‌ಸ್ಕಿ, ಕಾಯಕ್, ರಾಫ್ಟಿಕ್ ಸೇರಿದಂತೆ ನಾಲ್ಕು ರೀತಿಯ ಜಲಕ್ರೀಡೆಗಳು‌ ಪ್ರವಾಸಿಗರ ಮನರಂಜಿಸಲಿವೆ.
ಈ ಕಾರ್ಯಕ್ರಮದಲ್ಲಿ ತಹಸೀಲ್ದಾರ್‌ಗಳಾದ ಪ್ರಮೋದ್‌ ಪಾಟೀಲ್‌, ಶಿವಮೂರ್ತಿ, ಬಿಜೆಪಿ ಮುಖಂಡ ಹೊಸ ಕನ್ನಂಬಾಡಿ ಸುರೇಶ್ ಮುಂತಾದವರು ಉಸ್ಥಿತರಿದ್ದರು.

More News

You cannot copy content of this page