ಮುಂಬೈ : ಮುಂಬೈನ ಡ್ರಗ್ ಪಾರ್ಟಿಗೆ ಸಂಬಂಧಿಸಿದಂತೆ ಬಾಲಿವುಡ್ ಬಾದ್ ಷಾ ಶಾರೂಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಬಂಧನ ಆಗಿದೆ. ಎನ್‌ಸಿಬಿ ಪೊಲೀಸರು ನಡೆಸಿದ ದಾಳಿಯಿಂದ ಆರ್ಯನ್ ಖಾನ್ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.
ಪ್ರಸ್ತುತ ಆರ್ಯನ್ ಖಾನ್‌ಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದು, ಆತ ಆರ್ಥರ್ ಜೈಲಿನಲ್ಲಿ ಬಂಧಿಯಾಗಿದ್ದಾನೆ. ಇನ್ನೊಂದೆಡೆ ಶಾರೂಖ್ ಖಾನ್ ಕುಟುಂಬಕ್ಕೆ ಬಾಲಿವುಡ್‌ನ ಹಲವು ನಟ-ನಟಿಯರು ಬೆಂಬಲ ವ್ಯಕ್ತಪಡಿಸಿದ್ದಾರೆ. ಆರ್ಯನ್ ಖಾನ್ ತಪ್ಪು ಮಾಡಿಲ್ಲ, ಆತನನ್ನು ಉದ್ದೇಶಪೂರ್ವಕವಾಗಿ ಡ್ರಗ್ ಕೇಸ್‌ನಲ್ಲಿ ಸಿಲುಕಿಸಲಾಗಿದೆ ಎಂಬ ಅಭಿಪ್ರಾಯವೂ ಕೇಳಿ ಬಂದಿದೆ.

ಅದಕ್ಕೆ ಪರ್ಯಾಯವಾಗಿ ಮಗ ಮತ್ತು ಅಪ್ಪನ ವಿರುದ್ಧ ಟೀಕೆಯೂ ಎದುರಾಗಿದೆ. ಮಗನಿಗೆ ಸರಿಯಾದ ಬುದ್ದಿ ಹೇಳಿಕೊಟ್ಟಿಲ್ಲ ಎಂದು ಶಾರೂಖ್ ವಿರುದ್ಧ ಕೆಲವರು ಮಾತನಾಡಿದ್ದಾರೆ. ಅದರಂತೆಯೇ ನಟಿ ಕಂಗನಾ ಕಿಡಿಕಾರಿದ್ದು, ಮಗನ ಪ್ರಕರಣದಲ್ಲಿ ಶಾರೂಖ್ ಖಾನ್ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ.
ಬಾಲಿವುಡ್ ನಟಿ ಕಂಗನಾ ರಣಾವತ್ ಸಹ ಪರೋಕ್ಷವಾಗಿ ಶಾರೂಖ್ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ. ವಿಶ್ವ ಖ್ಯಾತಿ ನಟ ಜಾಕಿ ಚಾನ್ ಮಗ ಈ ಹಿಂದೆ ಇದೇ ರೀತಿ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಕೊಂಡಾಗ, ಜಾಕಿ ಚಾನ್ ಅಭಿಮಾನಿಗಳ ಕ್ಷಮೆಯಾಚಿಸಿದ್ದರು. ಇದನ್ನು ಉದಾಹರಣೆಯಾಗಿ ನೀಡಿರುವ ಕಂಗನಾ ರಣಾವತ್, ಪರೋಕ್ಷವಾಗಿ ಶಾರೂಖ್ ಖಾನ್ ಕ್ಷಮೆ ಕೇಳುವಂತೆ ಸೂಚಿಸಿದ್ದಾರೆ.
2014ರಲ್ಲಿ ಜಾಕಿ ಚಾನ್ ಮಗ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾದಾಗ ಬಹಿರಂಗವಾಗಿ ಕ್ಷಮೆಯಾಚಿಸಿದ್ದರು. ನನಗೆ ಈ ಘಟನೆ ನಾಚಿಕೆ ಪಡುವಂತೆ ಮಾಡಿದೆ. ಇದು ನನ್ನ ಸೋಲು. ನಾನು ಯಾವುದೇ ಕಾರಣಕ್ಕೂ ನನ್ನ ಮಗನನ್ನು ಇದರಿಂದ ರಕ್ಷಿಸಲು ಪ್ರಯತ್ನಿಸುವುದಿಲ್ಲ. ನಂತರ ಆರು ತಿಂಗಳು ಕಾಲ ಜಾಕಿ ಚಾನ್ ಮಗ ಜೈಲಿನಲ್ಲಿದ್ದರು.

ಈ ಘಟನೆಯನ್ನ ನೆನಪು ಮಾಡಿದ ನಟಿ ಕಂಗನಾ ಮಗನ ವಿಚಾರದಲ್ಲಿ ಶಾರೂಖ್ ಖಾನ್ ಸಹ ಇದೇ ಕ್ರಮವನ್ನು ಅನುಸರಿಸಬೇಕು ಎನ್ನುವಂತೆ ಸುಳಿವು ಕೊಟ್ಟಿದ್ದಾರೆ.
ಇದಕ್ಕೂ ಮುಂಚೆ ಸಲ್ಮಾನ್ ಖಾನ್, ಹೃತಿಕ್ ರೋಷನ್, ಸುನಿಲ್ ಶೆಟ್ಟಿ, ಸುಸೇನ್ ಖಾನ್, ರವೀನಾ ಟಂಡನ್ ಸೇರಿದಂತೆ ಹಲವರು ಆರ್ಯನ್ ಖಾನ್ ಹಾಗೂ ಶಾರೂಖ್ ಖಾನ್ ಪರವಾಗಿ ನಿಲುವು ವ್ಯಕ್ತಪಡಿಸಿದ್ದರು. ಅಕ್ಟೋಬರ್ 2 ರಂದು ಕ್ರೂಸ್ ಮೇಲೆ ಎನ್ ಸಿ ಬಿ ಪೊಲೀಸರು ದಾಳಿ ನಡೆಸಿದ್ದರು.