ಬಿಎಸ್ ವೈ ಹಾಗೂ ಬಿವೈ ವಿಜಯೇಂದ್ರರ ಆಪ್ತರು ಹಾಗೂ ನೀರಾವರಿ ಗುತ್ತಿಗೆದಾರರ ಮೇಲಿನ ಐಟಿ ದಾಳಿ : 750ಕೋಟಿ ಅಘೋಷಿತ ಆದಾಯ ಪತ್ತೆ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಆಪ್ತ ಉಮೇಶ್, ಹಾಗೂ ಜಲಸಂಪನ್ಮೂಲ ಮತ್ತುಲೋಕೋಪಯೋಗಿ ಇಲಾಖೆಗಳ ಗುತ್ತಿಗೆದಾರರ ಮನೆ, ಕಚೇರಿಗಳಲ್ಲಿ ನಡೆಸಿದ ಶೋಧ ಕಾರ್ಯದಲ್ಲಿ ಒಟ್ಟು 750 ಕೋಟಿ ರೂಪಾಯಿಗಳಷ್ಟು ಅಷೋಘಿತ ಆದಾಯ ಪತ್ತೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ಬಿಎಸ್ ವೈ ಆಪ್ತ ಉಮೇಶ್ ಆಯನೂರು, ಬಿ ವೈ ವಿಜಯೇಂದ್ರ ಅವರ ಆಪ್ತ ಅರವಿಂದ್ ರಾಮಸ್ವಾಮಿ, ಗುತ್ತಿಗೆದಾರರಾದ ಡಿ ವೈ ಉಪ್ಪಾರ, ಸ್ಟಾರ್ ಚಂದ್ರು, ರಾಹುಲ್ ಎಂಟರ್ ಪ್ರೈಸಸ್, ಅಮೃತ್ ಕನ್ಸ್ಟ್ರಕ್ಸನ್ ಸೇರಿದಂತೆ ನಾಲ್ಕು ರಾಜ್ಯಗಳ ಒಟ್ಟು 47 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಅಪಾರ ಪ್ರಮಾಣ ಅಘೋಷಿತ ಹಣ, ಚಿನ್ನಾಭರಣ ಮತ್ತು ದಾಖಲೆಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ದಾಳಿಯ ವೇಳೆ ನೀರಾವರಿ ಮತ್ತು ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಹಲವಾರು ಟೆಂಡರ್ ಮತ್ತು ಹೆದ್ದಾರಿ ಯೋಜನೆಗಳ ಸಂಬಂಧ ದಾಖಲೆಪತ್ರಗಳು ಆದಾಯ ತೆರಿಗೆ ಇಲಾಖಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮೂವರು ಗುತ್ತಿಗೆದಾರರು 750 ಕೋಟಿ ರೂಪಾಯಿ ಆದಾಯವನ್ನು ಬಹಿರಂಗಪಡಿಸದೇ ಇರುವುದು ಪತ್ತೆಯಾಗಿದೆ. ನಕಲಿ ದಾಖಲೆ, ಬಿಲ್ಲುಗಳನ್ನು ಸೃಷ್ಠಿಸಿ ಆದಾಯ ತೆರಿಗೆಯನ್ನು ವಂಚಿಸಿರುವುದು ಪತ್ತೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.


ಇದರಲ್ಲಿ 487 ಕೋಟಿ ರೂಪಾಯಿ ಮೊತ್ತದ ಅಘೋಷಿತ ಆದಾಯ ಹೊಂದಿರುವುದಾಗಿ ಕಂಪನಿಗಳು ಒಪ್ಪಿಕೊಂಡಿವೆ. ಒಂದು ಸಮೂಹವು ಕಾರ್ಮಿಕರ ವೆಚ್ಚಗಳನ್ನು ಹೆಚ್ಚಾಗಿ ತೋರಿಸಿ 382 ಕೋಟಿ ರೂಪಾಯಿ ಆದಾಯವನ್ನು ಗೋಪ್ಯದಲ್ಲಿರಿಸಿದನ್ನು ಸಂಸ್ಥೆಗಳು ಒಪ್ಪಿಕೊಂಡಿವೆ ಎಂದು ತಿಳಿಸಿದೆ.
ಕೇವಲ ಕಾಗದದ ಮೇಲಷ್ಟೇ ಇರುವ ಕಂಪನಿಗಳಿಂದ ವ್ಯವಹಾರ ನಡೆಸಿ ಸುಮಾರು 105 ಕೋಟಿ ರೂಪಾಯಿನಷ್ಟು ಆದಾಯವನ್ನು ಗೋಪ್ಯದಲ್ಲಿರಿಸಿತ್ತು ಎಂದು ತನಿಖೆಯಿಂದಬಯಲಾಗಿದೆ.
ಕಾರ್ಮಿಕರ ವೇತನ ಪಾವತಿ ಹೆಸರಿನಲ್ಲಿ ನಕಲಿ ದಾಖಲೆ, ಸಾಮಾಗ್ರಿ ಖರೀದಿ ಮುಂತಾದವುಗಳಿಂದ ಆದಾಯವನ್ನು ಮುಚ್ಚಿಡಲಾಗಿತ್ತು. ಗುತ್ತಿಗೆ ಕೆಲಸವನ್ನೇ ಮಾಡ, ಆರ್ಥಿಕವಾಗಿ ಶಕ್ತರಲ್ಲದ ವ್ಯಕ್ತಿಗಳ ಹೆಸರಿನಲ್ಲಿ ಉಪಗುತ್ತಿಗೆ ಒಪ್ಪಂದಗಳನ್ನು ಮಾಡಿ ತೆರಿಗೆ ವಂಚಿಸಲಾಗುತ್ತಿತ್ತು. ಇಂತರ ಒಂದು ಕಂಪನಿ ಇಂತಹ 40 ಉಪಗುತ್ತಿಗೆ ಒಪ್ಪಂದಗಳನ್ನು ಮಾಡಿಕೊಂಡಿತ್ತು ಎಂದುತಿಳಿದಬಂದಿದೆ.
ದಾಳಿಯ ವೇಳೆ ಲೆಕ್ಕಪತ್ರಗಳಿಲ್ಲದ 4.69ಕೋಟಿ ನಗದು, 8.67ಕೋಟಿ ರೂಪಾಯಿ ಮೌಲ್ಯದ ಚಿನ್ನದ ಮತ್ತು ಬೆಳ್ಳಿಯ ಆಭರಣಗಳು, ಹಾಗೂ 29.83 ಲಕ್ಷರೂಪಾಯಿ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ದಾಖಲೆಗಳ ಆದಾಯದ ಮೇಲೆ ಕೆಲವರ ವಿಚಾರಣೆ ಮುಂದುವರೆದಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ವಶಪಡಿಸಿಕೊಂಡ ದಾಖಲೆಗಳ ಮೇಲೆ ವಿಚಾರಣೆ ಮುಂದುವರೆದಿದ್ದು, ಇನ್ನಷ್ಟು ಆದಾಯ ತೆರಿಗೆ ಇಲಾಖೆಗೆ ವಂಚಿಸಿದ ಪ್ರಕರಣಗಳು ಪತ್ತೆಯಾಗಲಿವೆ ಎಂದು ತಿಳಿದುಬಂದಿದೆ.

More News

You cannot copy content of this page