ನವದೆಹಲಿ : ಇದೇ ತಿಂಗಳ 17 ರಿಂದ ಆರಂಭವಾಗಲಿರುವ ಟ್ವಿಂಟಿ-20 ವಿಶ್ವಕಪ್ ನಲ್ಲಿ ಭಾರತ ತಂಡದ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಲು ಆಯ್ಕೆಯಾಗಿರುವ ಮಹೇಂದ್ರ ಸಿಂಗ್ ಧೋನಿ ಯಾವುದೇ ಶುಲ್ಕ ಅಥವಾ ಸಂಭಾವನೆ ಪಡೆಯುತ್ತಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.
ವಿಶ್ವಕಪ್ ಟೂರ್ನಿಯಲ್ಲಿ ಅವರು ಮಾರ್ಗದರ್ಶಕರು ಆಗಿರುವುದು ಹಿತಾಸಕ್ತಿ ಸಂಘರ್ಷ ನಿಯಮದ ಉಲ್ಲಂಘನೆ ಎಂದು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈ ಹೇಳಿಕೆ ನೀಡಿದ್ದಾರೆ,
ಕಳೆದ ವರ್ಷ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಮಹೇಂದ್ರ ಸಿಂಗ್ ಧೋನಿ ವಿದಾಯ ಘೋಷಿಸಿದ್ದರು. ಆದರೆ, ಐಪಿಎಲ್ ನಲ್ಲಿ ಚನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿ ಆಟ ಆಡುತ್ತಿದ್ದಾರೆ. ಇದರಿಂದ ಸಮಸ್ಯೆ ತಲೆದೋರುವ ಮುಂಚೆನೆ ಎಚ್ಚೆತ್ತ ಬಿಸಿಸಿಐ ಈ ಹೇಳಿಕೆ ನೀಡಿದೆ.
ಭಾರತ ತಂಡದ ಮಾರ್ಗದರ್ಶಕರಾಗಿ ಆಯ್ಕೆಯಾಗಿರುವ ಅವರು ತಂಡವನ್ನು ಯಾವ ರೀತಿಯಲ್ಲಿ ಮುನ್ನೆಡೆಸಲಿದ್ದಾರೆ ಅನ್ನೋದನ್ನ ಕಾದುನೋಡಬೇಕಾಗಿದೆ. ಹಾಗೆಯೇ ಈ ವಿಶ್ವ ಕಪ್ ಬಳಿಕ ಭಾರತ ತಂಡದ ನಾಯಕ ವಿರಾಟ್ ಕೊಯ್ಲಿ ತಮ್ಮ ನಾಯಕ ಸ್ಥಾನವನ್ನು ತ್ಯೆಜಿಸುವುದಾಗಿ ಘೋಷಿಸಿರುವುದನ್ನು ಇಲ್ಲಿ ಸ್ಮರಿಸಬಹುದು.