ಬೆಂಗಳೂರು : ನಾಳೆಯಿಂದ ಎರಡು ದಿನ ಸಿಂಧಗಿ ಹಾಗೂ ಎರಡು ದಿನ ಹಾನಗಲ್ ನಲ್ಲಿ ಪ್ರಚಾರ ಮಾಡಲು ತೆರಳುತ್ತಿರುವಾಗಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಹಂತದ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದೇನೆ, ಮತ್ತೆ ಪಕ್ಷ ಅಪೇಕ್ಷೆ ಪಟ್ಟರೆ ಎರಡನೇ ಹಂತದ ಪ್ರಚಾರಕ್ಕೂ ಹೋಗುತ್ತೇನೆ ಎಂದು ಬಿ ಎಸ್ ವೈ ತಿಳಿಸಿದರಲ್ಲದೆ, ಅಗತ್ಯ ಬಿದ್ದರೆ ಸಿಎಂ ಜೊತೆಗೂ ಪ್ರಚಾರದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದರು.

ಪ್ರತಿಯೊಬ್ಬರು ಜತೆಯಲ್ಲಿಯೇ ಪ್ರಚಾರ ಮಾಡುವುದಕ್ಕಿಂತ ಪ್ರತ್ಯೇಕ ಪ್ರಚಾರ ಮಾಡಿದರೆ ಹೆಚ್ಚಿನ ಲಾಭ ಇದೆ ಎಂದು ತಿಳಿಸಿದ ಅವರು, ಈ ಹಿನ್ನೆಲೆಯಲ್ಲಿ ನಾನು ಪ್ರತ್ಯೇಕವಾಗಿ ಪ್ರಚಾರ ಮಾಡಲು ತೆರಳುತ್ತಿದ್ದೇನೆ ಎಂದು ತಿಳಿಸಿದರು.