ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಟ್ವಿಟ್ಟರ್‌ನಲ್ಲಿ ಕೊಲೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ತ್ರಿಶೂಲ ಹಾಗೂ ವಿಜಯಪುರ ಮತ್ತು ಕಾಪು ಪೋಲಿಸರು ಧರಿಸಿದ್ದ ಕೇಸರಿ ವಸ್ತ್ರಕ್ಕೆ ಸಂಬಂಧಪಟ್ಟಂತೆ ಟ್ವೀಟ್ ಮಾಡಿದ್ದರು. ಇದು ಅನೇಕರ ಗಮನ ಸೆಳದಿದ್ದರು, ಇದೇ ವೇಳೆ ಹಲವು ಮಂದಿ ಟ್ವೀಟ್ ಬಗ್ಗೆ ನಾನಾ ರೀತಿಯಲ್ಲಿ ಚರ್ಚೆ ನಡೆಸಿದ್ದರು.
ಈಗ ಟ್ವಿಟ್ಟರ್‌ನಲ್ಲಿ #prakash ಎನ್ನುವ ಹೆಸರಿನಲ್ಲಿರುವ ಟ್ವೀಟ್ ಬಳಕೆದಾರ ಸಿದ್ದರಾಮಯ್ಯ ಅವರ ಟ್ವೀಟ್ ಅನ್ನು ರೀಟ್ವೀಟ್ ಮಾಡಿ, ನಮ್ಮ @CMofKarnataka @BSBommai ಅವರಿಗೆ ಯಾರ ಕೈಗೆ ಏನು ಕೊಡಬೇಕೆಂದು ಚೆನ್ನಾಗಿ ಗೊತ್ತು! ತ್ರಿಶೂಲ ಕೊಟ್ರೆ, ಮೊದಲ ಬೇಟೆ ನೀನೇ ಅಂತ ಕೊಲೆ ಬೆದರಿಕೆ ಹಾಕಿದ್ದಾರೆ.
ಇದು ಈಗ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಕೂಡ ವಿರೋಧ ವ್ಯಕ್ತವಾಗಿದೆ. ಇತ್ತೀಚಿನ ದಿನಗಳಲ್ಲಿ ಅವರು ಆರ್ ಎಸ್ ಎಸ್ ಬಗ್ಗೆ ಟೀಕೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಈ ರೀತಿ ಟ್ವೀಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ.