ಗದಗ : ರಾಮ ಮಂದಿರ ಲೆಕ್ಕಾ ಕೇಳಲು ನೀವ್ಯಾರು? ಪಾರದರ್ಶಕವಾಗಿ ಆನ್ ಲೈನ್ ನಲ್ಲಿದೆ ನೋಡಿಕೊಳ್ಳಿ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತ್ತಾಲಿಕ್, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದ್ದಾರೆ.
ಗದಗದಲ್ಲಿ ಮಾತನಾಡಿದ ಅವರು, ರಾಮ ಮಂದಿರ ನಿಧಿ ಸಂಗ್ರಹಣೆ ಲೆಕ್ಕ ಕೇಳಿದ್ದ ಎಚ್.ಡಿ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ ಅವರು, ಮುಸ್ಲಿಂರು ಜೆಡಿಎಸ್ ಗೆ ಓಟು ಹಾಕಬೇಕು ಎಂಬ ಭಾವನೆ ನಿರ್ಮಾಣ ಮಾಡಲು ಕುಮಾರಸ್ವಾಮಿ ಹೊರಟಿದ್ದಾರೆ. ಇದೊಂದು ನೀಚ ಹಾಗೂ ನಿರ್ಲಜ್ಜ ರಾಜಕಾರಣ, ರಾಜಕೀಯ ತೆವಲಿಗಾಗಿ ರಾಮ ಮಂದಿರ, ಆರ್.ಎಸ್.ಎಸ್ ಬಗ್ಗೆ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯನವರು ಮಾತಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್, ಕಾಂಗ್ರೆಸ್ ನವರು ಮುಸ್ಲಿಂ ಓಟಿಗಾಗಿ ಏನು ಬೇಕಾದದ್ದು ಹೇಳಲು ತಯಾರಿದ್ದಾರೆ, ಉಪ ಚುನಾವಣೆಯಲ್ಲಿ ಜೆಡಿಎಸ್ ೨ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಹಾಕಿದ್ದಾರೆ. ಜಾತ್ಯಾತೀತ ಅಲ್ಲಾ, ಬಹಳ ಅಪಾಯಕಾರಿ ಜೆಡಿಎಸ್ ಎಂದು ವಿಶ್ಸೇಷಿಸಿದರು.
ಚುನಾವಣೆ ಬಂದಾಗ ಮುಸ್ಲಿಂ ಅನುಕಂಪಕ್ಕಾಗಿ ಇಲ್ಲದ ಖ್ಯಾತೆ ತೆಗೆಯುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ ಪ್ರಮೋದ್ ಮುತ್ತಾಲಿಕ್, ಇದರಲ್ಲಿ ಜೆಡಿಎಸ್, ಬಿಜೆಪಿ ಮಿಲಾಪೆ ರಾಜಕೀಯ ಮಾಡುತ್ತಿವೆ ಎಂದು ಆರೋಪಿಸಿದರು.