ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಗೆ ಎರಡು ಹೊಸ ತಂಡಗಳು ಸೇರ್ಪಡೆಗೊಂಡಿವೆ. ಇದರಿಂದ ಒಟ್ಟು ಹತ್ತು ತಂಡಗಳಾಗಿದ್ದು, ಮುಂಬರುವ 2022 ರ ಟೂರ್ನಿಯಲ್ಲಿ ಒಟ್ಟು 74 ಪಂದ್ಯಗಳು ನಡೆಯಲಿವೆ.
ದುಬೈನಲ್ಲಿ ನಡೆದ ಬಿಡ್ ಪ್ರಕ್ರಿಯೆಯಲ್ಲಿ ಲಖನೌ ಹಾಗೂ ಅಹಮದಾಬಾದ್ ಪ್ರಾಂಚೈಸಿಗಳ ಮಾಲೀಕರು ಯಶಸ್ಸು ಗಳಿಸಿದ್ದಾರೆ. ಇದರಿಂದ ಎರಡು ತಂಡಗಳು ಅಸ್ಥಿತ್ವಕ್ಕೆ ಬಂದಿವೆ.
ಇವು ಎರಡು ಪ್ರಾಂಚೈಸಿಯಿಂದ ಹತ್ತು ಸಾವಿರ ಕೋಟಿಯಷ್ಟು ಆದಾಯ ಗಳಿಸುವ ನಿರೀಕ್ಷೆಯನ್ನು ಬಿಸಿಸಿಐ ಹೊಂದಿತ್ತು. ಆದರೆ, ಅಚ್ಚರಿಯ ಬೆಳವಣಿಗೆಯಲ್ಲಿ 12ಸಾವಿರದ 690 ಕೋಟಿ ಹಣವ್ಯಯಿಸಲು ಪ್ರಾಂಚೈಸಿಗಳು ಮುಂದಾಗಿದ್ದು, ನಿರೀಕ್ಷೆ ಮೀರಿ ಬಿಡ್ ನಡೆದಿದೆ ಎಂದು ಬಿಸಿಸಿಐ ತಿಳಿಸಿದೆ.

ಸಂಜೀವ್ ಗೋಯೆಂಕಾ ಕೋಲ್ಕತ್ತಾ ಮೂಲದ ಆರ್ ಪಿ –ಎಸ್ ಸಿ ಲಖನೌ ಪ್ರಾಂಚೈಸಿ ಮಾಲೀಕತ್ವ ಹೊಂದಿದೆ. ಇದು 2016-2017 ರ ಆವೃತ್ತಿಯಲ್ಲಿ ಕಣದಲ್ಲಿದ್ದ ರೈಸಿಂಗ್ ಪುಣೆ ಸೂಪರ್ಜೈಂಟ್ಸ್ ತಂಡದ ಮಾಲೀಕತ್ವವನ್ನು ಹೊಂದಿತ್ತು. ಲಖನೌ ತಂಡವನ್ನು 7090ಕೋಟಿ ರೂಪಾಯಿಗೆ ಬಿಡ್ ನಲ್ಲಿ ತನ್ನದಾಗಿಸಿಕೊಂಡಿತು. ಇನ್ನೊಂದು ತಂಡವನ್ನು ಅಹಮದಾಬಾದ್ ಪ್ರಾಂಚೈಸಿಯನ್ನು ಸಿವಿಸಿಕ್ಯಾಪಿಟಲ್ ಕಂಪನಿಯ ಪಾಲಾಗಿದೆ. ಇದು 5600ಕೋಟಿ ಮೊತ್ತಕ್ಕೆ ತಂಡವನ್ನು ಖರೀದಿಸಿದೆ.
ಗೌತಮ್ ಅದಾನಿ ಅವರ ಅದಾನಿ ಗ್ರೂಪ್ ಕೂಡ ತಂಡವೊಂದರ ಮಾಲೀಕತ್ವವನ್ನು ಹೊಂದಲು ಮುಂದಾಗಿತ್ತು. ಆದರೆ ಕಂಪನಿಯು 5000 ಕೋಟಿಯಷ್ಟು ಹಣವನ್ನು ವ್ಯಯ ಮಾಡಲು ಇಚ್ಚಿಸಿತ್ತು. ಒಟ್ಟು 10 ಲಕ್ಷ ಮೊತ್ತದ ಟೆಂಡರ್ ಅನ್ನು 22 ಕಂಪನಿಗಳಉ ಪಡೆದುಕೊಂಡು ಬಿಡ್ ಗೆ ಮುಂದಾಗಿದ್ದವು. ಆದರೆ, ತಂಡವೊಂದರ ಮುಖಬೆಲೆಯು 2000ಕೋಟಿಗೆ ನಿಗದಿ ಪಡಿಸಿದ್ದರಿಂದ ಅನೇಕ ಕಂಪನಿಗಳು ಬಿಡ್ ನಿಂದ ಹಿಂದೆ ಸರಿದಿದ್ದವು. ಕೊನೆಯಲ್ಲಿ ಬಿಡ್ ನಲ್ಲಿ ಆರು ಕಂಪನಿಗಳು ಮಾತ್ರ ಭಾಗವಹಿಸಿದ್ದವು.

ಪ್ರಸಕ್ತ ಸಾಲಿನಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚನ್ನೈ ಸೂಪರ್ ಕಿಂಗ್ಸ್ ಟ್ರೋಫಿ ಪಡೆಯುವಲ್ಲಿ ಯಶಸ್ಸಿಯಾಗಿತ್ತು.