ಹಾನಗಲ್ ಬಿಜೆಪಿ ಅಭ್ಯರ್ಥಿ ಸೋಲಿಸಲು ಸಿಎಂ ವಿರೋಧಿಗಳ ತಂತ್ರ..? ಉಸ್ತುವಾರಿಗಳ ಉಪೇಕ್ಷೆ : ಕ್ಷೇತ್ರದ ಅಳಿಯನಿಗೆ ದೀಪಾವಳಿ ಕಹಿ-ಸಿಹಿ ಮಿಶ್ರಫಲ

ಬೆಂಗಳೂರು: ಸರ್ಕಾರಕ್ಕೆ ಪ್ರತಿಷ್ಠೆಯ ಹಾಗೂ ಭಾರೀ ನಿರೀಕ್ಷೆಗೆ ಕಾರಣವಾಗಿದ್ದ ಎರಡು ಕ್ಷೇತ್ರಗಳ ಚುನಾವಣಾ ಫಲಿತಾಂಶ ಪ್ರಕಟ ವಾಗಿದೆ.ಹಾನಗಲ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸಮಾನೆ ಗೆಲುವು ಸಾಧಿಸಿದ್ದು,ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ ಸೋಲಿ ನ ಕಹಿ ಅನುಭವಿಸಿದ್ದಾರೆ.ಇದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಆಡಳಿತ ವಿರೋಧಿ ಅಲೆಯ ಎಚ್ಚರಿಕೆ ಗಂಟೆಯಾಗಿ ದೆ.  

ಸಿಹಿ-ಕಹಿ ಸವಿಯನುಣಿಸಿದ ಉಪ ಚುನಾವಣೆ :ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ನಡೆದ ಮೊದಲ ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿಯ ಹಿಡಿತದಲ್ಲಿದ್ದ ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೋತು,ಜೆಡಿಎಸ್ ತೆಕ್ಕೆಯ ಲ್ಲಿದ್ದ ಸಿಂಧಗಿ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿರುವುದು ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿ ಅವರಿಗೆ ಸಿಹಿ-ಕಹಿ ಸವಿಯನ್ನು ಉಣಿಸಿದಂತಾಗಿದೆ.    

ಸಿಂಧಗಿಯಲ್ಲಿ ಭರ್ಜರಿ ಜಯಗಳಿಸಿದ ಬಿಜೆಪಿ,ಹಾನಗಲ್‌ನಲ್ಲಿ ಸೋಲಲು ಕಾರಣಗಳಿವೆ ಎನ್ನುತ್ತಿವೆ ಬಿಜೆಪಿ ಮೂಲಗಳು.ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ,ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿರಂತರ ಪ್ರಚಾರ,ಪ್ರವಾಸದ ನಡೆಸಿದರೂ ಹಾನಗಲ್‌ನಲ್ಲಿ ಬಿಜೆಪಿ ಅಭ್ಯರ್ಥಿ ಸೋತಿದ್ದಾರೆ.ಬಿಜೆಪಿ ಸರ್ಕಾರವೇ ಹಾನಗಲ್‌ನಲ್ಲಿ ಬೀಡು ಬಿಟ್ಟಿದ್ದರು.ವಲಸಿಗ ಸಚಿವರು ಹಾನ ಗಲ್‌ನಲ್ಲಿ ವಾಸ್ತವ್ಯ ಹೂಡಿ ಪ್ರಚಾರ ನಡೆಸಿದರೂ ನಿರೀಕ್ಷಿತ ಫಲಿತಾಂಶ ನೀಡಲಿಲ್ಲ.ಆ ಮೂಲಕ ಹಾನಗಲ್ ಕ್ಷೇತ್ರದ ಮತದಾರರು ಸರ್ಕಾರಕ್ಕೆ ಅಚ್ಚರಿ ಸಂದೇಶ ನೀಡಿದ್ದಾರೆ.

ಕ್ಷೇತ್ರದಲ್ಲಿ ಸೋಲಿನ ಭೀತಿ ಮುಖ್ಯಮಂತ್ರಿಗೆ ಅರಿವಿತ್ತು: ಕೈಕೊಟ್ಟ ಮೂಲ ಬಿಜೆಪಿಗರು : ಮಾಜಿ ಸಚಿವ ದಿ.ಸಿ.ಎಂ.ಉದಾಸಿ ಅವರ ನಿಧನದಿಂದ ತೆರುವಾಗಿದ್ದ ಹಾನಗಲ್ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿಗೆ ಪ್ರತಿ ಹಂತದಲ್ಲಿಯೂ ಸೋಲಿನ ಮುನ್ಸೂ ಚನೆ ಸಿಕ್ಕಿತ್ತು.ಹೀಗಾಗಿಯೇ ಮುಖ್ಯಮಂತ್ರಿಗಳೇ 7ಹೆಚ್ಚು ದಿನ ತಾಲೂಕು,ಹೋಬಳಿ,ಗ್ರಾಮ ಮಟ್ಟದಲ್ಲಿ ಪ್ರಚಾರ ನಡೆಸಿದ್ದರು.

ಸಾಲದ್ದಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಹಾನಗಲ್ ಕ್ಷೇತ್ರದಲ್ಲಿ ಪ್ರಚಾರ ಸಭೆ, ರೋಡ್ ಶೋ ನಡೆಸುವಂತೆ ಕಾರ್ಯಕ್ರಮ ರೂಪಿಸಿದ್ದರು.ಜೊತೆಗೆ ಕೊನೆಯ ದಿನ ಹಾನಗಲ್‌ನಲ್ಲಿ ರೋಡ್‌ ಶೋ ಮಾಡಿಸಿದ್ದರು.ಆ ಮೂಲಕ ಮತದಾರರ ಮನ ಸೆಳೆಯಲು ಅಂತಿಮ ಪ್ರಯತ್ನ ನಡೆಸಿದ್ದರೆ.ಅಲ್ಲದೆ ಖುದ್ದಾಗಿ ಮುಖ್ಯಮಂತ್ರಿಗಳೇ ಸಮುದಾಯಗಳ ಪ್ರಮುಖರ ಸಭೆಯನ್ನು ಮಾಡುವ ಮೂಲಕ ಅಭ್ಯರ್ಥಿ ಗೆಲುವಿಗೆ ಶಕ್ತಿ ತುಂಬುವ ಕೆಲಸ ಮಾಡಿದರು.ಇಷ್ಟಾದರೂ ಕ್ಷೇತ್ರದ ಜನತೆ ಹಾನಗಲ್ ಅಳಿಯ ಬೆನ್ನಿಗೆ ನಿಲ್ಲಲಿಲ್ಲ.  

ಬಿಜೆಪಿ ಹಿರಿಯ ನಾಯಕರಿಂದಲೇ ಸಿಎಂ ವಿರುದ್ದ ತಂತ್ರ : ಹಾನಗಲ್ ಕ್ಷೇತ್ರವನ್ನು ಗೆಲ್ಲಲು ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟ ದ ಸಚಿವರು ಭಾರೀ ಸರ್ಕಸ್ ನಡೆಸಿದರು.ಆದರೆ ಹಾನಗಲ್ ಚುನಾವಣೆ ಗೆದ್ದರೆ ಮುಖ್ಯಮಂತ್ರಿಗೆ ಕ್ರೆಡಿಟ್ ಸಲ್ಲುತ್ತದೆ ಎಂದು ಭಾವಿ ಸಿದ ಕೆಲವರು ಅಭ್ಯರ್ಥಿ ಸೋಲಿಸಲು ಸಂಚು ರೂಪಿಸಿದರು ಎನ್ನಲಾಗಿದೆ.ಸಚಿವ ಸಂಪುಟದಲ್ಲಿ ಸ್ಥಾನ ವಂಚಿತರು ,ಮುಖ್ಯಮಂತ್ರಿ ಸ್ಥಾನ ಆಕಾಂಕ್ಷಿಗಳು ಸೇರಿಕೊಂಡು ಸಿಎಂಗೆ ಖೆಡ್ಡ ತೋಡಿದರು ಎನ್ನಲಾಗಿದೆ.ಮತದಾನಕ್ಕೂ 48 ಗಂಟೆ ಗಳಲ್ಲಿ ಪ್ಲಾನ್ ರೂಪಿಸಿ ಕರಾರುವಕ್ಕಾಗಿ ಕಾರ್ಯಾಚರಣೆ ನಡೆಸಿದ್ದಾರೆ.ಇದಕ್ಕೆ ಕೆಲವು ಸ್ಥಳೀಯರ ಬೆಂಬಲ ಪಡೆದುಕೊಂಡು ಅಭ್ಯರ್ಥಿ ಸೋಲುವ ದಾರಿ ಸುಗಮಗೊಳಿಸಿದರು.ಜೊತೆಗೆ ತವರು ಜಿಲ್ಲೆಯಲ್ಲೆ ಗೆಲ್ಲಲಾಗದ ಸಿಎಂ ರಾಜ್ಯ  ಸರ್ಕಾರದ ನಾಯಕತ್ವವನ್ನು ನಿಭಾಯಿಸಲು ಶಕ್ತ ರಲ್ಲ ಎಂಬ ಸಂದೇಶ ಪಕ್ಷದ ಹೈಕಮಾಂಡ್ ರವಾನಿಸಿದ್ದಾರೆ.

ಅಭ್ಯರ್ಥಿ ಆಯ್ಕೆ ಮಾಡುವಲ್ಲಿ ಎಡವಿತೇ ಬಿಜೆಪಿ ..? : ಹಾನಗಲ್ ಕ್ಷೇತ್ರದ ಅಭ್ಯರ್ಥಿ ಆಯ್ಕೆಯಲ್ಲಿ ಬಿಜೆಪಿ ಎಡವಿತ್ತು.ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಶ್ರೀನಿವಾಸ ಮಾನೆ ಕ್ಷೇತ್ರದವರಲ್ಲ ಅವರು ಹೊರಗಿನವರೇ. ಆದರೆ ಕ್ಷೇತ್ರದ ಜನತೆಗೆ ಮಾನೆ ಹೊರಗಿನವರು ಎಂಬ ಭಾವನೆ ಬಾರದಂತೆ ನಾಲ್ಕೈದು ವರ್ಷಗಳಿಂದ ಜನರ ಕಷ್ಟ-ದುಃಖ,ದುಮ್ಮಾನಗಳಿಗೆ ಸ್ಪಂದಿಸಿದರು.ಬಿಜೆಪಿ ಅಭ್ಯರ್ಥಿ ಶಿವ ರಾಜ ಸಜ್ಜನರ್  ಚುನಾವಣೆ ಗೆದ್ದು ಶಾಸಕರಾಗಲು ಬಂದವರು ಹೊರತು ನಮ್ಮವರಲ್ಲ ಎಂಬ ಭಾವನೆ ಮತದಾರರಲ್ಲಿ ಮನೆ ಮಾಡಿತ್ತು.ಶಿವರಾಜ ಸಜ್ಜನರ್ ಮೇಲೆ ಹಾನಗಲ್ ತಾಲೂಕಿನ ಕಬ್ಬು ಬೆಳೆಗಾರರ ಸಿಟ್ಟು  ಬಿಜೆಪಿ ಅಭ್ಯರ್ಥಿ ಮೇಲೆ ತಿರುಗು ಬಾಣ ವಾಯ್ತು.ಸಂಗೂರು ಸಹಕಾರಿ ಸಕ್ಕರೆ ಕಾರ್ಖಾನೆ ದಿವಾಳಿಯಿಂದ ಸಂಕಷ್ಟಕ್ಕೆ ಒಳಗಾಗಿದ್ದ ರೈತರು ತಮ್ಮೆಲ್ಲಾ ಆಕ್ರೋಷ,ಸಿಟ್ಟು, ಅಸಮಾಧಾನವನ್ನು ಚುನಾವಣೆಯಲ್ಲಿ ತೋರಿಸಿದ್ದಾರೆ ಎನ್ನಲಾಗಿದೆ.

ಕಬ್ಬು ಬೆಳೆಗಾರರ ಶಾಪಕ್ಕೆ ಗುರಿಯಾದ ಶಿವರಾಜ ಸಜ್ಜನರ್‌ : ಎರಡು ದಶಕಗಳ ಹಿಂದೆ ಸಂಗೂರು ಸಹಕಾರಿ ಸಕ್ಕರೆ ಕಾರ್ಖಾನೆ ದಿವಾಳಿಯಾಗಲು ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ್ ಕಾರಣ ಎಂಬ ಅಸಮಾಧಾನ ತಾಲೂಕಿನ ರೈತರಲ್ಲಿ ಮಡುಗಟ್ಟಿತ್ತು. ಆದರೆ ಇದನ್ನು ಪರಿಗಣಿಸದ ರಾಜ್ಯ ಬಿಜೆಪಿ ಕೋರ್ ಕಮಿಟಿ ಹೈಕಮಾಂಡ್ ಗೆ ಸಜ್ಜನರ್ ಹೆಸರನ್ನು ಶಿಫಾರಸ್ಸು ಮಾಡಿತ್ತು.ಸಂಗೂ ರು ಸಕ್ಕರೆ ಕಾರ್ಖಾನೆ ದಿವಾಳಿಯಾದಾಗ ಸಂಕಷ್ಟಕ್ಕೆ ಒಳಗಾಗಿದ್ದು ಹಾಗನಲ್ ತಾಲೂಕಿನ ದೊಡ್ಡ, ಸಣ್ಣ ಹಾಗೂ ಅತಿಚಿಕ್ಕ ರೈತ ರು.ರೈತರು ಕಬ್ಬು ಬೆಳೆದು ಆರ್ಥಿಕವಾಗಿ ಚೇತರಿಸಿಕೊಳ್ಳುದ್ದ ರೈತರ ಪಾಲಿಗೆ  ಶಿವರಾಜ್ ಸಜ್ಜನರಾಗದೆ ದುರ್ಜನರಂತೆ ವರ್ತಿಸಿದರು ಎಂಬ ಆರೋಪ ರೈತರಲ್ಲಿ ಮನೆ ಮಾಡಿದೆ.

ಕೊರೋನಾ,ಲಾಕ್ ಡೌನ್,ದಿಕ್ಕಿಲ್ಲದಂತಾದ ಕ್ಷೇತ್ರ : ಕಳೆದ ಒಂದೂವರೆ ವರ್ಷದಿಂದ ಕಾಡಿದ ಕೊರೊನಾ ಸೋಂಕು ಬಿಜೆಪಿ ಪಾಲಿಗೆ ಅತಿದೊಡ್ಡ ಹೊಡೆತ ನೀಡಿತು.ಇಡೀ ರಾಜ್ಯ ಲಾಕ್ ಡೌನ್,ಕೊರೊನಾ ಸೋಂಕಿ ನಿಂದ ಬಾದಿಸಲ್ಪಟ್ಟಾಗ ಸಿ.ಎಂ.ಉದಾಸಿ ಅವರೂ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು.ಸಂಸದ ಶಿವಕುಮಾರ್ ಉದಾಸಿ ಸಹಜವಾಗಿಯೇ ತಂದೆ ಸಿಎಂ ಉದಾಸಿ ಆರೋ ಗ್ಯದತ್ತ ಗಮನ ಹರಿಸಲು ಬೆಂಗಳೂರಿನಲ್ಲಿಯೇ ವಾಸ್ತವ್ಯ ಹೂಡಿದರು.ಆಗ ಅಕ್ಷರಶಃ ಕ್ಷೇತ್ರ ಅನಾಥವಾಯಿತು. ಧಿಕ್ಕಿಲ್ಲದಂತಾದ ಕ್ಷೇತ್ರದಲ್ಲಿ ಮಾನೆ ಸ್ಪಂದನೆಯ ಟಾನಿಕ್ ನೀಡಿದರು.

ಜನರಿಗೆ ಸಹಾಯ ಹಸ್ತ,ಲಿಂಗಾಯತ ಮತಗಳ ವಿಭಜನೆ : ಕೊರೋನಾ ಲಾಕ್ ಡೌನ್,ಸೋಂಕಿನ ಭೀತಿಯ ನಡುವೆ ಜನ-ಸಾಮಾನ್ಯ ರ ಸಹಾಯಕ್ಕೆ ನಿಂತಿದ್ದು ಶ್ರೀನಿವಾಸ ಮಾನೆ.ಕೊರೊನಾ ಎರಡು ಅಲೆಗಳ ಕಾಲ ದಲ್ಲಿ ತಾಲೂಕಿನ ಬಡ ಜನರ ಕಷ್ಟಕ್ಕೆ ಸ್ಪಂದಿಸಿ ದ್ದು,ಮೇಲ್ವರ್ಗದ ಜನರಿಗೆ ಆಸ್ಪತ್ರೆ ಸೇರಿದಂತೆ ಅಗತ್ಯತೆ ಗಳನ್ನು ಕಲ್ಪಿಸಿದರು.ಜೊತೆಗೆ ಪಡಿತರ,ಆರೋಗ್ಯ,ಆರ್ಥಿಕ ಸಹಾಯ ನೀಡಿ ಜನರನ್ನು ವಿಶ್ವಾಸ ಗಳಿಸಿದರು.ಉಪ ಚುನಾವಣೆಯಲ್ಲಿ ಕೃತಜ್ಞತಾಪೂರ್ವಕವಾಗಿ ತಮ್ಮ ಮತಗಳನ್ನು ಮಾನೆ ನೀಡಿ ಗೆಲುವಿಗೆ ಕಾರಣರಾಗಿದ್ದಾರೆ.ಕ್ಷೇತ್ರದಲ್ಲಿ ಲಿಂಗಾಯತ ಮನತಗಳು ವಿಭಜನೆ ಆಗಿದ್ದು ಪಂಚಮಸಾಲಿ ಲಿಂಗಾಯತ ಮತಗಳು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪಾಲಾಗಿದ್ದು ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಗೆಲುವಿಗೆ ಸಹಕಾರಿ ಯಾಗಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಚುನಾವಣಾ ಉಸ್ತುವಾರಿಗಳ ಉಪೇಕ್ಷೆ : ಉಪ ಚುನಾವಣೆ ಉಸ್ತುವಾರಿ ಹೊತ್ತಿದ್ದ ಸಚಿವರು,ಮುಖಂಡರು ಉಪೇಕ್ಷೆ ಮಾಡಿ ದರು.ಬಿಜೆಪಿ ಹಿಡಿತರಲ್ಲಿರುವ ಕ್ಷೇತ್ರ,ಮುಖ್ಯಮಂತ್ರಿ ಅವರ ತವರು ಜಿಲ್ಲೆ, ರಾಜ್ಯದಲ್ಲಿ ಮತ್ತು ದೇಶದಲ್ಲಿ ಬಿಜೆಪಿ ಸರ್ಕಾರವಿದೆ. ಅಭಿವೃದ್ದಿಗಾಗಿ ಕ್ಷೇತ್ರದ ಜನತೆ ಬಿಜೆಪಿ ಅಭ್ಯರ್ಥಿ ಗೆಲ್ಲಿಸದೆ ಅನ್ಯಮಾರ್ಗವಿಲ್ಲವೆಂಬ ಉಪೇಕ್ಷೆ ಚುನಾವಣೆಯಲ್ಲಿ ಭಾರಿ ಬೆಲೆ ತೆರಬೇಕಾಗಿ ಬಂತು.

ಚುನಾವಣೆ ಉಸ್ತುವಾರಿ ಹೊತ್ತಿದ್ದ ಸಚಿವ ಮುರುಗೇಶ್ ನಿರಾಣಿ ಕಾರ್ಯಕ್ರಮದ ನಿಮಿತ್ತ ವಿದೇಶ ಪ್ರಯಾಣ ಕೈಗೊಂಡರು.ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ವೈಯಕ್ತಿಯ ವರ್ಚಸ್ಸು ಇಲ್ಲದಿರು ವುದು,ಜಿಲ್ಲೆಯ ಜನರು ಹಾಗೂ ಆಡಳಿತದಲ್ಲಿ ಹಿಡಿತವಿಲ್ಲ ದಿರುವುದು ಚುನಾವಣೆಯಲ್ಲಿ ಸೋಲಿಗೆ ಪ್ರಮುಖ ಕಾರಣವಾಗಿದೆ.

ಉದಾಸಿ ಕುಟುಂಬಕ್ಕೆ ಟಿಕೆಟ್ : ಯಡಿಯೂರಪ್ಪ ಪುತ್ರನಿಗೆ ಸಚಿವ ಸ್ಥಾನ ನೀಡದಿರುವುದು : ಉಪ ಚುನಾವಣೆಗೆ ಉದಾಸಿ ಕುಟುಂಬಕ್ಕೆ ಟಿಕೆಟ್ ನೀಡದೆ ಸಜ್ಜನರ್ ಗೆ ಟಿಕೆಟ್ ನೀಡಿದ್ದು ಸೋಲಿಗೆ ಪ್ರಮುಖ ಕಾರಣವಾಗಿದೆ ಎಂಬ ಮಾತುಗಳಿವೆ.ಅಲ್ಲದೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪಅವರ ಪುತ್ರನಿಗೆ ಸಚಿವ ಸ್ಥಾನ ನೀಡದಿರುವುದು ಚುನಾವಣೆ ಸೋಲಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ಕಾರಣವಾಗಿದೆ. ಯಡಿಯೂರಪ್ಪ,ವಿಜಯೇಂದ್ರ,ರಾಘವೇಂದ್ರ ಸೇರಿದಂತೆ  ಪ್ರಮುಖರು ಹಾನಗಲ್ ಕ್ಷೇತ್ರದಲ್ಲಿ ಗಂಭೀರ ವಾಗಿ ಪರಿಗಣಿಸಲಿಲ್ಲವೆನ್ನಲಾಗಿದೆ.

 ಆಡಳಿತ ವಿರೋಧಿ ಅಲೆ : ಸಿ.ಎಂ.ಉದಾಸಿ ಹಾಗೂ ಸರ್ಕಾರದ ಆಡಳಿತ ವಿರೋಧಿ ಅಲೆ ಉಪ ಚುನಾವಣೆ ಯಲ್ಲಿ ಸ್ಪಷ್ಟವಾಗಿ ಪ್ರತಿ ಫಲಿಸಿದೆ.ಸಿಂಧಗಿಯಲ್ಲಿ ಜೆಡಿಎಸ್ ಶಾಸಕರಾಗಿದ್ದ ಮನಗೂಳಿ ವಿರೋಧಿ ಅಲೆ ಯೂ ಕ್ಷೇತ್ರದಲ್ಲಿ ಬಿಜೆಪಿಗೆ ಲಾಭ ತಂದು ಕೊಟ್ಟರೆ.ಹಾನಗಲ್ ನಲ್ಲಿ ಅದು ತದ್ವಿರುದ್ದ ಫಲಿತಾಂಶಕ್ಕೆ ಕಾರಣವಾಗಿದೆ.

ಅತಿಯಾದ ವಿಶ್ವಾಸ – ಸಜ್ಜನರ್ ವರ್ಚಸ್ಸ ಕೈಕೊಟ್ಟಿದ್ದು : ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸದೆ ಅತಿಯಾದ ಆತ್ಮವಿಶ್ವಾಸದಿಂದ ಬಿಜೆಪಿ ಕ್ಷೇತ್ರವನ್ನು ಕಳೆದುಕೊಂಡಿದೆ.ಶಿವರಾಜ್ ಸಜ್ಜನರ್ ವೈಯಕ್ತಿಕ ವರ್ಚಸ್ಸು ಕೈಕೊಟ್ಟಿದೆ.ಮುಖ್ಯಮಂತ್ರಿ ತವರು ಜಿಲ್ಲೆಯವರಾದರೂ ಕ್ಷೇತ್ರದಲ್ಲಿ ಪ್ರಭಾವ ಬೀರುವಲ್ಲಿ ಸಫಲವಾಗಿಲ್ಲ.

ಉಪ ಚುನಾವಣೆ ಸೋಲಿಗೆ ನೂರಾರು ಕಾರಣಗಳು ಕಂಡು ಬಂದರೂ ಸೋಲಿನ ಹೊಣೆಯನ್ನು ಸ್ವೀಕರಿಲು ಮುಂದೆ ಬರುತ್ತಿಲ್ಲ. ಚುನಾವಣೆಯಲ್ಲಿ ಸೋತು ಮನೆ ಸೇರಿರುವ ಅಭ್ಯರ್ಥಿ ಮೇಲೆ ಸೋಲಿನ ಮೂಟೆಯನ್ನು ಹೊರಸಿ ತಮ್ಮ ಜವಾಬ್ದಾರಿಗಳನ್ನು ಮರೆ ಯಲು ಯತ್ನಿಸಿದ್ದಾರೆ

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೋಲಿನ ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದಾರೆ.ಚುನಾವಣೆ ಯಲ್ಲಿ ತಮಗೆ ಕೈಕೊ ಟ್ಟಿದ್ಯಾರು,ಬೆನ್ನಿಗೆ ಹಿರಿದಿದ್ಯಾರು,ಯಾವ ಕಾರಣಕ್ಕೆ ಸೋಲಾಯ್ತು.ತಮಗೆ ನಂಬಿಕೆ ದ್ರೋಹ ಎಸಗಿದ್ಯಾರು.ಯಾರ ಸಿಟ್ಟನ್ನು ಚುನಾ ವಣೆಯಲ್ಲಿ ತಮ್ಮ ಮೇಲೆ ತೀರಿಸಿಕೊಂಡಿದ್ದಾರೆ ಎಂಬೆಲ್ಲಾ ಪ್ರಶ್ನೆಗಳ ಸರಮಾಲೆ ಹೊತ್ತು ದೀಪಾವಳಿ ಬೆಳಕಿನಲಿ ಹುಡುಕಾಟ ಆರಂ ಭಿಸಿದ್ದಾರೆ.

More News

You cannot copy content of this page