ಬಿಟ್ ಕಾಯಿನ್ ಪ್ರಕರಣ,’ಜಾಣ ಬೊಮ್ಮಾಯಿ ಜಾರಿದ್ದೇಕೆ’…?

ರಾಘವೇಂದ್ರ ಭಟ್ – ಹಿರಿಯ ಪತ್ರಕರ್ತರು

ಬೆಂಗಳೂರು :ರಾಜ್ಯ ರಾಜಕಾರಣದಲ್ಲಿ ಈಗ ಬಿಟ್ ಕಾಯಿನ್ ಪ್ರಕರಣ ಸದ್ದು ಮಾಡುತ್ತಿದೆ.ಶ್ರೀಕಿಯನ್ನು ಹೊರತುಪಡಿಸಿ ಈ ಹಗರಣದ ಫಲಾನುಭವಿ ಯಾರು ? ಎನ್ನುವುದಕ್ಕೆ ಪಕ್ಕಾ ಸಾಕ್ಷಿ ಇದುವರೆಗೆ ಲಭ್ಯವಿಲ್ಲವಾದರೂ “ಆಕಾಶ ನೋಡುವುದಕ್ಕೆ ನೂಕು ನುಗ್ಗಲು”ಎಂಬಂತೆ ಪೊಲಿಟಿಕಲ್ ಗುಂಪು ಘರ್ಷಣೆಯಂತೂ ನಡೆಯುತ್ತಿದೆ.ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಪಾಲಿಗೆ ಇದು ನಿರೀಕ್ಷಿತವೋ,ಅನಿರೀಕ್ಷಿತ ವೋ ಗೊತ್ತಿಲ್ಲ.ಆದರೆ ಇದನ್ನು ನಿಭಾಯಿಸುವ ವಿಚಾರದಲ್ಲಿ ಮಾತ್ರ ಅವರು ಆಯತಪ್ಪಿ ಬಿದ್ದಿರುವುದಂ ತೂ ಸುಳ್ಳಲ್ಲ.ಓಟದ ಸ್ಪರ್ಧೆಯಲ್ಲಿ ಎಡವಿ ಬಿದ್ದವರನ್ನು ಯಾರು ಎತ್ತಿ‌ ನಿಲ್ಲಿಸುವುದಿಲ್ಲ,ಎಲ್ಲರೂ ದಾಟಿ ಓಡುವವ ರೇ ಎಂಬ ಮರ್ಮ ಬೊಮ್ಮಾಯಿಯವರಿಗೆ ಈ ಘಟನೆಯ ನಂತರ ಅರಿವಿಗೆ ಬಂದಿರಬಹುದಾದ ರೂ ಅದರಿಂದ ಈಗ ಯಾವುದೇ ಪ್ರಯೋಜನವೂ ಉಳಿದಿಲ್ಲ.

ರಾಜ್ಯದ ಮುಖ್ಯಮಂತ್ರಿಯಾಗುವುದಕ್ಕೆ‌ ಮುನ್ನ ಹಾಗೂ ಬಳಿಕ ಸಾರ್ವಜನಿಕ ವಲಯದಲ್ಲಿ ಬೊಮ್ಮಾಯಿ “ಚಾಲಾಕಿ” ವ್ಯಕ್ತಿ.ಎಂಥ ಸನ್ನಿವೇಶವನ್ನು ಬೇಕಾದರೂ ನಿಭಾಯಿಸಬಲ್ಲ ಚಾಕಚಕ್ಯತೆ ಹೊಂದಿದ್ದಾರೆ.ದಿಲ್ಲಿ ವರಿಷ್ಠರು,ಯಡಿಯೂರಪ್ಪ,ಪ್ರತಿಪಕ್ಷ,ಮಾಧ್ಯ ಮ ಎಲ್ಲವನ್ನೂ ಜಯಿಸಬಲ್ಲರೂ ಎಂಬ ಭಾವನೆ ಇತ್ತು.ಆದರೆ ಬಿಟ್ ಕಾಯಿನ್‌ ಪ್ರಕರಣ ನಿಭಾಯಿಸುವಾಗ ಜಾರಿದ ಪರಿ ಕಂಡಾಗ ಬೊಮ್ಮಾಯಿ “ಒಡವಿ ಇದ್ದೂ ಬಡವಿ”ಯಂತೆ ಕಾಣುತ್ತಾರೆ.ಒಂದು ರೀತಿ ಮೊದಲ ಪಂದ್ಯದಲ್ಲೇ ಹೀನಾಯವಾಗಿ ಸೋತ ಕ್ರಿಕೆಟ್ ತಂಡದ ಸ್ಥಿತಿ ಅವರದ್ದಾಗಿದೆ.ಹಾಗಾದರೆ “ಜಾಣ ಬೊಮ್ಮಾಯಿ ಜಾರಿದ್ದೇಕೆ ?”ಎಂಬುದೇ ಈಗ ಎಲ್ಲರನ್ನೂ ಕಾಡುವ ಪ್ರಶ್ನೆ.

ಓಪನಿಂಗ್ ನಲ್ಲೇ ವೈಫಲ್ಯ  : ಬಿಟ್ ಕಾಯಿನ್ ಪ್ರಕರಣ ಮುನ್ನೆಲೆಗೆ ಬಂದಿದ್ದು ಒಂದು ವಿಚಿತ್ರ ಸನ್ನಿವೇಶದಲ್ಲಿ.ತವರು ಜಿಲ್ಲೆಯ ಲ್ಲಿ ಉಪಚುನಾವಣೆ ಎದುರಿಸುವುದಕ್ಕೆ ಬೊಮ್ಮಾಯಿ ಹಾನಗಲ್ ನಲ್ಲಿ ಠಿಕಾಣಿ ಹೂಡಿದ್ದಾಗಲೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವಿಟರ್ ನಲ್ಲಿ ಈ ವಿಚಾರ ಪ್ರಸ್ತಾಪಿಸಿದರು. ಇದಾದ ಬಳಿಕ ಸಿದ್ದರಾಮಯ್ಯನವರ ಮಾಜಿ ಮಾಧ್ಯಮ ಸಲಹೆಗಾರ ದಿನೇಶ್ ಅಮ್ಮಿನ ಮಟ್ಟು ಫೇಸ್ ಬುಕ್ ನಲ್ಲಿ ಈ ಕುರಿತಾದ ವರದಿಯನ್ನು ಹಂಚಿಕೊಂಡರು.ಇದಾದ ಬಳಿಕ ಮಾಧ್ಯಮ ಹಾಗೂ ರಾಜಕೀಯದ ಅಂಗ ಳದಲ್ಲಿ ಆಫ್ ದಿ ರೆಕಾರ್ಡ್ ಸ್ವರೂಪದಲ್ಲಿ ಈ ಬಗ್ಗೆ ಸಾಕಷ್ಟು ಅಂತೆ ಕಂತೆಯ ಚರ್ಚೆ ನಡೆಯಿತು.ಒಬ್ಬ ಚತುರ ರಾಜಕಾರಣಿಯಾ ದವನು ಇಂಥ ಸುದ್ದಿ ತನ್ನ ಕಿವಿಗೆ ಬಿದ್ದಾಗ ಅದನ್ನು ವ್ಯವಸ್ಥಿತ ವಾಗಿ ಅಮುಕುವ ಪ್ರಯತ್ನ ಮಾಡುತ್ತಾನೆ.ಆದರೆ ಬೊಮ್ಮಾಯಿ ಮಾತ್ರ ಬ್ಯಾಟ್ ಎತ್ತದೇ,ಪ್ರತಿಪಕ್ಷ ಹಾಗೂ ಮಾಧ್ಯಮದಲ್ಲಿ ನಡೆಯುತ್ತಿದ್ದ ಚರ್ಚೆಯ ಸ್ಕೋರ್ ಬೋರ್ಡ್ ನಿರ್ಲಕ್ಷಿಸಿದರು.

ಪರಿಸ್ಥಿತಿ : ಹಾಗೂ ಹೀಗೂ ಇದಕ್ಕೊಂದು ಸ್ಪಷ್ಟೀಕರಣ ಕೊಟ್ಟು‌ ಕೈ ತೊಳೆದುಕೊಳ್ಳೋಣ ಎಂಬ ಅವರ ಲೆಕ್ಕಾಚಾರ ಪರಿಸ್ಥಿತಿಯ ಮುಂದೆ ಕುಬ್ಜವಾಗಿ ಹೋಯಿತು.ಗೃಹ ಕಚೇರಿ ಕೃಷ್ಣಾದಲ್ಲಿ ನೆಪ ಮಾತ್ರಕ್ಕೆ ಸ್ಪಷ್ಟೀಕರಣ ಕೊಟ್ಟು ನಿರಾಳವಾಗುವ ಹೊತ್ತಿಗೆ ನಟ ಪುನೀತ್ ರಾಜ್ ಕುಮಾರ್ ಮೃತಪಟ್ಟರು.ಈ ಪರಿಸ್ಥಿತಿ ನಿರ್ವಹಣೆಯಲ್ಲಿ ಮಗ್ನರಾದ ಬೊಮ್ಮಾಯಿ ಬಿಟ್ ಕಾಯಿನ್ ವಿಚಾರವನ್ನು ಪ್ರತಿಪಕ್ಷ ಹಾಗೂ ಮಾಧ್ಯಮ ಮರೆತು ಬಿಡಬಹುದೆಂಬ ಲೆಕ್ಕಾಚಾರ ಹಾಕಿರಲೂ ಸಾಕು.ಹೀಗಾಗಿ ಈ ಕುರಿತಾದ ಹೋಮ್ ವರ್ಕ್ ಮರೆತು ಬಿಟ್ಟಂತೆ ಕಾಣುತ್ತದೆ.

ಸೂಕ್ತ ಸಮಾಲೋಚಕರಿಲ್ಲ: ಇನ್ನು ಬೊಮ್ಮಾಯಿ ಅವರಿಗೆ ಸೂಕ್ಷ್ಮ ವಿಚಾರಗಳು ಎದುರಾದಾಗ ಅದನ್ನು ಎದುರಿಸುವುದಕ್ಕೆ ಸರಿಯಾದ ಸಮಾಲೋಚಕರ ತಂಡವೇ ಇದ್ದಂತೆ ಕಾಣುತ್ತಿಲ್ಲ.ಎಲ್ಲ ಸವಾಲುಗಳನ್ನು ಪಾನ್ ಪರಾಗ್ ಜಗಿದು ಉಗಿದಂತೆ ನಿಭಾ ಯಿಸಿ ಬಿಡಬಲ್ಲೇ ಎಂಬ ಅವರ ಅತಿ ವಿಶ್ವಾಸ ಇಲ್ಲಿ ತೊಡಕಾ ದಂತೆ ಕಾಣುತ್ತದೆ.ಹೀಗಾಗಿ ಅವರು ಈ ಸಂಬಂಧ ಯಾವುದೇ ತಂತ್ರ ಗಾರಿಕೆ ನಡೆಸಲಿಲ್ಲ.ಅಧಿಕಾರಿಗಳ ಜತೆ ಸಮಾಲೋಚನೆಯನ್ನು ಮಾಡಲಿಲ್ಲ.ಬೊಮ್ಮಾಯಿ ಅವರ ಹಿಂದೆ ಮುಂದೆ ಓಡಾಡುವ ಹಲವು ಸಚಿವರಿ ಗೂ ಇದು ಮಹತ್ವದ ಸಂಗತಿಯಾಗಿ ಕಾಣಲಿಲ್ಲವೆಂದೆನಿಸುತ್ತದೆ.ಅಗತ್ಯ ಬಿದ್ದರೆ ಬೊಮ್ಮಾಯಿ ಅವರನ್ನು ಮನೆಯ ಪಾಯಿಖಾನೆಯವರೆಗೂ ಬಿಟ್ಟು ಪೈಜಾಮಾದ ಲಾಡಿ ಬಿಚ್ಚಿ ಕುಳ್ಳಿರಿಸಿ ಬರುವಷ್ಟು ಹತ್ತಿರದಲ್ಲಿರು ವ ಆತ್ಮೀಯ ಸಚಿವರಿಗೆ ಪ್ರತಿಪಕ್ಷ ಎಸೆದ ಗೂಗ್ಲಿ ಬೋಲ್ಡ್ ಮಾಡುವುದು ಬೊಮ್ಮಾಯಿಯನ್ನು ಎಂದು ತೋಚಿರುವ ಸಾಧ್ಯತೆ ಕಡಿಮೆ.

ವಿಫಲ ನಿರ್ವಹಣೆ : ಇನ್ನು ಈ ವಿಚಾರದಲ್ಲಿ ಬೊಮ್ಮಾಯಿಯವರ ಮಾಧ್ಯಮ ತಂಡ (ಅದು ಇದೆಯೋ,ಇಲ್ಲವೋ ಗೊತ್ತಿಲ್ಲ) ಸಾಕಷ್ಟು ಎಡವಿದಂತೆ ತೋರುತ್ತದೆ.ಸತ್ಯಾಂಶವೇನೆಂಬುದನ್ನು ಮನವರಿಕೆ ಮಾಡುವಲ್ಲಿ ಅವರು ಸಂಪೂರ್ಣ ಸೋತರು.

ಉಡಾಫೆಯಾಗಿ ಬಿಟ್’ರು : ಎಲ್ಲದಕ್ಕಿಂತ ಹೆಚ್ಚಾಗಿ ಬೊಮ್ಮಾಯಿ ಆಂಡ್ ಟೀಂ ಈ ವಿಚಾರವನ್ನು ಉಡಾಫೆಯಾಗಿ ತೆಗೆದು ಕೊಂಡಿರಬಹುದು ಅಥವಾ ಭಯ ಕಾಡಿರಲೂಬಹುದು.ಹೀಗಾಗಿ ಸಾರ್ವಜನಿಕವಾಗಿ ಕಾಡುತ್ತಿರುವ ಪ್ರಶ್ನೆ ಹಾಗೂ ಗುಮಾನಿಗೆ ಅವರು ಉತ್ತರ ನೀಡದೇ ಅಂತರ ಕಾಯ್ದುಕೊಂಡರು.ಆಪ್ತ ಸಚಿವರ ಅಪಾರ್ಟ್‌ಮೆಂಟ್ ನಲ್ಲಿ,ಹೊಟೇಲುಗಳಲ್ಲಿ ಕಾಲ‌ಕಳೆಯುವ ಬದಲು ಅಧಿಕಾರಿಗಳ ಜತೆ ಸಮಾಲೋಚಿಸಿ ಒಂದು ನಿರ್ಧಾರಕ್ಕೆ ಬಂದಿದ್ದರೆ ಪರಿಸ್ಥಿತಿಯನ್ನು ಇನ್ನು ಚೆನ್ನಾಗಿ ನಿಭಾಯಿಸಬ ಹುದಿತ್ತು.

ತುಟ್ಟಿಯಾದ ಹೇಳಿಕೆ : ಇನ್ನು ಪ್ರಧಾನಿ ಮೋದಿಯವರನ್ನು ಭೇಟಿಯಾದ ಬಳಿಕ ದಿಲ್ಲಿಯಲ್ಲಿ ಬೊಮ್ಮಾಯಿ ನೀಡಿದ ಹೇಳಿಕೆ ಅವರ ಪಾಲಿಗೆ ತೀರಾ ತುಟ್ಟಿಯಾಯ್ತು.ಪ್ರತಿಪಕ್ಷ,ಮಾಧ್ಯಮದಲ್ಲಿ ನಿತ್ಯ ಚಲಾವಣೆಯಲ್ಲಿರುವ ಬಿಸಿಬಿಸಿ ವಿಚಾರವನ್ನು ನಿರ್ಲಕ್ಷಿಸಿ ಬಿಡಿ ಎಂದು ಪ್ರಧಾನಿ ಹೇಳಿದ್ದಾರೆ ಎಂದು ಬೊಮ್ಮಾಯಿ ಹೇಳಿಕೆ ನೀಡಿದ್ದು,ಅವರು ಎದುರಿಸುತ್ತಿರುವ ಒತ್ತಡ ಹಾಗೂ ಅಪ್ರಬುದ್ಧ ತೆಗೆ ಕೈಗನ್ನಡಿಯಾಯ್ತು.ಬಹುಶಃ ತಲೆಯಲ್ಲಿ ಎಂಟಾಣೆ ಬುದ್ಧಿ ಇರುವ ಪಂಚಾಯಿತ್ ಸದಸ್ಯ ಕೂಡಾ ಇಂಥ ಹೇಳಿಕೆ ನೀಡುವುದಿ ಲ್ಲ.ಆದರೆ ಬೊಮ್ಮಾಯಿ ಈ ಮಾತಿನ ಮೂಲಕ ತಮ್ಮನ್ನು ಮಾತ್ರವಲ್ಲ ಪ್ರಧಾನಿ ಕಚೇರಿಯ ನ್ನೂ‌ ಕಾಂಗ್ರೆಸ್ ಬಾಯಿಗೆ ಆಹಾರ ವಾಗಿಸಿಬಿಟ್ಟರು.

ಈಗ ಚಡಪಡಿಕೆ : ಇಷ್ಟಾದ ನಂತರ ರಾಜಕೀಯ ವಲಯದಲ್ಲಿ ಚಲಾವಣೆಗೆ ಬಂದಿರುವ ಸುದ್ದಿಗಳು ಬೊಮ್ಮಾಯಿಯವರನ್ನು ಚಡಪಡಿಕೆಗೆ ನೂಕಿವೆ.ಏಕ‌ಕಾಲದಲ್ಲಿ ಅವರು ರಾಜ್ಯದ ಜನರು,ಹೈಕಮಾಂಡ್ ಹೆಚ್ಚೇಕೆ ಅವರ ಮೇಲೆ ಅವರಿಟ್ಟ ಭರವಸೆಯನ್ನೇ ಕಳೆದುಕೊಳ್ಳುವಂತೆ ಮಾಡಿದೆ.ಸಂಪುಟದ ಸದಸ್ಯರೇ ದೂರ ಓಡುತ್ತಿದ್ದಾರೆ.ಪಕ್ಷ ಅಂತರ ಕಾಯ್ದುಕೊಳ್ಳುತ್ತಿದೆ.ಎಲ್ಲರಿಂದಲೂ ಜಾಣ ಎಣಿಸಿಕೊಂಡವರು ಜಾರಿ ಬಿದ್ದಂತಾಗಿದೆ.ಒಟ್ಟಾರೆ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲರಾಗಿರುವ ಬಸವರಾಜ ಬೊಮ್ಮಾಯಿ ಬಂಗಾರವಿದ್ದರೂ ಶೃಂಗಾರ ಮಾಡಿಕೊಳ್ಳಲಾಗದ ಸ್ಥಿತಿ ತಲುಪಿದ್ದಾರೆ.

More News

You cannot copy content of this page