ಗಾಲ್ವಾನ್ ಘರ್ಷಣೆಯಲ್ಲಿದ್ದ ಚೀನಿ ಸೈನಿಕನ ಕೈಗೆ ಚಳಿಗಾಲದ ಒಲಿಂಪಿಕ್ಸ್ ಜ್ಯೋತಿ..! ಡ್ರ್ಯಾಗನ್ ಕಳ್ಳಾಟ ಮತ್ತೆ ಬಯಲು

ಕಳೆದ ವರ್ಷ ಭಾರತೀಯ ಸೈನಿಕರ ಜೊತೆ ಕಾಲ್ಕೆರೆದುಕೊಂಡು ಜಗಳಕ್ಕೆ ಬಂದಿದ್ದ ನೆರೆಯ ಶತ್ರು ರಾಷ್ಟ್ರ ಚೀನಾ ಇಡೀ ಜಗತ್ತಿನ ಮುಂದೆ ಬೆತ್ತಲಾಗಿ ನಿಂತಿತ್ತು. ಗಾಲ್ವಾನ್ ಘರ್ಷಣೆಯಲ್ಲಿ ನಮ್ಮ ಸೈನಿಕರಿಗೆ ಯಾವುದೇ ಹಾನಿಯಾಗಿಲ್ಲ ಎಂದು ಮೊಂಡುವಾದ ಮಾಡಿದ್ದ ಡ್ರ್ಯಾಂಗನ್ ರಾಷ್ಟ್ರದ ಮುಖವಾಡ ಇದೀಗ ಮತ್ತೆ ಬಯಲಾಗಿದೆ. ಗಾಲ್ವಾನ್ ಸಂಘರ್ಷದಲ್ಲಿ ೩೮ ಚೀನಿ ಸೈನಿಕರು ಹತರಾಗಿದ್ದಾರೆ ಎಂದು ಆಸ್ಚ್ರೇಲಿಯಾದ ಪತ್ರಿಕೆಯೊಂದು ವರದಿ ಮಾಡಿದೆ.

ಈ ಮಧ್ಯೆಯೇ, ಚೀನಾದ ದ್ವೇಷ ಬುದ್ದಿ ಮತ್ತೆ ಬಯಲಾಗಿದೆ. ಅದೇನೆಂದ್ರೆ, ಗಾಲ್ವಾನ್ ಘರ್ಷಣೆಯಲ್ಲಿ ಭಾಗಿಯಾಗಿದ್ದ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ ಅಧಿಕಾರಿಯೊಬ್ಬರ ಕೈಗೆ ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್ ನ ಸಾಂಪ್ರದಾಯಿಕ ಜ್ಯೋತಿಯನ್ನು ನೀಡಿರುವುದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

ಅಲ್ಲದೆ, ಚೀನಾದ ಈ ನಡೆ ಭಾರತದ ಕೆಂಗಣ್ಣಿಗೂ ಗುರಿಯಾಗಿದೆ. ಪೀಪಲ್ ಲಿಬರೇಷನ್ ಆರ್ಮಿಯ ರೆಜಿಮೆಂಟ್ ಕಮಾಂಡರ್ ಕ್ವಿ ಫಾಬಾವೋ ಕೈಗೆ ಚಳಿಗಾಲದ ಸಾಂಪ್ರದಾಯಿಕ ಒಲಿಂಪಿಕ್ಸ್ ಜ್ಯೋತಿಯನ್ನ ನೀಡಿರುವುದಕ್ಕೆ ಸದ್ಯ ಜಗತ್ತಿನಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ. ೨೦೨೦ರ ಜೂನ್ ೧೫, ೧೬ರಂದು ಗಾಲ್ವಾನ್ ಗಡಿಯಲ್ಲಿ ಚೀನಾ ಸೇನೆಯ ಕಮಾಂಡರ್ ಕ್ಲಿ ಫಾಬಾವೋ ನೇತೃತ್ವದಲ್ಲಿ ಡ್ರ್ಯಾಂಗನ್ ಯೋಧರು ಭಾರತೀಯ ಸೈನಿಕರ ಮೇಲೆ ಕಬ್ಬಿಣದ ರಾಡ್, ಮುಳ್ಳುತಂತಿ ಹಾಗೂ ಕಲ್ಲುಗಳಿಂದ ಮಾರಣಾಂತಿಕ ದಾಳಿ ನಡೆಸಿದ್ದರು.

ಈ ಘರ್ಷಣೆಯಲ್ಲಿ ಚೀನಿ ಕಮಾಂಡರ್ ಕ್ಲಿ ಫಾಬಾವೋ ತಲೆಗೆ ಗಂಭೀರ ಗಾಯವಾಗಿತ್ತು. ಚಳಿಗಾಲದ ಸಾಂಪ್ರದಾಯಿಕ ಒಲಿಂಪಿಕ್ಸ್ ಜ್ಯೋತಿಯನ್ನ ಹಿಡಿದಿರೋ ಚೀನಿ ಸೇನಾಧಿಕಾರಿ ಕ್ಸಿ ಫಾಬಾವೋನನ್ನು ಅಲ್ಲಿನ ಸುದ್ದಿ ಮಾಧ್ಯಮಗಳುಗ್ಲೋಬಲ್ ಟೈಮ್ಸ್ ಹೀರೋ` ಎಂದು ಕೊಂಡಾಡಿವೆ. ಇನ್ನು, ಬೀಜಿಂಗ್‌ನಲ್ಲಿ ನಡೆಯುತ್ತಿರುವ ಚಳಿಗಾಲದ ಒಲಿಂಪಿಕ್ಸ್ ಜ್ಯೋತಿಯನ್ನ ೧,೨೦೦ ಮಂದಿ ಹಿಡಿದು ಸಾಗಲಿದ್ದಾರೆ.

More News

You cannot copy content of this page