ಬೆಂಗಳೂರು : ಭಗವದ್ಗೀತೆಯನ್ನು ಶಾಲಾ ಪಠ್ಯಕ್ರಮದಲ್ಲಿ ಸೇರ್ಪಡೆ ಮಾಡುವುದರ ಕುರಿತು ವಿಚಾರವನ್ನು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಸ್ವಾಗತಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಗವದ್ಗೀತೆಯಲ್ಲಿ ಮಾನವೀಯ ಮೌಲ್ಯಗಳಿವೆ. ಅದರಿಂದ ಮಕ್ಕಳಲ್ಲಿ ಜ್ಞಾನದ ವಿಸ್ತಾರವಾಗುತ್ತದೆ. ಗುಜರಾತ್ ನಂತೆ ಕರ್ನಾಟಕದಲ್ಲೂ ಭಗವದ್ಗೀತೆಯನ್ನು ಶಾಲಾಪಠ್ಯಕ್ರಮದಲ್ಲಿ ಸೇರಿಸುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದ್ದಾರೆ.

ನಮ್ಮ ರಾಜ್ಯದಲ್ಲೂ ಆದಷ್ಟು ಬೇಗನೇ ಪಠ್ಯ ಕ್ರಮದಲ್ಲಿ ಭಗವದ್ಲೀತೆಯನ್ನು ಸೇರಿಸುವ ಕೆಲಸವಾಗಬೇಕು ಎಂದು ಸಚಿವ ಮುರುಗೇಶ್ ನಿರಾಣಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.