ಮಾರಲ್ ಸೈನ್ಸ್ ಪಠ್ಯಪುಸ್ತಕದಲ್ಲಿ ಅಳವಡಿಸಲು ಒತ್ತಾಯವಿದೆ, ಮುಂಬರುವ ದಿನಗಳಲ್ಲಿ ಚರ್ಚಿಸಿ ತೀರ್ಮಾನ: ಶಿಕ್ಷಣ ಸಚಿವ

ಬೆಂಗಳೂರು : ಮಾರಲ್ ಸೈನ್ಸ್ ಅನ್ನು ಪಠ್ಯಪುಸ್ತಕದಲ್ಲಿ ಅಳವಡಿಸುವಂತೆ ಹಲವರು ಒತ್ತಾಯಿಸಿದ್ದಾರೆ, ಇದನ್ನು ಮುಂದಿನ ದಿನಗಳಲ್ಲಿ ಅಳವಡಿಸುವ ಬಗ್ಗೆ ಸಿಎಂ ಜೊತೆ‌ ಚರ್ಚಿಸಲಾಗುವುದು ಎಂದು ಶಿಕ್ಷಣ ಸಚಿವ ನಾಗೇಶ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರಲ್ ಸೈನ್ಸ್ ಅನ್ನು ಅಳವಡಿಸುವುದರ ಕುರಿತು ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ತಜ್ಞರ ಸಲಹೆ ಪಡೆದು ತೀರ್ಮಾನಿಸಲಾಗುವುದು ಎಂದು ತಿಳಿಸಿದರು.
ಗುಜರಾತ್ ನಲ್ಲಿ ಭಗವದ್ಗೀತೆ ಸೇರಿಸುತ್ತೇವೆ ಎಂದು ಹೇಳಿದ್ದಾರೆ, ಭಗವದ್ಗೀತೆ ಪಠ್ಯಪುಸ್ತಕದಲ್ಲಿ ಸೇರಿಸಬಾರದು ಎಂದು ಹೇಳಿಲ್ಲ, ಮುಂಬರುವ ದಿನಗಳಲ್ಲಿ ಈ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಬೈಬಲ್‌, ಕುರಾನ್, ಭಗವದ್ಗೀತೆಗಳಲ್ಲಿ ಒಳ್ಳೆಯ ಅಂಶಗಳನ್ನು ಸೇರಿಸುವ ಕುರಿತು ಚರ್ಚಿಸಲಾಗುವುದು ಎಂದು ಹೇಳಿದರು.
ಈ ಹಿಂದೆ ಎಸ್.ಎಂ.ಕೃಷ್ಣ ಅವರು ಸಿಎಂ ಆಗಿದ್ದಾಗ ಅವರು ಕೂಡ ಭಗವದ್ಗೀತೆ‌ ಓದುತ್ತಿದ್ದರಂತೆ, ಪ್ರತಿ ರಾತ್ರಿ ಭಗವದ್ಗೀತೆ ಓದುತ್ತಿದ್ದೇ ಅವರ ಸ್ಟ್ರೆಂಥ್ ಅಂತಾ ಹೇಳಿದ್ದಾರೆ. ಈ ಬಗ್ಗೆ ಸ್ವತಃ ಮಾಜಿ ಸಿಎಂ ಅವರೇ ಹೇಳಿದ್ದಾರೆ ಎಂದು ಹೇಳಿದ ಅವರು, ಮಹಾತ್ಮ ಗಾಂಧಿಯವರು ತಮ್ಮ ಆತ್ಮಚರಿತ್ರೆಯಲ್ಲೂ ಈ ಬಗ್ಗೆ ಉಲ್ಲೇಖ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

ನನ್ನ ತಾಯಿ ಬಾಲ್ಯದಲ್ಲಿ ರಾಮಾಯಣ, ಮಹಾಭಾರತ ಹೇಳಿಕೊಟ್ಟಿದ್ದೇ‌ ನಾನು ಸತ್ಯವಂತನಾಗಿದ್ದು ಎಂದು ಹೇಳಿದ ಶಿಕ್ಷಣ ಸಚಿವರು, ಯೌವ್ವನದಲ್ಲಿ ಸತ್ಯ ಹರಿಶ್ಚಂದ್ರರ ನಾಟಕ ನೋಡಿದ್ದಕ್ಕೆ ನಾನು ಸತ್ಯವಂತನಾಗಿದ್ದು ಎಂದಿದ್ದಾರೆ. ಹೀಗಾಗಿ ಮಾರಲ್ ಸೈನ್ಸ್ ಅಳವಡಿಸುವುದರ ಬಗ್ಗೆ ಚರ್ಚಿಸುತ್ತೇವೆ ಎಂದು ಹೇಳಿದ್ದಾರೆ.

More News

You cannot copy content of this page