RSS LEADERS NAME GIVEN FOR WARD: BBMP BBMP ವಾರ್ಡ್ ಮರುವಿಂಗಡಣಾ ಕರಡು ವರದಿ: ಕಾಂಗ್ರೆಸ್ ಶಾಸಕರಿಗೆ ಅಘಾತ: ಆರ್ ಎಸ್ ಎಸ್ ಪ್ರಮುಖರ ಹೆಸರು ಸೇರ್ಪಡೆ

ಬೆಂಗಳೂರು : ಬೆಂಗಳೂರು ಮಹಾನಗರ ಪಾಲಿಕೆ (BBMP) ಬಿಬಿಎಂಪಿ ವಾರ್ಡ್ ಮರುವಿಂಗಡಣಾ ಕರಡು ವರದಿ ಕಾಂಗ್ರೆಸ್ ಶಾಸಕರಿಗೆ ಅಘಾತವನ್ನುಂಟು ಮಾಡಿದೆ.
ವಾರ್ಡ್ ಮರುವಿಂಗಡಣಾ ಸಮಿತಿಯಲ್ಲಿ ಇರುವ ಬಿಜೆಪಿ ಶಾಸಕರು ಮೇಲುಗೈ ಸಾಧಿಸಿದ್ದು, ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲಿನ ವಾರ್ಡ್‌ಗಳ ಸಂಖ್ಯೆ ಹೆಚ್ಚಳ ಮಾಡಲಾಗಿದೆ. ಇದರಿಂಂದ ಬಿಬಿಎಂಪಿ ಗದ್ದುಗೆ ಹಿಡಿಯಲು ಬಿಜೆಪಿ ಶಾಸಕರು ಮಾಸ್ಟರ್ ಪ್ಲಾನ್ ಮಾಡಿದ್ದಾರೆ.
ಡೀ ಲಿಮಿಟೇಷನ್ ಅನ್ನೂ ಕೂಡ ಬಿಜೆಪಿ ಶಾಸಕರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದು, 198 ವಾರ್ಡ್‌ಗಳನ್ನು ಜನಸಂಖ್ಯೆ ಆಧಾರದಲ್ಲಿ 243 ವಾರ್ಡ್‌ಗಳನ್ನಾಗಿ ಪರಿವರ್ತಿಸಲಾಗಿದೆ. ಕಾಂಗ್ರೆಸ್ ನ ಬಹುತೇಕ ಕ್ಷೇತ್ರಗಳಲ್ಲಿ ವಾರ್ಡ್‌ಗಳ ಸಂಖ್ಯೆ ಹೆಚ್ಚಿಸದೇ ಇರುವುದು ಕಾಂಗ್ರೆಸ್ ಶಾಸಕರಿಗೆ ಆಘಾತವನ್ನುಂಟುಮ ಮಾಡಿದೆ.
ಅದರ ಬದಲು ಬಿಜೆಪಿ ಶಾಸಕರ ಕ್ಷೇತ್ರಗಳಲ್ಲಿ ವಾಡ್೯ ಗಳ ಸಂಖ್ಯೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದೆ ಎಂಬ ಮಾತುಗಳು ಬಿಬಿಎಂಪಿ ವಲಯದಲ್ಲಿ ಕೇಳಿಬರುತ್ತಿದೆ. ಶಾಸಕರ ಕ್ಷೇತ್ರದಲ್ಲಿ ಹೆಚ್ಚಿನ ವಾರ್ಡ್‌ಗಳನ್ನು ಮಾಡುಲವುದರ ಮೂಲಕ ಅಲ್ಲಿ ಗೆದ್ದು, ಬಿಬಿಎಂಪಿ ಅಧಿಕಾರ ಹಿಡಿಯಲು ಸಿದ್ಧತೆ ನಡೆಸಿದೆ.
10 ಕ್ಷೇತ್ರಗಳ ವಾರ್ಡ್ ಸಂಖ್ಯೆ ಬದಲಿಲ್ಲ
ಸರ್ಕಾರಕ್ಕೆ ಸಲ್ಲಿಸಬೇಕಿರುವ ಕರಡು ವರದಿಯಲ್ಲಿರುವಂತೆ, 10 ವಿಧಾನಸಭಾ ಕ್ಷೇತ್ರಗಳಲ್ಲಿನ ವಾರ್ಡ್‌ಗಳ ಸಂಖ್ಯೆ ಹೆಚ್ಚಳವಾಗಿಲ್ಲ. ಕಾಂಗ್ರೆಸ್ ಶಾಸಕರಿರುವ ಶಿವಾಜಿನಗರ ಕ್ಷೇತ್ರದಲ್ಲಿ ಒಂದು ವಾರ್ಡ್ ಕಡಿಮೆ ಮಾಡಲಾಗಿದೆ. ಬೊಮ್ಮನಹಳ್ಳಿ ಈ ಹಿಂದಿಗಿಂತ 6 ವಾರ್ಡ್‌ಗಳನ್ನು ಹೆಚ್ಚಿಗೆ ಸೃಷ್ಟಿಸಲಾಗಿದೆ, ಉಳಿದಂತೆ ಬೆಂಗಳೂರು ದಕ್ಷಿಣ ಹಾಗೂ ಜೆಡಿಎಸ್ ಶಾಸಕರಿರುವ ಮತ್ತು ಬಿಜೆಪಿ ಪ್ರಭಾವ ಹೆಚ್ಚಿರುವ ದಾಸರಹಳ್ಳಿಯ ಕ್ಷೇತ್ರದಲ್ಲಿ ತಲಾ 5 ವಾರ್ಡ್‌ಗಳನ್ನು ಹೊಸದಾಗಿ ರಚಿಸಲಾಗಿದೆ.
ಹೊರ ವಲಯಗಳಲ್ಲಿ ಹೆಚ್ಚಿದ ವಾರ್ಡ್‌ಗಳು
2011ರ ಜನಗಣತಿ ಆಧಾರಿಸಿ ವಾರ್ಡ್ ಗಳನ್ನು ಮರುವಿಂಗಣೆ ಮಾಡಲಾಗಿದೆ. ಆಪ್ರಕಾರ 84.43 ಲಕ್ಷ ಜನಸಂಖ್ಯೆಯಿದ್ದು ಅದನ್ನು 243 ವಾರ್ಡ್‌ಗಳಿಗೆ ಹಂಚಿಕೆ ಮಾಡಲಾಗಿದೆ. ಪ್ರತಿ ವಾರ್ಡ್‌ಗೆ ಸರಾಸರಿ 35 ಸಾವಿರ ಜನಸಂಖ್ಯೆ ಬರಲಿದೆ.

ನಗರದ ಕೇಂದ್ರ ಭಾಗದಲ್ಲಿ ಅಷ್ಟೊಂದು ಪ್ರಮಾಣದ ಜನಸಂಖ್ಯೆ ಹೆಚ್ಚಳವಾಗಿಲ್ಲ. ಹೀಗಾಗಿ, ಬಿಬಿಎಂಪಿ ಕೇಂದ್ರ ವಲಯಗಳಾದ ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ವಲಯದ ವಾರ್ಡ್‌ಗಳ ಸಂಖ್ಯೆಯಲ್ಲಿ ವ್ಯತ್ಯಾಸವಿಲ್ಲ ಎಂಬ ಸಮಾಜಾಯಿಸಿ ಸಮತಿಯದ್ದಾಗಿದೆ.
ವಾರ್ಡ್‌ಗಳ ವಿವರಕ್ಷೇತ್ರ ಹಳೇ ಸಂಖ್ಯೆ ಹೊಸ ಸಂಖ್ಯೆ
ಬಿಟಿಎಂ ಲೇಔಟ್ ಮೊದಲು 8 ಈಗ 9 ವಾಡ್೯
ಬೆಂಗಳೂರು ದಕ್ಷಿಣ 8 13
ಬಸವನಗುಡಿ 6 7
ಬೊಮ್ಮನಹಳ್ಳಿ 8 14
ಬ್ಯಾಾಟರಾಯನಪುರ 7 11
ಸಿವಿ ರಾಮನ್‌ನಗರ 7 9
ಚಾಮರಾಜಪೇಟೆ 7 7
ಚಿಕ್ಕಪೇಟೆ 7 7
ದಾಸರಹಳ್ಳಿ 8 13
ಗಾಂಧಿನಗರ 7 7
ಗೋವಿಂದರಾಜನಗರ 9 9
ಹೆಬ್ಬಾಳ 8 8
ಜಯನಗರ 7 7
ಕೆ.ಆರ್.ಪುರ 9 13
ಮಹದೇವಪುರ 8 12
ಮಹಾಲಕ್ಷ್ಮೀಲೇಔಟ್ 7 9
ಮಲ್ಲೇಶ್ವರ 7 7
ಪದ್ಮನಾಭನಗರ 8 9
ಪುಲಕೇಶಿನಗರ 7 7
ರಾಜಾಜಿನಗರ 7 7
ರಾಜರಾಜೇಶ್ವರಿನಗರ 9 13
ಸರ್ವಜ್ಞನಗರ 8 10
ಶಾಂತಿನಗರ 7 7
ಶಿವಾಜಿನಗರ 7 6
ವಿಜಯನಗರ 8 9
ಯಲಹಂಕ 4 5
ಯಶವಂತಪುರ 5 8
ಒಟ್ಟು 198 243
ಬಿಬಿಎಂಪಿ ವಾರ್ಡ್ ಮರುವಿಂಗಡನೆಯಲ್ಲೂ ಆರ್ ಎಸ್ ಎಸ್ ಮೇಲೆ ಪ್ರೀತಿ
ಆಡಳಿತರೂಢ ಬಿಜೆಪಿ ಸರ್ಕಾರ, ಸ್ಥಳೀಯ ಶಾಸಕರ ಒತ್ತಡಕ್ಕೆ ಮಣಿದು ವಾರ್ಡ್ ಮರುವಿಂಗಡನೆಯಲ್ಲೂ ಆರ್ ಎಸ್ಎಸ್, ಜಾತಿ, ಧರ್ಮದ ವ್ಯಾಮೋಹ ತೋರಿಸಿದೆ. ಒಂದು ಸಮುದಾಯದ ಮೇಲೆ ಪ್ರೀತಿ-ಇನ್ನುಳಿದವರ ಮೇಲೆ ತಾತ್ಸಾರ ಮನೋಭಾವ ತೋರಿಸಿದೆ.
ಹಿಂದೂಗಳ ಓಲೈಕೆಗೆ ಮುಂದಾಯ್ತಾ ಸರ್ಕಾರ ? ವಾರ್ಡ್ ಗಳ ಹೆಸರಿಗೂ ಜಾತಿ ಕಳಂಕ ಮೆತ್ತಲು ಹುನ್ನಾರ ನಡೆಸಿದೆ ಎಂಬ ಆರೋಪ ಕೇಳಿಬರುತ್ತಿದೆ. ವಾರ್ಡ್ ಗಳ ಹೆಸರುಗಳ ವಿಷಯದಲ್ಲಿ ಸರ್ಕಾರದ ಹಿಡನ್ ಅಜೆಂಡಾ ಬಯಲಾಗಿದೆ. ಇದರಿಂದ ಬಿಬಿಎಂಪಿ ಚುನಾವಣೆ ಮೇಲೂ ಧರ್ಮರಾಜಕಾರಣದ ಕರಿನೆರಳು ಆವರಿಸಿದೆ.

198 ವಾರ್ಡ್ ಗಳಿದ್ದ ಬಿಬಿಎಂಪಿ ಈಗ 243 ವಾಡ್೯ಗಳಿಗೆ ವಿಸ್ತಾರಗೊಂಡಿದೆ. ಅನೇಕ ವಾರ್ಡ್ ಗಳ ಹೆಸರುಗಳಿಗೆ ಜಾತಿ ಲೇಪನ ಮಾಡುವಂತಹ ಕೆಲಸ ಮಾಡಿದೆ ಎಂಬ ದೂರುಗಳ ಬಂದಿವೆ. ಜಾತಿಗೆ ಹಾಗೂ ಸೀಮಿತವಾದ ವ್ಯಕ್ತಿಗಳ ಹೆಸರುಗಳ ನಾಮಕರಣ ಮಾಡಲು ಮುಂದಾಗಿದೆ.

ಆರ್ ಎಸ್ ಎಸ್ ಮುಖಂಡರುಗಳ ಹೆಸರುಗಳನ್ನು ಕೆಲವು ವಾರ್ಡ್ ಗಳಿಗೆ ಇಡಲು ಮುಂದಾಗಿದೆ. ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿರುವ ವಾರ್ಡ್ ಗಳಿಗೆ ವಿವಾದಿತರ ಹೆಸರುಗಳನ್ನೂ ಇಡಲಾಗಿದೆ ಎಂಬ ಮಾಹಿತಿಯಿದೆ. ಯಶವಂತಪುರ ಕ್ಷೇತ್ರದಲ್ಲಿ ವಾರ್ಡ್ ವೊಂದಕ್ಕೆ ಚತ್ರಪತಿ ಶಿವಾಜಿ ಹೆಸರನ್ನು, ಪದ್ಮನಾಭನಗರ ವಿಧಾನಸಭಾ ಕ್ಷೇತ್ರಗಳ ವಾರ್ಡ್ ಗಳಲ್ಲೂ ಅದೇ ಪ್ರಮಾದ ಮುಂದುವರೆದಿದೆ ಎನ್ನಲಾಗಿದೆ.

ಆರ್ ಎಸ್ ಎಸ್ ಪ್ರಮುಖರಾದ ಗೋಲ್ವಾಲ್ಕರ್, ಹೆಡಗೆವಾರ್ ಹೆಸರುಗಳು ಅಲ್ಲದೆ, ವೀರ ಸಾವರ್ಕರ್ ಹೆಸರಿನಲ್ಲೂ ವಾರ್ಡ್ ಹೆಸರಿಸಲಾಗಿದೆ ಎಂದು ತಿಳಿದುಬಂದಿದೆ. ಇದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಜಾತಿಯಾಧಾರದ ಮೇಲೆ ಚುನಾವಣೆ ನಡೆಸುವ ಸರ್ಕಾರದ ಉದ್ದೇಶಕ್ಕೆ ಆಕ್ಷೇಪ ವ್ಯಕ್ತವಾಗಿದೆ.

More News

You cannot copy content of this page