Seven passengers burnt alive: ಖಾಸಗಿ ಬಸ್ ಅಪಘಾತ: ಏಳು ಪ್ರಯಾಣಿಕರು ಸಜೀವ ದಹನ: ಹಲವರು ಗಾಯ

ಕಲಬುರಗಿ: ಖಾಸಗಿ ಬಸ್ ಮತ್ತು ಟೆಂಪೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬಸ್ ಸಂಪೂರ್ಣವಾಗಿ ಸುಟ್ಟು ಭಸ್ಮವಾದ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರದಲ್ಲಿ ನಡೆದಿದೆ. ಘಟನೆಯಲ್ಲಿ ಏಳು ಪ್ರಯಾಣಿಕರು ಸಜೀವ ದಹನರಾಗಿದ್ದಾರೆ. ಹಾಗೆಯೇ ಹಲವರು ಗಾಯಗೊಂಡಿದ್ದಾರೆ.ಅಪಘಾತದ ತೀವ್ರತೆಗೆ ಆರೆಂಜ್ ಡಿಲಕ್ಸ್ ಬಸ್ ಗೆ ಬೆಂಕಿ ಹತ್ತಿಕೊಂಡಿದೆ. ಹಲವರು ಬಸ್‌ನಿಂದ ಹೊರಗಡೆ ಬಂದು ಪ್ರಾಣಾಪಾಯದಿಂದ ಪಾರಾಗಿದ್ದು, ಏಳು ಜನರು ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗಿದ್ದಾರೆ.ತೆಲಂಗಾಣದ ಹೈದರಾಬಾದ್ ನಿಂದ ಗೋವಾಗೆ ಮೂರು ಕುಟುಂಬಗಳ 29 ಜನರು ಪ್ರವಾಸಕ್ಕೆ ತೆರಳುತ್ತಿದ್ದರು. ಗೋವಾದಿಂದ … Continue reading Seven passengers burnt alive: ಖಾಸಗಿ ಬಸ್ ಅಪಘಾತ: ಏಳು ಪ್ರಯಾಣಿಕರು ಸಜೀವ ದಹನ: ಹಲವರು ಗಾಯ