ಶೇ.66ರಷ್ಟು ಇಂಗಾಲದ ಡೈಆಕ್ಸೈಡ್ (CO2)ನ್ನು ಇ-ಕಾಮರ್ಸ್ & ಪಾರ್ಸಲ್ ಡೆಲಿವರಿ ಕಂಪನಿಗಳು ಹೊರಸೂಸುತ್ತಿವೆ : ಜಾಗತಿಕ ಸಮೀಕ್ಷೆ

ಬೆಂಗಳೂರು : ಸ್ಟ್ಯಾಂಡ್ ಅರ್ಥ್ ರೀಸರ್ಚ್ ಗ್ರೂಪ್ ಮತ್ತು ಕ್ಲೀನ್ ಮೊಬಿಲಿಟಿ ಕಲೆಕ್ಟಿವ್ ಜೊತೆಗೂಡಿ ಇತ್ತೀಚೆಗೆ ನಡೆಸಿರುವ ಸಮೀಕ್ಷೆಯ ಪ್ರಕಾರ, ಶೇ.4.5 ಮೆಗಾ ಟನ್ ಗಳಷ್ಟು ಇಂಗಾಲದ ಡೈಆಕ್ಸೈಡ್ (CO2) ನ್ನು ಆರು ಪ್ರಮುಖ ಜಾಗತಿಕ ಡೆಲಿವರಿ ಮತ್ತು ಇ-ಕಾಮರ್ಸ್ ಕಂಪನಿಗಳು ಹೊರಸೂಸುತ್ತಿವೆ ಎಂದು ತಿಳಿಸಿದೆ.
ಇತ್ತೀಚೆಗೆ ರೀಸರ್ಚ್ ಗ್ರೂಪ್ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದು, ಪ್ರಸ್ತುತ ಇ-ಕಾಮರ್ಸ್ ಕಂಪನಿಗಳು ಉಗುಳುತ್ತಿರುವ ಕಾರ್ಬನ್ ಡೈಆಕ್ಸೈಡ್ ಪ್ರಮಾಣವು, ಒಂದು ಮಿಲಿಯನ್ ಪೆಟ್ರೋಲ್ ಪ್ರಯಾಣಿಕರ ವಾಹನಗಳಿಂದ ಹೊರಹೊಮ್ಮುವ ವಾರ್ಷಿಕ ಕಾರ್ಬನ್ ಡೈಆಕ್ಸೈಡ್ ಗೆ ಸರಿಸಮನಾಗಿದೆ. ಮುಂಬರುವ ದಿನಗಳಲ್ಲಿ ಇದರ ಪ್ರಮಾಣವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಹೆಚ್ಚುತ್ತಿರುವ ಇಂಗಾಲದ ಡೈಆಕ್ಸೈಡ್ ಪ್ರಮಾಣಕ್ಕೆ ಕಾರಣ ಹುಡುಕುವುದಕ್ಕಾಗಿ ಯೂರೋಪ್, ಭಾರತ ಮತ್ತು ಉತ್ತರ ಅಮೆರಿಕದ 90 ಕೊರಿಯರ್ ಸಂಸ್ಥೆಗಳ ಸಮೀಕ್ಷೆ ನಡೆಸಲಾಗಿದೆ ಎಂದು ಸ್ಟ್ಯಾಂಡ್ ಅರ್ಥ್ ರೀಸರ್ಚ್ ಗ್ರೂಪ್ ನ ಪ್ರಮುಖ ಸಂಪಾದಕರಾದ ಗ್ರೆಗ್ ಹಿಗ್ಸ್ ತಿಳಿಸಿದ್ದಾರೆ.
ಒಟ್ಟಾರೆ ವರದಿಯ ಪ್ರಕಾರ, ಆರು ಅಗ್ರ ಇ-ಕಾಮರ್ಸ್ ಡೆಲಿವರಿ ಕಂಪನಿಗಳಾದ, ಯುಪಿಎಸ್, ಫೆಡೆಕ್ಸ್, ಅಮೆಜಾನ್ ಲಾಜಿಸ್ಟಿಕ್ಸ್, ಅಮೆಜಾನ್ ಕೊರಿಯರ್, ಡಿಪಿಡಿ (ಇಂಡಿಯಾದ ಕಾರ್ಯತಂತ್ರದ ಪಾಲುದಾರ ಡಿಟಿಡಿಸಿ), ಇ-ಕಾರ್ಟ್ (ಫ್ಲಿಪ್ ಕಾರ್ಟ್ ನ ಕೊರಿಯರ್ ವಿಭಾಗ) ಮತ್ತು ಡಿ‌ಎಚ್ಎಲ್ ಇ-ಕಾಮರ್ಸ್ ಇವುಗಳು, ಇಂಗಾಲದ ಡೈಆಕ್ಸೈಡ್ ಪ್ರಮಾಣವನ್ನು ತಗ್ಗಿಸಲು ಬದ್ಧತೆಯಲ್ಲಿ ಹಿಂದುಳಿದಿವೆ ಮತ್ತು ಪಾರದರ್ಶಕತೆಯನ್ನೂ ಅಷ್ಟಾಗಿ ಕಾಯ್ದುಕೊಂಡಿಲ್ಲ ಎಂದು ತಿಳಿಸಿದೆ.
ಸಮೀಕ್ಷೆಗೆ ಒಳಪಡಿಸಿದ ಯಾವುದೇ ಸಂಸ್ಥೆಗಳು, ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯ ಕುರಿತು ಸೂಕ್ತ ಮಾಹಿತಿ ನೀಡಿಲ್ಲ. ಈ ಪೈಕಿ 2/3ರಷ್ಟು CO2 ಹೊರಸೂಸುವ ಆರು ಪ್ರಮುಖ ಇ-ಕಾಮರ್ಸ್ ಡೆಲಿವರಿ ಸಂಸ್ಥೆಗಳ ಹೆಸರುಗಳನ್ನು ನಾವು ಗುರುತಿಸಿದ್ದೇವೆ. ಈ ಆರು ಕಂಪನಿಗಳು ತಮ್ಮ ಡೆಲಿವರಿಯ ಜೊತೆಗೆ ಉಪ/ಹೊರ ಗುತ್ತಿಗೆ ಡೆಲಿವರಿ ಸೇವೆ ಒದಗಿಸುವ ಮೂಲಕ ಪ್ರಾಥಮಿಕ ಹೊಣೆಗಾರರಾಗಿದ್ದಾರೆ ಎಂದು ನಮ್ಮ ವರದಿ ಹೇಳುತ್ತದೆ. ಆದರೆ, ನಮ್ಮ ಊಹೆಗೂ ಮೀರಿ ಪರಿಸರ ಮತ್ತು ಜನರ ಆರೋಗ್ಯದ ಮೇಲೆ ವೈತಿರಿಕ್ತ ಪರಿಣಾಮ ಬೀರಿರಬಹುದು.
ಭಾರತದಲ್ಲಿ ಸಮೀಕ್ಷೆ ನಡೆಸಲು ನಮ್ಮ ಸಂಸ್ಥೆಯು ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ಇ-ಕಾಮರ್ಸ್ ಡೆಲಿವರಿ ಸಂಸ್ಥೆಗಳ ಜೊತೆಗೆ ಹೆಚ್ಚುವರಿಯಾಗಿ, ಭಾರತೀಯ ಡೆಲಿವರಿ ಕಂಪನಿಗಳಾದ ಡಿಟಿಡಿಸಿ ಇಂಡಿಯಾ, ಬ್ಲೂ ಡಾರ್ಟ್ ಎಕ್ಸ್‌ಪ್ರೆಸ್‌, ಡೆಲಿವರಿ, ಶಾಡೋ ಫ್ಯಾಕ್ಸ್, ಇಕಾಂ ಎಕ್ಸ್‌ಪ್ರೆಸ್‌ ಮತ್ತಿತರ ಕಂಪನಿಗಳನ್ನು ಆಯ್ಕೆ ಮಾಡಿಕೊಂಡಿತ್ತು. ಇತರ ದೇಶಗಳಲ್ಲಿ ಕಂಡುಬಂದ ಫಲಿತಾಂಶಕ್ಕಿಂತ ಭಾರತದ ಫಲಿತಾಂಶ ಭಿನ್ನವೇನಿಲ್ಲ.
ಭಾರತದಲ್ಲಿ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯು ಪ್ರತಿ ಡೆಲಿವರಿಗೆ (285 gCO2) ಇದ್ದು, ಜಾಗತಿಕ ಪ್ರಮಾಣ (204 gCO2)ಕ್ಕಿಂತ ಗಣನೀಯವಾಗಿ ಹೆಚ್ಚಿ ದೆಎಂಬುದು ವರದಿಯಿಂದ ತಿಳಿದುಬಂದಿದೆ. ಭಾರತದ ಐದು ನಗರಗಳಾದ ದೆಹಲಿ, ಮುಂಬೈ, ಕಲ್ಕತ್ತಾ, ಬೆಂಗಳೂರು ಮತ್ತು ಚೆನ್ನೈ ನಲ್ಲಿ ವಿತರಣಾ ವಾಹನಗಳು ಹೊರಸೂಸುವ ಇಂಗಾಲದ ಡೈಆಕ್ಸೈಡ್ ಪ್ರಮಾಣವು, ಫ್ರಾನ್ಸ್ ಮತ್ತು ಕೆನಡಾದಂತಹ ದೇಶಗಳು ಒಟ್ಟಾರೆಯಾಗಿ ಹೊರಸೂಸುವ CO2ಗಿಂತ ಅಧಿಕವಾಗಿರುವುದು ಆತಂಕಕಾರಿ ಸಂಗತಿ.
ಭಾರತದಲ್ಲಿ ಕಂಡುಬಂದ ಅಂಕಿಅಂಶಗಳನ್ನು ಐರೋಪ್ಯ ದೇಶಗಳಿಗೆ ಹೋಲಿಸಿದರೆ, ಈ ಕೆಳಕಂಡ ಅಂಶಗಳ ಬಗ್ಗೆ ಭಾರತವು ಗಮನವಹಿಸಬೇಕಿದೆ – ಭಾರತವು ದಿನೇ ದಿನೇ ಅಭಿವೃದ್ಧಿ ಹೊಂದುತ್ತಿರುವುದರಿಂದ, ಇತರ ದೇಶಗಳಿಗಿಂತ ಇಲ್ಲಿನ ನಗರಗಳಲ್ಲಿ ದಟ್ಟಣೆ ಅಧಿಕವಾಗಿದೆ. ಹಾಗಾಗಿ, ಕೊನೆಯ ಮೈಲಿಯ ವಿತರಣೆಗಾಗಿ ವಿದ್ಯುತ್ ಚಾಲಿತ ವಾಹನಗಳ ಬಳಕೆಯ ಮೂಲಕ ಇಂಗಾಲದ ಪ್ರಮಾಣವನ್ನು ತಗ್ಗಿಸಬಹುದು. ಪ್ರಮುಖ ಇ-ಕಾಮರ್ಸ್ ಕಂಪನಿಗಳು ತಮ್ಮ ಭವಿಷ್ಯದ ದೃಷ್ಟಿಯಿಂದ ಈ ಪರಿಸರ ಸ್ನೇಹಿ ಸಾರಿಗೆ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದೆ.
ಆಸಕ್ತಿಕರ ಬೆಳವಣಿಗೆಯೆಂದರೆ, ಭಾರತೀಯ ಬ್ರಾಂಡ್ ಫ್ಲಿಪ್ ಕಾರ್ಟ್, 2030ರ ವೇಳೆಗೆ ತನ್ನೆಲ್ಲ ವಿತರಣಾ ವಾಹನಗಳನ್ನು ವಿದ್ಯುತ್ ಚಾಲಿತವಾಗಿ ಪರಿವರ್ತಿಸುವ ಬದ್ಧತೆಯೊಂದಿಗೆ, 2040ರ ವೇಳೆಗೆ ಶೂನ್ಯ ಹೊರಸೂಸುವಿಕೆಯ ಕಾರ್ಯಾಚರಣೆ ಗುರಿಯನ್ನು ಹೊಂದಿದೆ. ಇದಲ್ಲದೆ, ಕೇಂದ್ರ ಮತ್ತು ಹಲವಾರು ರಾಜ್ಯ ಸರ್ಕಾರಗಳಿಂದ ಘೋಷಿಸಲ್ಪಟ್ಟ ಮತ್ತು ಅನುಷ್ಠಾನದಲ್ಲಿರುವ ನಿಯಂತ್ರಕ ಮಾರ್ಗಗಳು ಮತ್ತು ಸಾಧನಗಳ ಶ್ರೇಣಿಯೊಂದಿಗೆ, CO2 ಪ್ರಮಾಣವನ್ನು ತಗ್ಗಿಸಬಹುದಾಗಿದ್ದು, ವಿದ್ಯುತ್ ಚಾಲಿತ ವಾಹನಗಳು ಭೂಕಂಪತಹ ಸನ್ನಿವೇಶಗಳ ಇಳಿಕೆಗೆ ಸಹಕಾರಿಯಾಗಬಲ್ಲವು. ಉದಾಹರಣೆಗೆ, ದೆಹಲಿ, ಮಹಾರಾಷ್ಟ್ರದಂತಹ ಪ್ರಮುಖ ರಾಜ್ಯಗಳು ನೀತಿ ಆಯೋಗದ ಅಭಿಯಾನದ ಮೂಲಕ, ಕೊನೆಯ ಮೈಲಿಯ ವಿತರಣಾ ವಲಯವನ್ನು ಡಿಕಾರ್ಬನೈಜ್ ಮಾಡಲು ಅಗತ್ಯ ನೀತಿಗಳು ಮತ್ತು ನಿಬಂಧನೆಗಳನ್ನು ಕಂಡುಕೊಳ್ಳುವಲ್ಲಿ ಸಕ್ರೀಯವಾಗಿವೆ.

“ಪ್ರತಿದಿನ ಲಕ್ಷಾಂತರ ವಿತರಣಾ ವಾಹನಗಳು ಕೈಗೊಳ್ಳುವ ಸಣ್ಣ ಪ್ರಯಾಣಗಳು ಮಾಲಿನ್ಯ, ಹೊಗೆ, ಗಾಳಿಯ ಗುಣಮಟ್ಟ ಮತ್ತು ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ನಿಸ್ಸಂಸಯ. ಅಲ್ಲದೇ, ಇದರಿಂದ ನಾವು ಭವಿಷ್ಯದಲ್ಲಿ ಶೂನ್ಯ-ಹೊರಸೂಸುವಿಕೆ ಸಾಧಿಸಲು ಸಾಧ್ಯವಿಲ್ಲ. ಹಾಗಾಗಿ, ಉದ್ಯಮಗಳು ಸರ್ಕಾರಗಳೊಂದಿಗೆ ಸಹಕರಿಸುವುದು ಮತ್ತು ಸಮಯಕ್ಕೆ ಸೀಮಿತವಾದ ಯೋಜನೆಗಳಿಗೆ ಬದ್ಧರಾಗುವ ಅಗತ್ಯವಿದೆ. ಇದು ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ಪ್ರಮಾಣ ತಗ್ಗಿಸಲು ಸಹಕಾರಿಯಾಗಲಿದೆ ಎಂದು” ಕ್ಲೀನ್ ಮೊಬಿಲಿಟಿ ಕಲೆಕ್ಟಿವ್ ಇಂಡಿಯಾ ಸಂಯೋಜಕ ಸಿದ್ಧಾರ್ಥ್ ಶ್ರೀನಿವಾಸ್ ಹೇಳಿದರು.
ಭಾರತೀಯ ಪರಿಸರ ವ್ಯವಸ್ಥೆಯನ್ನು ಬೃಹತ್ ಪ್ರಮಾಣದಲ್ಲಿ ವಿಸ್ತರಿಸುವ ಮಹತ್ವಾಕಾಂಕ್ಷೆಯೊಂದಿಗೆ, ವಿತರಣಾ ಕಂಪನಿಗಳು, ಪರಿಸರ, ಹವಾಮಾನದ ಹೊಣೆಗಾರಿಕೆ ಮತ್ತು ಬದ್ಧತೆಗಳೊಂದಿಗೆ ಕಾರ್ಯಪ್ರವೃತ್ತರಾಗಬೇಕು. ಪಾರದರ್ಶಕ ರೀತಿಯಲ್ಲಿ ತಮ್ಮ ವಿತರಣಾ ವಾಹನಗಳನ್ನು ಹೇಗೆ ಡಿಕಾರ್ಬನೈಸ್ ಮಾಡಬೇಕೆಂಬ ಕುರಿತು ಯೋಚಿಸಬೇಕು.
“ಈ ವಲಯವು ಎದುರಿಸುತ್ತಿರುವ ಸವಾಲುಗಳನ್ನು ಒಪ್ಪಿಕೊಂಡು, ಕ್ಲೈಮೇಟ್ ಗ್ರೂಪ್ ನ ಬ್ಯುಸಿನೆಸ್ ಆಕ್ಷನ್ ಇಂಡಿಯಾದ ಮುಖ್ಯಸ್ಥ ಅತುಲ್ ಮೊದಲಿಯಾರ್, ಇದು ಕೇವಲ ಇ-ಕಾಮರ್ಸ್ ಅಥವಾ ವಿತರಣಾ ವಲಯದ ಸಮಸ್ಯೆಯಲ್ಲ. ಇದು ಜಾಗತಿಕವಾಗಿ ಉದ್ಯಮದಾದ್ಯಂತ ವಿಸ್ತರಿಸಿದೆ. ಸ್ಕೋಪ್ 3 ಹೊರಸೂಸುವಿಕೆಗಳು, ಉಪ-ಗುತ್ತಿಗೆ ಪಡೆದ ಕೊನೆಯ ಮೈಲಿಯ ವಿತರಣಾ ಪಾಲುದಾರರನ್ನು ಒಳಗೊಂಡಂತೆ ವಿಸ್ತ್ರತ ಪೂರೈಕೆ ಸರಪಳಿಯಿಂದ ಹೊರಸೂಸುವಿಕೆಯನ್ನು ಉಲ್ಲೇಖಿಸುತ್ತದೆ. ಕಂಪನಿಯ ನೇರ ನಿಯಂತ್ರಣದ ಹೊರಗೆ ಅಸ್ಥಿರವಾಗಿದ್ದು, ಅವುಗಳನ್ನು ಪ್ರಮಾಣೀಕರಿಸುವುದು ಅತ್ಯಂತ ಕಷ್ಟಕರವಾಗಿದೆ. ಆದ್ದರಿಂದ ಕನಿಷ್ಠ ವರದಿಯಾಗಿದೆ. ಉದ್ಯಮದ ಹೆಚ್ಚಿನ ಗಮನವು ಸ್ಕೋಪ್ 1 & ಸ್ಕೋಪ್ 2 ನ್ನು ನಿರ್ವಹಿಸುವುದರ ಮೇಲೆ ಕೇಂದ್ರೀಕೃತವಾಗಿದೆ. ಇದು ಕಂಪನಿಗಳ ಕಾರ್ಯಾಚರಣೆಯೊಳಗಿನ ಆಂತರಿಕ ಹೊರಸೂಸುವಿಕೆಗಳಿಗೆ ಅನ್ವಯಿಸುತ್ತದೆ. ಏಕೆಂದರೆ, ಅವುಗಳು ಪ್ರಾರಂಭಿಸಲು ಸುಲಭವಾಗಿವೆ. ಆದರೆ, ವಿಧಾನವು ನಿಧಾನವಾಗಿ ಬದಲಾಗುತ್ತಿದೆ ಮತ್ತು ಇನ್ನು ವೇಗವಾಗಿ ಬದಲಾಗಬೇಕಾಗುತ್ತದೆ. ಇ-ಕಾಮರ್ಸ್ ನಲ್ಲಿ ಸ್ಕೋಪ್ 3 ಹೊರಸೂಸುವಿಕೆಯು ದೊಡ್ಡ ಚಾಲಕವಟಗಿದ್ದರೆ, ಉದ್ಯಮವು ಪಾರದರ್ಶಕ ಲೆಕ್ಕಪತ್ರ ನಿರ್ವಹಣೆ ಮತ್ತು ಬಹಿರಂಗ ಪಡಿಸುವಿಕೆಯಲ್ಲಿ ಹೂಡುಕೆ ಮಾಡಬೇಕು” ಎಂದು ಅಭಿಪ್ರಾಯಪಟ್ಟರು.

ಮುಂದುವರಿದು ಮಾತನಾಡಿದ ಅವರು, ಭಾರತದ ಮಾರುಕಟ್ಟೆಯಲ್ಲಿ 2030ರ ವೇಳೆಗೆ ಸುಮಾರು 350 ಬಿಲಿಯನ್ ಡಾಲರ್ ಹೂಡಿಕೆಯು, ಈ ಸಮಸ್ಯೆಯನ್ನು ನಿಭಾಯಿಸುಲು ಮಾರ್ಗವನ್ನು ತೋರಿಸುತ್ತದೆ. ಸ್ಕೋಪ್ 3 ಸೇರಿದಂತೆ, ಶೂನ್ಯ ಹೊರಸೂಸುವಿಕೆಯನ್ನು ನಿರ್ವಹಿಸಲು ತಮ್ಮ ವಿಸ್ತೃತ ಮೌಲ್ಯ ಸರಪಳಿಯನ್ನು ತೊಡಗಿಸಿಕೊಳ್ಳುವುದರ ಜೊತೆಗೆ 2030ರ ವೇಳೆಗೆ ಸಂಪೂರ್ಣ ಬದ್ಧವಾಗಿರುವ ಭಾರತೀಯ ಸ್ವದೇಶಿ ಬ್ರಾಂಡ್ ಆದ ಫ್ಲಿಪ್ ಕಾರ್ಟ್ನ್ನು ವರದಿಯು ಅಂಗೀಕರಿಸಿದೆ ಎಂಬುದು ಗಮನಾರ್ಹವಾಗಿದೆ ಎಂದು ತಿಳಿಸಿದರು.
ಕ್ಲೀನ್ ಮೊಬಿಲಿಟಿ ಕಲೆಕ್ಟಿವ್ (CMC) ಬಗ್ಗೆ
ಕ್ಲೀನ್ ಮೊಬಿಲಿಟಿ ಕಲೆಕ್ಟಿವ್, ಸಾರಿಗೆ ಕ್ಷೇತ್ರದ ಡಿಕಾರ್ಬನೈಸೇಶನ್ ಒತ್ತಾಯಿಸುವ ಮೂಲಕ, ಹವಾಮಾನ ಬದಲಾವಣೆ ಮೇಲೆ ನಮ್ಮ ಪ್ರಭಾವವನ್ನು ಸೀಮಿತಗೊಳಿಸಲು ಬದ್ಧವಾಗಿರುವ ಅಂತಾರಾಷ್ಟ್ರೀಯ ಜಾಲವಾಗಿದೆ. ಇದು 2030ರ ವೇಳೆಗೆ ಪ್ರಮುಖ ನಗರಗಳು ಮತ್ತು ಜಾಗತಿಕ ವಿತರಣಾ ವಾಹನಗಳ ಆಪರೇಟರ್ ಗಳನ್ನು 100% ಶೂನ್ಯ ಹೊರಸೂಸುವಿಕೆಗಾಗಿ ಪರಿವರ್ತಿಸುವುದು, ಅಳವಡಿಕೆ ಮತ್ತು ವಾಯುಮಾಲಿನ್ಯವನ್ನು ಪರಿಹರಿಸಲು ಸ್ಥಳೀಯ ಸರ್ಕಾರದ ಕ್ರಮಗಳೊಂದಿಗೆ ಸಹಕರಿಸುವುದಾಗಿದೆ.
ಸ್ಟ್ಯಾಂಡ್.ಅರ್ಥ್ ಗ್ರೂಪ್ ಬಗ್ಗೆ
ಸ್ಟ್ಯಾಂಡ್.ಅರ್ಥ್ ರೀಸರ್ಚ್ ಗ್ರೂಪ್ (SRG) ನಿರ್ಣಾಯಕ ವಿಷಯಗಳ ಕುರಿತು ಅಭಿಯಾನಗಳನ್ನು ಕೈಗೊಳಲು ಸಹಾಯ ಮಾಡಲು, ನಿರ್ಣಾಯಕ ಮಾಹಿತಿಯನ್ನು ಪಡೆಯುತ್ತದೆ. SRGಯು ಕಸ್ಟಡಿ ಸಂಶೋಧನಾ ಸರಪಳಿಯಲ್ಲಿ ಪರಿಣತಿ ಹೊಂದಿದೆ. ಕಚ್ಚಾ ವಸ್ತುಗಳನ್ನು ಕಷ್ಟಕರವಾಗಿ ಪೂರೈಸುವ ಸರಪಳಿಯನ್ನು ಗುರುತಿಸುವುದು ಮತ್ತು ಪತ್ತೆಹಚ್ಚುವುದು, ಪರಿಸರ ನಾಶ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯನ್ನು ಪತ್ತೆ ಹಚ್ಚುವುದು, ಕಾರ್ಪೋರೆಟ್ ಖಳನಾಯಕರನ್ನು ಹೊಣೆಗಾರರನ್ನಾಗಿ ಮಾಡಲು ಸಹಾಯ ಮಾಡುತ್ತದೆ. ಅಂತಿಮವಾಗಿ ಕಾರ್ಪೊರೇಟ್ ವಲಯದ ಕೆಟ್ಟ ಅಭ್ಯಾಸಗಳನ್ನು ಬದಲಾಯಿಸುತ್ತದೆ.

More News

You cannot copy content of this page