ಬೆಂಗಳೂರು : ರಾಜ್ಯದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಕೋಚಿಂಗ್ ಸೆಂಟರ್ ಗಳ ಮೇಲೆ ಕಠಿಮ ಕ್ರಮ ಕೈಗೊಳ್ಳಬೇಕೆಂದು ನೋಂದಾಯಿತ ಅನುದಾನ ರಹಿತ ಶಾಲೆಗಳ ಮ್ಯಾನೇಜಮೆಂಟ್ ಸಂಘ(RUPSA KARNATAKA) ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಈ ಸಂಬಂಧ ಖಾಸಗಿ ಶಾಲಾ ಒಕ್ಕೂಟ ರುಪ್ಸಾ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಅಕ್ರಮ ಶಾಲೆಗಳಿಗಿಂತ ಟ್ಯೂಷನ್ ಸೆಂಟರ್ ಹಾವಳಿ ಹೆಚ್ಚಾಗಿದೆ, ಶಾಲಾ ಕಾಲೇಜಿನ ಶುಲ್ಕಕ್ಕಿಂತ ಹತ್ತು ಪಟ್ಟು ಟ್ಯೂಷನ್ ಕೇಂದ್ರಗಳು ವಸೂಲಿ ಮಾಡುತ್ತಿವೆ ಎಂದು ಅವರು ಪತ್ರದಲ್ಲಿ ಆರೋಪಿಸಿದ್ದಾರೆ.

ಆದರೆ, ಇದಕ್ಕೆ ಕಡಿವಾಣ ಹಾಕಲು ಶಿಕ್ಷಣ ಇಲಾಖೆ ಮುಂದಾಗಿಲ್ಲ, ಮಕ್ಕಳಿಗೆ ಸೂಕ್ತ ಸ್ಥಳಾವಕಾಶ, ಪೀಠೋಪಕರಣ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲ ಸೌಕರ್ಯಗಳನ್ನೂ ಟ್ಯೂಷನ್ ಸೆಂಟರ್ ಗಳು ಹೊಂದಿಲ್ಲ, ಶಾಲೆಗಳಿಗೆ ಅನ್ವಯಿಸುವ ಕಟ್ಟಡ ಸುರಕ್ಷತೆ ಹಾಗೂ ಅಗ್ನಿ ಸುರಕ್ಷತೆ ಮಾನದಂಡಗಳನ್ನೂ ಕೋಚಿಂಗ್ ಸೆಂಟರ್ ಗಳಿಗೆ ಅನ್ವಯಿಸುವುದಿಲ್ಲವಾ ಎಂದು ಸರ್ಕಾರಕ್ಕೆ ರುಪ್ಸಾ ಪ್ರಶ್ನಿಸಿದೆ.

ನಾಯಿಕೊಡೆಗಳಂತೆ ತಲೆ ಎತ್ತಿರುವ ಕೋಚಿಂಗ್ ಸೆಂಟರ್ ಮೇಲೆ ಕ್ರಮಕ್ಕೆ ಅಗ್ರಹಿಸಿದ ಒಕ್ಕೂಟ, ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಕ್ರಮ ಜರಗಿಸುವಂತೆ ರುಪ್ಸಾ ಒತ್ತಾಯಿಸಿದೆ.
#rupsa #private management #coaching centers #illegal #state govenment #cm basavaraj bommai