ದೆಹಲಿ : ಸಂಸತ್ ಎನ್ನುವುದು ಒಂದು ಪವಿತ್ರ ಸ್ತಳ, ಇಲ್ಲಿ ನಾವು ಯಾವುದೇ ವಿಷಯವನ್ನು ಚರ್ಚಿಸೋಣ, ಈ ಚರ್ಚೆಯಲ್ಲಿ ವಿರೋಧ ಪಕ್ಷಗಳೂ ಸಕ್ರೀಯವಾಗಿ ಪಾಲ್ಗೊಂಡು ಅರ್ಥಪೂರ್ಣ ಸಂವಾದ ನಡೆಸೋಣ, ಬೇಕಿದ್ದರೆ ವಿಚಾರಗಳ ಸಂಬಂಧ ವಾದ- ವಿವಾದಗಳು ನಡೆಯಲಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಇಂದಿನಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಿದೆ. ಹಾಗೆಯೇ ಇಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ಸುದ್ದಿಗಾರೊರೊಂದಿಗೆ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ನಾವೀಗ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದೇವೆ. ದೇಶಕ್ಕೆ ಮಾರ್ಗದರ್ಶನ ನೀಡುವ ರೀತಿಯಲ್ಲಿ ಸಂಸತ್ತಿನ ಹಿರಿಮೆಯನ್ನು ಹೆಚ್ಚಿಸುವತ್ತ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಇದೇ ಸಂದರ್ಭದಲ್ಲಿ ಪ್ರಧಾನಿ ಅವರು ಕರೆ ನೀಡಿದರು.

ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಹೊಸ ಉತ್ಸಾಹ ತುಂಬಲು ಸಂಸತ್ ಸದಸ್ಯರು ಶ್ರಮಿಸಬೇಕು ಎಂದ ಪ್ರಧಾನಿ ಅವರು, ದೇಶಕ್ಕಾಗಿ ತ್ಯಾಗ ಬಲಿದಾನಗಳನ್ನು ನಾವೆಲ್ಲರೂ ನೆನಪಿಸಿಕೊಳ್ಳಬೇಕು, ಅವರ ಆಶಯಗಳಿಗೆ ಧಕ್ಕೆಯಾಗದಂತೆ ವರ್ತಿಸಬೇಕು ಎಂದರು.
#independent day #ambruth mahothsava #primeminister #narendra modi #member of parliment