ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯ ಬಿಜೆಪಿ ಮುಖಂಡ ಪ್ರವೀಣ್ ನೆಟ್ಯಾರು ಹತ್ಯೆಯಾಗಿ ಹಲವು ದಿನಗಳೇ ಕಳೆದು ಹೋಗಿವೆ. ಯಾರು, ಯಾವ ಕಾರಣಕ್ಕಾಗಿ ಕೊಲೆ ಮಾಡಿದ್ರು ಅನ್ನೋದು ಮಿಸ್ಚ್ರಿಯಾಗಿಯೇ ಉಳಿದಿದೆ, ಎಲ್ಲಾ ದಿಕ್ಕುಗಳಲ್ಲೂ ತನಿಖೆ ನಡೆಸುತ್ತಿರೋ ಪೊಲೀಸರು ಅನುಮಾನದ ಮೇಲೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಆದರೆ ಮರ್ಡರ್ ಕೇಸ್ ನಲ್ಲಿ ಇದುವರೆಗೂ ಯಾವುದೇ ಕ್ಲಿಯರ್ ಆಗಿರೋ ಕ್ಲಾರಿಟಿ ಸಿಕ್ಕಿಲ್ಲಾ. ಹೀಗುವಾಗಲೇ ಪ್ರವೀಣ್ ಕೊಲೆ ವಿಚಾರವಾಗಿ ರಾಜ್ಯ ಸರ್ಕಾರ ಹಾಗೂ ಪಕ್ಷದ ವೈಫಲ್ಯ ಬೀದಿಗೆ ಬಂದಿದೆ, ತಮ್ಮದೇ ಪಕ್ಷದ ಕಾರ್ಯಕರ್ತರನ್ನು ರಕ್ಷಣೆ ಮಾಡಲು ಸಾಧ್ಯವಾಗದ ಸರ್ಕಾರದ ವಿರುದ್ಧ ಸ್ವಪಕ್ಷದವರೇ ಕೆಟ್ಟದಾಗಿ ಮಾತನಾಡುತ್ತಿದ್ದಾರೆ.
ಹೀಗಾಗಿ ಬಿಜೆಪಿಗೆ ಮತ್ತು ಸರ್ಕಾರದ ವರ್ಚಸ್ಸಿಗೆ ಕೊಡಲಿ ಪೆಟ್ಟು ಬಿದ್ದಂತಾಗಿದೆ. ಎಷ್ಟೇ ಡ್ಯಾಮೇಜ್ ಕಂಟ್ರೋಲ್ ಮಾಡಲು ಮುಂದಾದ್ರೂ ನಾಯಕರಿಗೆ ಅದು ಸಾಧ್ಯವಾಗುತ್ತಿಲ್ಲ. ಇದನ್ನೇ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಲು ನಿಕಟ ಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಡ್ಯಾಮೇಜ್ ಕಂಟ್ರೋಲ್ ಮಾಡಲು ಸರ್ಕಾರ ವಿಫಲಾಗಿದೆ ಅನ್ನೋದನ್ನು ಕೇಂದ್ರ ನಾಯಕರಿಗೆ ಮನವರಿಕೆ ಮಾಡಿ ಕೊಡುವ ಮೂಲಕ ತಮ್ಮ ಕಾರ್ಯ ಸಾಧನೆಗೆ ಬಿಎಸ್ ವೈ ಪ್ಲಾನ್ ರೂಪಿಸಿದ್ದಾರಂತೆ. ಹೌದು ಪಕ್ಷ ಸಂಘಟನೆ ಹೆಸರಿನಲ್ಲಿ ರಾಜ್ಯ ಪ್ರವಾಸ ಕೈಗೊಳ್ಳಲು ನಿರ್ಧಾರ ಮಾಡಿದ್ದಾರೆ.
ಈ ಮೂಲಕ ತಮ್ಮ ಪುತ್ರ ವಿಜಯೇಂದ್ರಗೆ ಟಿಕೆಟ್ ಕೊಡಿಸೋದ್ರ ಜೊತೆಗೆ ರಾಜಕೀಯದಲ್ಲಿ ಭದ್ರ ನೆಲೆ ಕಲ್ಪಿಸೋ ಸಂಕಲ್ಪ ಯಡಿಯೂರಪ್ಪ ಅವರದ್ದಾಗಿದೆ ಅಂತೆ. ರಾಜ್ಯ ಪ್ರವಾಸ ಮಾಡಿ ತಮ್ಮ ವಿರುದ್ಧ ಇರುವ ಪಕ್ಷದ ನಾಯಕರು, ಶಾಸಕರ ಹೆಡೆ ಮುರಿಕಟ್ಟಲು ಸಿದ್ಧತೆ ನಡೆಸಿದ್ದಾರೆ. ಈ ಮೂಲಕ ಸರ್ಕಾರ ಹಾಗೂ ಸಂದಿಗ್ಧ ಪರಿಸ್ಥಿತಿ ಬಳಸಿಕೊಂಡು ಮತ್ತೆ ರಾಜಕೀಯದಲ್ಲಿ ಸಕ್ರಿಯವಾಗಿರಲು ಯಡಿಯೂರಪ್ಪ ಅವರು ವೇದಿಕೆ ರೆಡಿ ಮಾಡಿಕೊಳ್ಳುತ್ತಿದ್ದಾರೆ ಅನ್ನೋ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣಾಗಿದೆ.
ರಾಜ್ಯ ಪ್ರವಾಸ ಮಾಡಿ ತಮ್ಮ ವಿರುದ್ಧ ಇರುವ ಪಕ್ಷದ ನಾಯಕರು, ಶಾಸಕರ ಹೆಡೆ ಮುರಿಕಟ್ಟಲು ಸಿದ್ಧತೆ ನಡೆಸಿದ್ದಾರೆ. ಈ ಮೂಲಕ ಸರ್ಕಾರ ಹಾಗೂ ಸಂದಿಗ್ಧ ಪರಿಸ್ಥಿತಿ ಬಳಸಿಕೊಂಡು ರಾಜಕೀಯದಲ್ಲಿ ಸಕ್ರಿಯವಾಗಿರಲು ಯಡಿಯೂರಪ್ಪ ಅವರು ವೇದಿಕೆ ರೆಡಿ ಮಾಡಿಕೊಳ್ಳುತ್ತಿದ್ದಾರೆ ಅನ್ನೋ ಮಾತುಗಳು ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.

ಇದರ ಜತೆಯಲ್ಲಿಯೇ ಬಿಜೆಪಿಗೆ ಮಾಜಿ ಸಿಎಂ ಯಡಿಯೂರಪ್ಪ ಬಿಟ್ಟರೇ ಬೇರೆ ವಿಧಿಯಿಲ್ಲ, ಅವರು ಪಕ್ಷಕ್ಕೆ ಕೈಕೊಟ್ಟರೆ ಪಕ್ಷ ಅತೀ ಕಡಿಮೆ ಸೀಟು ಬರಲಿವೆ ಎಂಬಿತ್ಯಾದಿ ಲೆಕ್ಕಾಚಾರಗಳು ಬಿಜೆಪಿಯಲ್ಲಿ ನಡೆಯುತ್ತಿವೆ. ಅನೇಕರು ಬಿಎಸ್ ವೈ ಮತ್ತೆ ಸಕ್ರೀಯ ರಾಜಕಾರಣಕ್ಕೆ ಬರಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಪಕ್ಷದ ಹೈಕಮಾಂಡ್ ಒಪ್ಪಬೇಕು. ಒಂದು ವೇಳೆ ಒಪ್ಪಿದರೆ ಮತ್ತೆ ತಮ್ಮ ಪುತ್ರನಿಗೆ ಅವರು ಭದ್ರ ರಾಜಕೀಯ ಬುನಾದಿ ಹಾಕಿಕೊಡುವುದರಲ್ಲಿ ಸಂಶಯವಿಲ್ಲ.