ಬೆಂಗಳೂರು : ಸವಿತಾ ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಮತ್ತು ಸವಿತಾ ಸಮಾಜದ ಸ್ವಾಮೀಜಿ ನಡುವಿನ ಗುದ್ದಾಟ ಮುಂದುವರಿದಿದೆ. ಸವಿಜಾ ಸಮಾಜ ನಿಗಮದ ಅಧ್ಯಕ್ಷ ನರೇಶ್ ಬದಲಾವಣೆಗಾಗಿ ಸ್ವಾಮೀಜಿ ಪಟ್ಟು ಹಿಡಿದಿದ್ದು, 24 ಗಂಟೆ ಗಡುವು ನೀಡಿದ್ದು, ಅದರೊಳಗೆ ಬದಲಾಗಬೇಕೆಂದು ಆಗ್ರಹಿಸಿದ್ದಾರೆ.
ಅಧ್ಯಕ್ಷರ ಬದಲಾವಣೆಗಾಗಿ ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಕಚೇರಿ ಮುಂದೆ ಭಿಕ್ಷಾಟನೆ ಮಾಡೋ ಮೂಲಕ ಪ್ರತಿಭಟನೆ ನಡೆಸಿದರು. ಹಣ ಪಡೆದು ನರೇಶನನ್ನು ನೇಮಕ ಮಾಡಲಾಗಿದೆ ನಾವು ಹಣ ಕೊಡುತ್ತೇವೆ ನರೇಶನನ್ನು ಸವಿತಾ ಸಮಾಜ ಅಭಿವೃದ್ಧಿ ನಿಗಮ ಅಧ್ಯಕ್ಷ ಸ್ಥಾನದಿಂದ ತೆಗೆಯಬೇಕು ಅಂತಾ ಹಣ ಸಂಗ್ರಹ ಮಾಡಿ ಆಕ್ರೋಶ ಹೊರಹಾಕಿದರು.

ಇದೇ ವೇಳೆ ಮಾತನಾಡಿದ ಸವಿತಾ ಸಮಾಜದ ಸವಿತಾನಂದ ಸ್ವಾಮೀಜಿ ಹಣ ಕೊಟ್ಟು ಅಧ್ಯಕ್ಷಗಿರಿ ಪಡೆದಿರೋದಾಗಿ ನರೇಶ್ ಹೇಳಿಕೊಂಡು ಓಡಾಡುತ್ತಿದ್ದಾನೆ. 24ಗಂಟೆಯೊಳಗೆ ಸವಿತಾ ಸಮಾಜ ಅಧ್ಯಕ್ಷ ಸ್ಥಾನದಿಂದ ನರೇಶನ್ನು ಬದಲಾವಣೆ ಮಾಡಬೇಕು ಅಂತಾ ಸರ್ಕಾರಕ್ಕೆ ಗಡುವು ಕೊಟ್ಟರು.


ಒಂದು ವೇಳೆ ಹಣ ಪಡೆದು ನೇಮಕ ಮಾಡಿದ್ರೆ ನಾವು ಕೂಡ ಭಿಕ್ಷಾಟನೆ ಮಾಡಿ ಹಣ ಕೊಡ್ತೀವಿ ಅಂತಾ ಹೇಳಿದರು. ನರೇಶ್ ಬದಲಾವಣೆ ಮಾಡಿ ಅಂತಾ ಸಿಎಂ ಬೊಮ್ಮಾಯಿ ಅವರಿಗೆ ಮನವಿ ಮಾಡಿದರು.