‘Quit hatred Tejasvi Surya’ ಅಭಿಯಾನಕ್ಕೆ ಚಾಲನೆ: ಸಂಸದರ ದ್ವೇಷ ದುಷ್ಟ ಬುದ್ದಿ ಮಾಯವಾಗಲಿ ಎಂದು ಪೂಜೆ ಮಾಡಿ ಕಾಂಗ್ರೆಸ್ ಕಾರ್ಯಕರ್ತರು

ಬೆಂಗಳೂರು : ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕ ರವಿಸುಬ್ರಮಣ್ಯ ಅವರಿಗೆ ಒಳ್ಳೆಯ ಮನಸ್ಥಿತಿಯನ್ನು ದೇವರು ದಯ ಪಾಲಿಸಲಿ ಎಂದು ದೇವರಲ್ಲಿ‌ ಪ್ರಾರ್ಥನೆ ಮಾಡುವ ಉದ್ದೇಶದಿಂದ ನಗರದಲ್ಲಿ ಇಂದು ಶುಭಕೃತ್ ನಾಮ ಸಂವತ್ಸರದ ಶ್ರಾವಣ ಮಾಸದಲ್ಲಿ ಶುಕ್ಲ ಪಕ್ಷದ ದ್ವಾದಶಿ ತಿಥಿ ಕಾರ್ಯಕ್ರಮವನ್ನು ನಡೆಸಲಾಯಿತು.
ಶ್ರೀನಗರದ ಡಾ.ಶಂಕರ್ ಗುಹಾ ದ್ವಾರಕಾನಾಥ ಕಚೇರಿಯಲ್ಲಿ ವಿಶೇಷ ಪೂಜೆ ನೇರವೇರಿಸಿದರು. ಪಂಚ ಪುಷ್ಪಗಳಲ್ಲಿ ವಿಶೇಷ ಪಂಚದುರ್ಗಾ ಮಹಾಪೂಜೆ ಮಾಡಿ, ‘Quit hatred Tejasvi Surya’ ಅಭಿಯಾನಕ್ಕೆ ಚಾಲನೆ ನೀಡಿದರು. ಇದರಲ್ಲಿ ಬಸವನಗುಡಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು. ಇತ್ತೀಚೆಗೆ ಸಂಸದರು ಕಾಂಗ್ರೆಸ್ ಸರ್ಕಾರವಿದ್ದರೆ ಕಲ್ಲು ಹೊಡೆಯಬಹುದಾಗಿತ್ತು ಎಂಬ ವಿವಾದಾತ್ಮಕ ಹೇಳಿಕೆ, ಸಮಾಜದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗುವಂತೆ ಮಾಡಿದ್ದರು ಎಂದು ಗುಹಾ ದ್ವಾರಕಾನಾಥ್ ಆರೋಪಿಸಿದರು.
ಸಂಸದರಿಗೆ ದ್ವೇಷ, ಕ್ಲೇಶ, ದುಷ್ಟ ಬುದ್ಧಿಗಳು ದೂರವಾಗಲಿ, ತಮ್ಮ ಕ್ಷೇತ್ರದ ಜನರನ್ನು ಪ್ರೀತಿಯಿಂದ ಕಾಣುವಂತಾಗಲಿ ಎಂದು ಪೂಜೆ ಮಾಡಲಾಗಿದೆ, ಸಂಸದ ತೇಜಸ್ವಿ ಸೂರ್ಯ ವಿರುದ್ಧ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಸಂಸದ ತೇಜಸ್ವಿ ಸೂರ್ಯ ಪ್ರವೀಣ್ ಹತ್ಯೆ ಬಳಿಕ ಒಂದು ಮಾತು ಹೇಳಿದ್ರು, ಚಿಕ್ಕಮಗಳೂರು ಜಿಲ್ಲಾಧ್ಯಕ್ಷನ ಜೊತೆ ಮಾತನಾಡುತ್ತ ಕಾಂಗ್ರೆಸ್ ಸರ್ಕಾರ ಇದ್ದಿದ್ರೆ ಕಲ್ಲು ಹೊಡೆಯಬಹುದು ಎಂದು ಹೇಳಿದ್ರು, ಇದು ಅವರ ಬಾಯಿಂದ ತಪ್ಪಾಗಿ ಬಂದ ಮಾತಲ್ಲ, ಅವರ ಮನಸ್ಸಿನಲ್ಲಿ ಇದ್ದ ಮಾತು ಹೊರಗೆ ಬಂದಿದೆ, ಇದು ಮೊದಲೇನಲ್ಲ ಅನೇಕ ಬಾರಿ ಈ ರೀತಿ ಮಾತುಗಳನ್ನು ಆಡಿದ್ದಾರೆ ಆಡಿದ್ದಾರೆ ಎಂದು ದೂರಿದರು.

ಅವರಿಗೆ ಒಳ್ಳೆ ಬುದ್ದಿ ಬರಲಿ, ದ್ವೇಷ ಹೋಗಿ ಪ್ರೇಮ ಹುಟ್ಟಲಿ ಅಂತ ಪೂಜೆ‌ ಮಾಡಿದ್ದೇವೆ, ಹೀಗಾಗಿ ಇಂದು ಪಂಚದುರ್ಗೆ ಪೂಜೆ ಮಾಡಿದ್ದೇವೆ, ಪಂಚದುರ್ಗೆಯ ಜ್ವಾಲೆಯಲ್ಲಿ ದ್ವೇಷ, ಕ್ಲೇಶ, ದುಷ್ಟ ಬುದ್ದಿ ದೂರವಾಗಲಿ ಎಂದು ಪೂಜಿಸಿದ್ದೇವೆ ಎಂದು ತಿಳಿಸಿದರು.

ಬ್ರಾಹ್ಮೀ ಮುಹೂರ್ತದಲ್ಲಿ ಪೂಜೆ ಶುರು ಮಾಡಿದ್ದೇವೆ, ಈ ಮೂಲಕ quit hatred Tejasvi surya ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದೇವೆ, ಸಂಸದರು ಸಾರ್ವಜನಿಕವಾಗಿ ಯಾವುದೇ ಕಾರ್ಯಕ್ರಮಕ್ಕೆ ಹೋದರೆ ಹೂ ಕೊಡುವ ಕೆಲಸ ಮಾಡುತ್ತೇವೆ, ನಮ್ಮ ಕಾರ್ಯಕರ್ತರು ಸುಮ್ಮನೆ ಬಂದು ಹೂ ಕೊಟ್ಟು ಹೋಗುತ್ತಾರೆ ಎಂದು ತಿಳಿಸಿದರು.

ಅಲ್ಲದೇ ಈಗ ಪೂಜೆ ಮಾಡಿರುವ ಪ್ರಸಾದವನ್ನ ಅವರ ಮನೆಗೆ ಕಳುಹಿಸುತ್ತೇವೆ, ಸಂಸದ‌ ತೇಜಸ್ವಿ ಸೂರ್ಯ ಅವರು ಇದನ್ನ ಸ್ವೀಕರಿಸಲಿ ಎಂದು ಮನವಿ ಮಾಡುತ್ತೇವೆ, ಕೊರಿಯರ್ ಮೂಲಕ ಅವರ ಮನೆ ಪ್ರಸಾದ ಕಳಿಸಿಕೊಡಲಾಗುವುದು ಎಂದರು.
ಪೊಲೀಸರಿಂದ ಪ್ರಸಾದ ಸೀಜ್
ಸಂಸದ‌ ತೇಜಸ್ವಿ ಸೂರ್ಯಗೆ ಪೂಜೆ ಮಾಡಿ ಪ್ರಸಾದ‌‌ ಕಳಿಸುವುದಕ್ಕೂ ಪೊಲೀಸರು ಬಿಡಲಿಲ್ಲ, ಸಂಸದ ತೇಜಸ್ವಿ ಸೂರ್ಯಗೆ ಕಳಿಸಿಕೊಡಬೇಕಿದ್ದ ಪ್ರಸಾದವನ್ನು ಪೊಲೀಸರು ಎತ್ತಿಕೊಂಡು ಹೋಗಿದ್ದಾರೆ. ಹಾಗೂ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಖುದ್ದು ಸ್ಥಳಕ್ಕೆ ಹನುಮಂತನಗರ ಇನ್ಸ್ ಪೆಕ್ಟರ್ ಹಾಗೂ ಶಂಕರಪುರ ಇನ್ಸ್ ಪೆಕ್ಟರ್ ಆಗಮಿಸಿದ ಪರಿಶೀಲನೆ ನಡೆಸಿದ್ದಾರೆ.

More News

You cannot copy content of this page