SIDDARAMIAH’S RATHA YATHRA: ಬಿಜೆಪಿ ಸರ್ಕಾರದ ಹಗರಣಗಳ ವಿರುದ್ಧ ತೊಡೆ ತಟ್ಟಿದ ಸಿದ್ದರಾಮಯ್ಯ : 224 ಕ್ಷೇತ್ರದಲ್ಲಿ ರಥಯಾತ್ರೆ ನಡೆಸಲು ಭರದ ಸಿದ್ದತೆ

ಬೆಂಗಳೂರು : ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ @75 ಮಹೋತ್ಸವ ಕಾರ್ಯಕ್ರಮದ ಭರ್ಜರಿ ಯಶಸ್ಸಿನಿಂದ ಕಾಂಗ್ರೆಸ್ ನಲ್ಲಿ ಅದರಲ್ಲೂ ಸಿದ್ದರಾಮಯ್ಯ ಅವರಲ್ಲಿ ಹುಮ್ಮಸ್ಸು ಇಮ್ಮಡಿಗೊಂಡಿದೆ. ರಾಜ್ಯದ ಮೂಲೆ ಮೂಲೆಯಲ್ಲೂ ಸಿದ್ದರಾಮಯ್ಯ ಅವರ ಪರ ಅಲೆ ಎದ್ದು ಕಾಣುತ್ತಿದೆ.
ಇದನ್ನೇ ತಮ್ಮ ಯಶಸ್ಸಿಗೆ ಬಳಸಿಕೊಳ್ಳಲು ಮುಂದಾಗಿರುವ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ, ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸಲು ಸಜ್ಜಾಗಿದ್ದಾರೆ.
2010ರಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ವಿಧಾನಸೌಧದಲ್ಲಿ ನೇರಾ ನೇರಾ ಸವಾಲು ಹಾಕಿ, ಆಡಳಿತ ಪಕ್ಷದ ವಿರುದ್ಧ ತೊಡೆತಟ್ಟಿ ಬೆಂಗಳೂರಿನಿಂದ ಬಳ್ಳಾರಿವರೆಗೂ ಪಾದಯಾತ್ರೆ ನಡೆಸಿದ್ದರು. ಅದರ ಫಲವೇ 2013ರ ಸಾರ್ವತ್ರಿಕ ಚುನಾವಣೆಯಲ್ಲಿ ಸರಳ ಬಹುಮತ ಪಡೆಯೋ ಮೂಲಕ ಕರುನಾಡಿನ ಮುಖ್ಯಮಂತ್ರಿಯಾಗಿ ಪಟ್ಟಕ್ಕೆ ಏರಿದ್ದರು.
ಈಗ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿಯಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹುದೊಡ್ಡ ಸ್ಟಾಟರ್ಜಿಯನ್ನೇ ಮಾಡಿದ್ದಾರೆ. ಅದುವೇ ಬಿಜೆಪಿ ಸರ್ಕಾರದ 40% ಪರ್ಸೆಂಟ್ ಸೇರಿದಂತೆ ಇನ್ನಿತರ ಹತ್ತು ಹಲವಾರು ಭ್ರಷ್ಟಾಚಾರದ ವಿರುದ್ಧ ಸಿದ್ದರಾಮಯ್ಯ ಅವರು ರಾಜ್ಯಾದಾದ್ಯಂತ ರಥಯಾತ್ರೆ ಕೈಗೊಳ್ಳಲು ನಿರ್ಧರಿಸಿದ್ದಾರಂತೆ.
ಹೌದು, ಇಂತಹ ಹುಮ್ಮಸ್ಸು ಬರಲು ಕಾರಣವಾಗಿದ್ದು ದಾವಣಗೆರೆಯಲ್ಲಿ ನಡೆಸಿದ ಸಿದ್ದರಾಮೋತ್ಸವ. ನಿರೀಕ್ಷೆಗೂ ಮೀರಿ ರಾಜ್ಯದ ಮೂಲೇ ಮೂಲೆಯಿಂದ ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದು ಸಿದ್ದರಾಮಯ್ಯರಲ್ಲಿ ಹೊಸ ಹುಮ್ಮಸ್ಸು ಮೂಡಲು ಕಾರಣವಾಗಿದೆ.
ಕಾಂಗ್ರೆಸ್ ಮಾಜಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಬಳಿಕ ಸಿದ್ದರಾಮಯ್ಯ ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿ ಭ್ರಷ್ಟಾಚಾರದ ವಿರುದ್ಧ ರಥಯಾತ್ರೆ ಕೈಗೊಳ್ಳಲಿದ್ದಾರಂತೆ. 2023ರ ಸಾರ್ವತ್ರಿಕ ಚುನಾವಣೆಗೂ ಮುನ್ನ ರಥಯಾತ್ರೆ ಸಂಪೂರ್ಣ ಮಾಡಲು ಚಿಂತನೆ ಕೂಡ ನಡೆಸಿದ್ದಾರೆ ಎನ್ನಲಾಗಿದೆ.
ಸಿದ್ದರಾಮೋತ್ಸವ ಬಳಿಕ ಸಿದ್ದರಾಮಯ್ಯ ಅವ್ರು ಎಲ್ಲೇ ಹೋದ್ರು ಅವರಿಗೆ ಜನರು ತೋರಿಸುತ್ತಿರೋ ಪ್ರೀತಿ, ವಿಶ್ವಾಸ ಹೆಚ್ಚಾಗಿದೆಯಂತೆ. ಇದನ್ನೇ ಬಳಸಿಕೊಳ್ಳಲು ಅವರು ನಿರ್ಧಾರ ಮಾಡಿದ್ದು, ಸದ್ಯ ಸೃಷ್ಟಿಯಾಗಿರೋ ಟ್ರೇಂಡ್ ಉಳಿಸಿಕೊಳ್ಳಲು ಭ್ರಷ್ಟಾಚಾರದ ವಿರುದ್ಧ ರಥಯಾತ್ರೆ ಆರಂಭ ಮಾಡಲು ತೆರೆಮರೆಯಲ್ಲಿ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

ತಮಿಳುನಾಡು ಸಿಎಂ ಸ್ಟಾಲಿನ್ ರನ್ನು ಇತ್ತೀಚೆಗೆ ಭೇಟಿಯಾಗಿದ್ದ ಸಿದ್ದರಾಮಯ್ಯ ಅವ್ರು ಈ ಬಗ್ಗೆ ಚರ್ಚೆ ನಡೆಸಿದ್ದಾರಂತೆ ಅವ್ರಂತೆ ರಸ್ತೆ ಮಾರ್ಗದಲ್ಲಿ ರಥಯಾತ್ರೆ ನಡೆಸೋ ಮೂಲಕ, ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿ ಮಾಡಲಿದ್ದಾರೆ. ಈ ಮೂಲಕ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಪಣತೊಟ್ಟಿದ್ದಾರೆ. ಇನ್ನು ಉತ್ತರ ಕರ್ನಾಟಕ ಭಾಗದಿಂದ ಈ ರಥಯಾತ್ರೆ ಆರಂಭ ಮಾಡಲು ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಮಾಜಿ ಸಿಎಂ ಸಿದ್ದರಾಮಯ್ಯರ ರಥಯಾತ್ರೆ ಅಜೆಂಡಾ.. !?

  • ಅಹಿಂದ ಮತಗಳ ಕ್ರೂಡೀಕರಣಕ್ಕೆ ರಥಯಾತ್ರೆಯ ಮೂಲಕ ಒತ್ತು
  • ಎಲ್ಲಾ ಸಮುದಾಯ, ಜನಾಂಗ, ಜನರಲ್ಲಿ ಸರ್ಕಾರದ ಜನ ವಿರೋಧಿ ನೀತಿ ಬಗ್ಗೆ ಜಾಗೃತಿ ಮೂಡಿಸುವುದು
  • ರಥಯಾತ್ರೆಯಲ್ಲಿ 40% ಪರ್ಸೆಟ್ ಕಮೀಷನ್, ಭ್ರಷ್ಟಾಚಾರ ವಿಚಾರ ಬ್ರಹ್ಮಾಸ್ತ್ರವಾಗಿ ಬಳಸಿಕೊಳ್ಳಲು ನಿರ್ಧಾರ
  • ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಕೇಂದ್ರದ ತಾರತಮ್ಯ ಧೋರಣೆ ಖಂಡನೆ ಪ್ರಸ್ತಾಪ
  • ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ ಅಡಳಿತ ನೀತಿ ಬಗ್ಗೆ ಜನರಿಗೆ ಮಾಹಿತಿ
  • ರಾಜ್ಯದಲ್ಲಿ ಸೌಹಾರ್ದತೆ ಕಾಪಾಡೋದು ರಥಯಾತ್ರೆ ಉದ್ದೇಶ
    ಒಟ್ಟಿನಲ್ಲಿ ಬಿಜೆಪಿ ಸರ್ಕಾರದ ಹಗರಣಗಳ ಬಗ್ಗೆ ರಾಜ್ಯದ ಜನರಿಗೆ ತಿಳಿಸೋದು ಸಿದ್ದರಾಮಯ್ಯರ ರಥಯಾತ್ರೆಯ ಉದ್ದೇಶವಾಗಿದೆ. ಇನ್ನು ಇಂತಹದ್ದೆ ರಥಯಾತ್ರೆಗಳನ್ನು ಮಾಡಿ ಯಾರ್ ಯಾರ್ ಸಕ್ಸಸ್ ಆಗಿದ್ದಾರೆ ಅನ್ನೋ ಇತಿಹಾಸ ನೋಡೋದಾದ್ರೆ
    ರಥಯಾತ್ರೆ ಮಾಡಿ ಸಕ್ಸಸ್ ಆದವರು ಯಾರ್ಯಾರು.?
  • 1930ರಲ್ಲಿ ಸ್ವಾತಂತ್ರ್ಯ ಪಡೆಯುವ ಸಲುವಾಗಿ ಮಹಾತ್ಮ ಗಾಂಧಿ 240ಕಿ.ಮೀ. ದಂಡಿ ಯಾತ್ರೆ ಮಾಡಿದ್ದು ಇತಿಹಾಸ
  • 1982 ರಲ್ಲಿ ಆಂಧ್ರದಲ್ಲಿ NTR 40 ಸಾವಿರ ಕಿ.ಮೀ.ಗಳ ಚೈತನ್ಯ ರಥಯಾತ್ರೆ ಮಾಡಿ ಅಧಿಕಾರಕ್ಕೆ ಬಂದಿದ್ದರು.
  • 1990ರಲ್ಲಿ ಅಡ್ವಾಣಿ ಅವರು ಅಯೋಧ್ಯೆ ವಿಚಾರವನ್ನ ಮುಂದಿಟ್ಟು 10 ಸಾವಿರ ಕೀ.ಮೀ.ರಥಯಾತ್ರೆ ಮಾಡಿದ್ರು, 85 ಸ್ಥಾನವಿದ್ದ ಬಿಜೆಪಿ 120 ಸ್ಥಾನಕ್ಕೇರಲು ರಥಯಾತ್ರೆ ಸಹಕಾರಿಯಾಗಿತ್ತು.
  • 1991-1992ರಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಮುರುಳಿ ಮನೋಹರ್ ಜೋಶಿ ಏಕತಾ ಯಾತ್ರೆ ನಡೆಸಿದ್ದರು. ಇದರಿಂದ 1995ರಲ್ಲಿ ಬಿಜೆಪಿಗೆ ಅಧಿಕಾರ ಬಂದಿತ್ತು.
  • 2018ರಲ್ಲಿ ಆಂಧ್ರದಲ್ಲಿ ಜಗನ್ ಪ್ರಜಾ ಸಂಕಲ್ಪ ಯಾತ್ರೆ ಮಾಡಿ, YSR ಪಕ್ಷ ಅಧಿಕಾರಕ್ಕೆ ತರಲು ಯಶಸ್ವಿಯಾದರು.
  • ಉತ್ತರಾಖಂಡದಲ್ಲಿ ಪರಿವರ್ತನೆ ಯಾತ್ರೆ ಮೂಲಕ ಅಧಿಕಾರ ಪಡೆದ ಬಿಜೆಪಿ
  • 2004ರಲ್ಲಿ S.M.ಕೃಷ್ಣ ಪಾಂಚಜನ್ಯ ಯಾತ್ರೆ ಮಾಡುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಗೆ ಅಧಿಕಾರ ಸಿಕ್ಕಿತ್ತು.
    ಅದರಂತೆಯೇ ರಥಯಾತ್ರೆಯ ಮೂಲಕ ರಾಜಕೀಯದಲ್ಲಿ ಮೈಲುಗಲ್ಲು ಸಾದಿಸಲು ಸಿದ್ದರಾಮಯ್ಯ ಅವರು ಸಜ್ಜಾಗಿದ್ದಾರೆ.
ಸಾಂದರ್ಭಿಕ ಚಿತ್ರ
  • ಸಿದ್ದರಾಮೋತ್ಸವ ಬಳಿಕ ಜೋಶ್ ನಲ್ಲಿರೋ ಮಾಜಿ ಸಿಎಂ ಸಿದ್ದರಾಮಯ್ಯ ರಥಯಾತ್ರೆ ಮೂಲಕ ಬಿಜೆಪಿ ವಿರುದ್ಧ ಸಮರ ಸಾರಲು ಸಜ್ಜಾಗಿದ್ದಾರೆ. ಸಿದ್ದರಾಮಯ್ಯರ ರಥಯಾತ್ರೆ ವರ್ಕೌಟ್ ಆಗುತ್ತಾ ಇಲ್ವಾ ಅನ್ನೋದು 2023ರ ಎಲೆಕ್ಷನ್ ಬಳಿಕ ಗೊತ್ತಾಗಲಿದೆ. ಒಟ್ಟಿನಲ್ಲಿ ಸಿದ್ದರಾಮಯ್ಯರ ಈ ಯಾತ್ರೆ ಬಿಜೆಪಿಗೆ ಬಿಸಿ ತುಪ್ಪವಾಗೋದಂತು ಸತ್ಯ.

More News

You cannot copy content of this page