ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೊಡಗಿನಲ್ಲಿ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಹೊಡೆದಿರುವುದು ಸರಿಯಲ್ಲ, ಇಂಥಹ ಸಂಸ್ಕೃತಿ ಸರಿ ಅಲ್ಲ ಎಂದು ಸಂಸದ ಪ್ರತಾಪ್ ಸಿಂಹ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದ್ರೆ ಸಿದ್ದರಾಮಯ್ಯನವರ ಮೇಲೆ ಕೊಡಗಿನ ಜನರಿಗೆ ಆಕ್ರೋಶ ಇದೆ, ಟಿಪ್ಪು ಜಯಂತಿ ಮಾಡಿದ್ದಕ್ಕೆ ಸಿದ್ದರಾಮಯ್ಯ ಮೇಲೆ ಕೋಪ ಇದೆ ಎಂದು ತಿಳಿಸಿದರು.
ಸಾವರ್ಕರ್ ಬಗ್ಗೆ ಕಾಂಗ್ರೆಸ್ ನವರಿಗೆ ಏನು ಗೊತ್ತು?
ಸಾವರ್ಕರ್ ಪೋಟೋ ಶಿವಮೊಗ್ಗದಲ್ಲಿ ಒಂದು ಸರ್ಕಲ್ ಗೆ ಹಾಕಿದರೆ ಮುಸಲ್ಮಾನರಿಗೆ ಏನು ತೊಂದರೆ ಎಂದು ಪ್ರಶ್ನಿಸಿದ ಅವರು, ಸಿದ್ದರಾಮಯ್ಯ ಯಾಕೆ ಅದಕ್ಕೆ ಸಪೋರ್ಟ್ ಮಾಡುತ್ತಾರೆ? ಮುಸಲ್ಮಾನರ ಏರಿಯಾಕ್ಕೆ ಹಾಕಬೇಡಿ ಎಂದರೆ ಮುಸಲ್ಮಾನರಿಗೆ 1947 ರಲ್ಲೇ ಪಾಕಿಸ್ತಾನ ಕೊಟ್ಟಿದ್ದಾರೆ ಹೋಗಬೇಕಿತ್ತು ಎಂದು ತಾಕೀತು ಮಾಡಿದರು.

ಸಾವರ್ಕರ್, ನೆಹರೂ ರೀತಿ ಯಾವುದೋ ಬ್ರಿಟಿಷ್ ಬಂಗಲೆಯಲ್ಲಿ ಇರಲಿಲ್ಲ, ಸಾವರ್ಕರ್ ಬಗ್ಗೆ ಸಿದ್ದರಾಮಯ್ಯರಿಂದ ಸರ್ಟಿಫಿಕೇಟ್ ಬೇಕಾ?, ಸಿದ್ದರಾಮಯ್ಯ ಕುಟುಂಬಸ್ಥರೆಲ್ಲಾ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ್ದಾರಾ?, ಸಿದ್ದರಾಮಯ್ಯ ಅವರಿಗೆ ಇತಿಹಾಸದ ಕನಿಷ್ಠ ಜ್ಞಾನವೂ ಇಲ್ಲ ಎಂದು ಟಿಕೀಸಿದರು.
ಚಾಮರಾಜಪೇಟೆಯಲ್ಲಿ ಗಣೇಶ ಹಬ್ಬ ಆಚರಣೆಗೆ ಅವಕಾಶ ನೀಡಬೇಕು
ಚಾಮರಾಜಪೇಟೆ ಆಟದ ಮೈದಾನದಲ್ಲಿ ಗಣೇಶ ಹಬ್ಬ ಆಚರಣೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದ ಅವರು, ಅದು ಕಂದಾಯ ಭೂಮಿ, ಆರ್ ಅಶೋಕ್ ಈಗಾಗಲೇ ಇದನ್ನ ಸ್ಪಷ್ಟವಾಗಿ ಹೇಳಿದ್ದಾರೆ, ಹಿಂದುಗಳು ಎರಡು ಹಬ್ಬವನ್ನು ಮಾಸ್ ಆಗಿ ಆಚರಣೆ ಮಾಡುತ್ತಾರೆ,

ಗಣೇಶ ಚತುರ್ಥಿ, ದುರ್ಗಾಪೂಜೆ ಸಾರ್ವಜನಿಕವಾಗಿ ಆಚರಣೆ ಮಾಡುತ್ತೇವೆ, ಸರ್ಕಾರ ಅದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.