PIN DROP SILENCE : ಮುರುಘಾ ಶ್ರೀ ಬಂಧನ : ಜೈಲು ಪಾಲಾದ ಶಿವಮೂರ್ತಿ ಶರಣರು: ಕಣ್ಣೀರು ಹಾಕಿದ ಅನುಯಾಯಿಗಳು

ಚಿತ್ರದುರ್ಗ :ಗುರುವಾರ ರಾತ್ರಿ ಸುಮಾರು 9.30 ಗಂಟೆಗೆ ಆರಂಭವಾದ ಮುರುಘಾ ಶರಣರ ಬಂಧನ ಪ್ರಕ್ರಿಯೆ ಮುಗಿದದ್ದು ಸುಮಾರು ಬೆಳಗ್ಗಿನ ಜಾವ ಮೂರು ಗಂಟೆಗೆ. ಬೆಳಗ್ಗಿನ ಜಾವ ಜಿಲ್ಲಾ ಕಾರಾಗೃಹಕ್ಕೆ ಶಿವಮೂರ್ತಿ ಮುರುಘಾ ಶರಣರು ತೆರಳುತ್ತಿದ್ದಾಗ ಭಕ್ತರು ಭಾವೋದ್ವೇಗಕ್ಕೆ ಒಳಗಾದರು, ನೆರೆದಿದ್ದ ನೂರಾರು ಭಕ್ತರು ಕಣ್ಣೀರ ಧಾರೆ ಎರೆದರು.
ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪದಲ್ಲಿ ಫೋಕ್ಸೋ ಕಾಯಿದೆಯಡಿಯಲ್ಲಿ ಮುರುಘ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘ ಶರಣರು ರಾತ್ರಿ ಸುಮಾರು ಹತ್ತು ಗಂಟೆಗೆ ಮುರುಘಾ ಮಠದಲ್ಲಿಯೇ ಬಂಧನಕ್ಕೊಳಗಾದರು.
ಗುರುವಾರ ರಾತ್ರಿ ಮುರುಘ ಮಠಕ್ಕೆ ಪೊಲೀಸರ ದಂಡೆ ಆಗಮಿಸಿತ್ತು. ಸುಮಾರು ಹತ್ತು ಗಂಟೆಗೆ ಅವರನ್ನು ಪ್ರಾಥಮಿಕ ವಿಚಾರಣೆ ನಡೆಸಿ ಬಂಧಿಸಲಾಯಿತು. ನಂತರ ಅವರನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ದ ನಂತರ ನ್ಯಾಯಾಧೀಶರ ಎದುರು ಹಾಜರು ಪಡಿಸಲಾಯಿತು. ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ನೀಡಲು ಆದೇಶ ನೀಡಿದ್ದರಿಂದ ಅವರು ಕಾರಾಗೃಹಕ್ಕೆ ಕಳುಹಿಸಿಕೊಡಲಾಯಿತು.
ಗುರುವಾರ ರಾತ್ರಿ ಸುಮಾರು 9.30ಕ್ಕೆ ಮುರುಘ ಮಠಕ್ಕೆ ಪೊಲೀಸರ ಆಗಮನ

ರಾತ್ರಿ ಸುಮಾರು ಹತ್ತು ಗಂಟೆಗೆ ಮಠದಲ್ಲಿಯೇ ಮುರುಘ ಶರಣರನ್ನು ವಶಕ್ಕೆ ಪಡೆದ ಪೊಲೀಸರು
10.45ಕ್ಕೆ ಚಳ್ಳಕೆರೆಯ ಡಿವೈಎಸ್ ಪಿ ಕಚೇರಿಗೆ ಹಾಜರು, ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಪ್ರಾಥಮಿಕ ವಿಚಾರಣೆ ನಡೆಸಿ ಬಂಧಿಸಿದ ಪೊಲೀಸರು.
ರಾತ್ರಿ ಸುಮಾರು 1.15ಕ್ಕೆ ಜಿಲ್ಲಾ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆ ನಡೆಸಿದ ಪೊಲೀಸರು. ರಕ್ತದೊತ್ತಡ, ಹೃದಯ ಸಂಬಂಧಿ ಆರೋಗ್ಯ ತಪಾಸಣೆ ನಡೆಸಿದರು.

ಬೆಳಗಿನ ಜಾವ ಸುಮಾರು 2.30ಕ್ಕೆ ನ್ಯಾಯಾಧೀಶರ ಮುಂದೆ ಹಾಜರು. ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಕೋಮಲಾ ಅವರ ಎದುರು ಹಾದರು. ಸ್ಥಳದಲ್ಲಿಯೇ ಶರಣರ ಪರ ವಕೀಲರಿಂದ ಜಾಮೀನು ಕೋರಿ ಅರ್ಜಿ, ಶುಕ್ರವಾರ ನ್ಯಾಯಾಲಯದಲ್ಲಿ ಸಲ್ಲಿಸುವಂತೆ ಸೂಚಿಸಿದ ನ್ಯಾಯಾಧೀಶರು ಶರಣರನ್ನು 14 ದಿನ ನ್ಯಾಯಾಂಗದ ಬಂಧನಕ್ಕೆ ಒಪ್ಪಿಸಿದರು.
ಬೆಳಗ್ಗೆ ಸುಮಾರು 3 ಗಂಟೆಗೆ ಜೈಲು ಸೇರಿದ ಮುರುಘ ಶರಣರು. ಈ ಸಂದರ್ಭದಲ್ಲಿ ಆಸ್ಪತ್ರೆ ಮತ್ತು ಜೈಲಿನ ಸುತ್ತಮುತ್ತ ಸಾವಿರಾರು ಭಕ್ತರು ಸೇರಿದ್ದರು. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಆದರೆ, ಶರಣರು ಜೈಲು ಸೇರುತ್ತಿದ್ದಂತೆಯೇ ಭಕ್ತರು ಭಾವೋದ್ವೇಗಕ್ಕೆ ಒಳಗಾದರು ಹಾಗೂ ಕಣ್ಣೀರು ಹಾಕಿದರು.

#shivamurthy muruga sharanu arrest #muruga sharanaru arrest #muruga matt #posco

More News

You cannot copy content of this page