ಶಿವಮೊಗ್ಗ : ಶಿವಮೊಗ್ಗದಲ್ಲಿ ಇಂದು ವಿಶಿಷ್ಟವಾದ ದಿನ. ಮಹಿಳೆಯರೇ ಸೇರಿ ಗಣೇಶ ಕುಳ್ಳಿರಿಸಿ, ಇಂದು ಸಾರ್ವಜನಿಕವಾಗಿ ವಿಸರ್ಜನೆ ಮಾಡಿದ್ದಾರೆ.
ಶಿವಮೊಗ್ಗದ ಗೌಡ ಸಾರಸ್ವತ ಸಮಾಜದಿಂದ ಶಿವಮೊಗ್ಗ ಪ್ರಮುಖ ಬೀದಿಗಳಲ್ಲಿ ಗಣೇಶನ ಮೆರವಣಿಗೆ ನಡೆಸಿ, ತಲೆಗೆ ರುಮಾಲು ಪೇಟಾ ಧರಿಸಿ ಭಜನೆ ಹಾಡುತ್ತಾ ಸಾಂಪ್ರದಾಯಿಕ ಶೈಲಿಯಲ್ಲಿ ಮೆರವಣಿಗೆ ನಡೆಸಿದರು.

ಗಣಪತಿ ಬಪ್ಪಾ ಮೊರೆಯಾ ಎಂದು ಜೈಘೋಷ ಮೊಳಗಿಸಿದ ಮಹಿಳೆಯರು, ಯುವತಿಯರು ಡೊಳ್ಳು ಬಾರಿಸುತ್ತಾ ಹೆಜ್ಜೆ ಹಾಕಿದರು. ಮಹಿಳೆಯರ ಭರ್ಜರಿ ಸ್ಟೆಪ್, ಕುಣಿತ, ಘೋಷಣೆಯಿಂದ ಮೆರವಣಿಗೆ ಕಳೆಗಟ್ಟಿತ್ತು.

ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಕಳೆದ 5 ದಿನಗಳ ಹಿಂದೆ ಪ್ರತಿಷ್ಠಾಪನೆ ಮಾಡಿದ ಗಣಪನನ್ನು ಮೆರವಣಿಗೆ ಮೂಲಕ ತುಂಗಾ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.
