ಸುಳ್ಳ: ಬಿಜೆಪಿ ಯುವಮೋರ್ಚಾದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಅಂದು ಬೆಳ್ಳಾರೆಯಲ್ಲಿ ನಡೆಸುತ್ತಿದ್ದ ಅಕ್ಷಯ ಫಾರ್ಮ್ ಫ್ರೆಶ್ ಚಿಕನ್ ಮಾಂಸ ಮಾರಾಟ ಅಂಗಡಿ ಮತ್ತೆ ಆರಂಭಗೊಂಡಿದೆ.
ಸ್ಥಳೀಯ ಯುವಕ ಯತೀಶ್ ಎಂಬುವವರು ಅಂಗಡಿಯನ್ನು ಮತ್ತೆ ತೆರೆದಿದ್ದಾರೆ. ಬೆಳ್ಳಾರೆ ಮಾಸ್ತಿಕಟ್ಟೆಯಲ್ಲಿರುವ ಈ ಮಳಿಗೆ ಪ್ರವೀಣ್ ಅವರ ಹತ್ಯೆಯ ನಂತರ ಮುಚ್ಚಲಾಗಿತ್ತು. ಇದರ ಆರಂಭಕ್ಕೆ ಅವರ ಕುಟುಂಬಸ್ಥರು ಉತ್ಸಾಹ ತೋರಿರಲಿಲ್ಲ. ಆದ್ದರಿಂದ ಮುಚ್ಚಿಯೇ ಇದ್ದ ಮಳಿಗೆ ಮತ್ತೆ ಆರಂಭಗೊಂಡಿದೆ.

ಪ್ರವೀಣ್ ಕೊಲೆಯಾಗುವುದಕ್ಕಿಂತ ಒಂದು ವರ್ಷದ ಮುಂಚೆಯೇ ಈ ಅಂಗಡಿಯನ್ನು ಆತ ಆರಂಭಿಸಿ ವ್ಯಾಪಾರ ನಡೆಸುತ್ತಿದ್ದ. ಹಲಾಲ್ ಮಾಂಸ ಮಾರಾಟ ವಿರೋಧಿಸಿ ದಕ್ಷಿಣ ಕನ್ನಡದಲ್ಲಿ ಸಂಘಪರಿವಾರಗಳು ನಡೆಸಿದ ಅಭಿಮಾನದಲ್ಲಿ ಈತ ಸಕ್ರೀಯವಾಗಿ ಪಾಲ್ಗೊಂಡಿದ್ದ. ತದನಂತರದಲ್ಲಿ ಈತನ ವ್ಯಾಪಾರ ಅನೇಕರ ಕೆಂಗೆಣ್ಣಿಗೂ ಗುರಿಯಾಗಿತ್ತು.