ಬೆಂಗಳೂರು : ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಹಾಗೂ ಸ್ಯಾಂಡಲ್ ವುಡ್ ನಟ ಝೈದ್ ಖಾನ್ ವಿಘ್ನ ನಿವಾರಕ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಚಾಮರಾಜಪೇಟೆಯ ಶಾಸಕರ ಕಛೇರಿಯಲ್ಲಿ ಇಂದು ವಿಜೃಂಭಣೆಯಿಂದ ಗಣೇಶೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಅವರ ಪುತ್ರ ಹಾದರಿದ್ದು ಸ್ಥಳೀಯರ ಜೊತೆಗೂಡಿ ಗಣೇಶೋತ್ಸವದಲ್ಲಿ ಪಾಲ್ಗೊಂಡರು. ಝೈದ್ ಖಾನ್ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ, ವಿನಾಯಕನ ಕೃಪೆಗೆ ಪಾತ್ರರಾದರು.

ಗಣೇಶನಿಗೆ ಮಂಗಳಾರತಿ ಮಾಡಿದ ಬಳಿಕ, ಸ್ಥಳೀಯರ ಜೊತೆಗೂಡಿ ಚಾಮರಾಜಪೇಟೆಯಾದ್ಯಂತ ವಾದ್ಯ ಮೇಳಗಳೊಂದಿಗೆ ಮೆರವಣಿಯಲ್ಲಿ ಪಾಲ್ಗೊಂಡರು. ನಂತರ ಯಡಿಯೂರು ಕೆರೆಯಲ್ಲಿ ಗಣೇಶ ವಿಸರ್ಜನೆ ವೇಳೆ ಹಾಜರಿದ್ದರು.

