ACTRESS RAMYA: ಸಮಸ್ಯೆ ಬಗೆಹರಿಸಿದರೆ ಮಾತ್ರ ಓಟ್‌ ಹಾಕುತ್ತಾರಂತೆ ನಟಿ ರಮ್ಯಾ

ಬೆಂಗಳೂರು: ಎಡಬಿಡದೆ ದಿನನಿತ್ಯ ಸುರಿಯುತ್ತಿರುವ ಮಹಾಮಳೆಗೆ ಬೆಂಗಳೂರು ಅಕ್ಷರಶ ನಲುಗಿ ಹೋಗಿದೆ. ನಿನ್ನೆ ಸುರಿದ ಭಾರೀ ಮಳೆಯಿಂದಾಗಿ ನಗರದ ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ಜನ ಜೀವನ ಅಸ್ತವ್ಯಸ್ಥವಾಗಿದೆ. ಇನ್ನೂ ಮಹಾ ಮಳೆ ಬಗ್ಗೆ ಮೊದಲ ಬಾರಿ ಮಾಜಿ ಸಂಸದೆ ನಟಿ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಟ್ಟೀಟ್‌ ಮಾಡಿರುವ ರಮ್ಯಾ, ಬೆಂಗಳೂರು ಸ್ಮಾರ್ಟ್‌ ಸಿಟಿ. ಆದರೆ ಈ ಸ್ಮಾರ್ಟ್‌ ಸಿಟಿಯಲ್ಲಿ ಅಕ್ರಮವಾಗಿ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಇಂತಹ ಅಕ್ರಮಗಳಿಗೆ ಕೂಡಲೇ ಸರ್ಕಾರ ಕಡಿವಾಣ ಹಾಕಬೇಕು. ಆಗ ಮಾತ್ರ ಇಂತಹ ಸಮಸ್ಯೆಗಳಿಂದ ಬೆಂಗಳೂರಿನ ಜನರಿಗೆ ಮುಕ್ತಿ ಸಿಗಲಿದೆ. ಯಾವ ಸರ್ಕಾರ ಈ ಸಮಸ್ಯೆಗೆ ಸ್ಪಂದಿಸುತ್ತದೆಯೋ ಅಂತಹ ಸರ್ಕಾರಕ್ಕೆ ನಾನು ಓಟ್‌ ಹಾಕುತ್ತೇನೆಂದು ಟ್ಟೀಟ್‌ ಮಾಡುವುದರ ಮೂಲಕ ನಟಿ ರಮ್ಯಾ ಜಲ್ವಂತ ಸಮಸ್ಯೆ ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ.
ನಿನ್ನೆ ಸುರಿದ ಮಳೆಗೆ ಬೆಂಗಳೂರು-ತುಮಕೂರಿನ ಸರ್ವೀಸ್ ರಸ್ತೆಯು ಜಲಾವೃತಗೊಂಡು, ಈ ಮಾರ್ಗದಲ್ಲಿ ವಾಹನ ಸಂಚಾರ ಮತ್ತು ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಇತ್ತ ಹೆಚ್.ಬಿ.ಆರ್. ಲೇಔಟ್, ಇಂದಿರಾನಗರ ಸೇರಿದಂತೆ, ಬಹುತೇಕ ಪ್ರದೇಶಗಳು ಬಹುತೇಕ ನೀರಿನಲ್ಲಿ ಮುಳುಗಿವೆ.

https://twitter.com/divyaspandana/status/1566760579284762624?s=20&t=kboLpmUcOqWZsL3caimVig

ಶಾಂತಿನಗರದ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಡಿಪೋಗೆ ಸಂಪರ್ಕಿಸುವ ರಸ್ತೆ ಜಲಾವೃತಗೊಂಡಿತ್ತು. ಇತ್ತ ಸರ್ಜಾಪುರ ರಸ್ತೆಯ ದಿ ಕಂಟ್ರಿ ಸೈಡ್ ಲೇಔಟ್ ಸಂಪೂರ್ಣ ಮುಳುಗಡೆಯಾಗಿದೆ. ಹಾಗೆ ಹಲಸೂರು ಬಳಿಯ ಕೇಂದ್ರೀಯ ಬ್ರಿಡ್ಜ್ ಲೇಔಟ್‌ನಲ್ಲಿರುವ ಅಪಾರ್ಟ್‌ಮೆಂಟ್‌ನ ಬೇಸ್ಮೆಂಟ್‌ಗೆ ನೀರು ನುಗ್ಗಿ ವಾಹನಗಳು ನೀರಿನಲ್ಲಿ ಮುಳುಗಿ ಹೋಗಿವೆ.

ಸನ್ನಿಬ್ರೂಕ್ ಲೇಔಟ್‌ನಲ್ಲಿ ೧೦ಕ್ಕೂ ಹೆಚ್ಚು ಐಶಾರಾಮಿ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳ ಮೆಗಳಿಗೆ ನೀರು ನುಗ್ಗಿದ್ರೆ .ಇತ್ತ ರೈನ್ ಬೋ ಲೇಔಟ್‌ನಲ್ಲೂ ನಿನ್ನೆ ಸುರಿದ ಧಾರಾಕಾರ ಮಳೆಗೆ ರಸ್ತೆಗಳಲ್ಲಿ ನೀರು ನಿಂತು ಮನೆಗಳಿಗೂ ನೀರು ನುಗ್ಗಿದೆ. ಇಂದಿರಾನಗರದ 100 ಅಡಿ ರಸ್ತೆ ಮಹಾಮಳೆಯ ಹೊಡೆತಕ್ಕೆ ನಲುಗಿದ್ದು ಜಲಾವೃತಗೊಂಡಿದೆ.

#ramya #actress ramya #divya spandana #bangalore rain #namma bangalore #vote #illigal construction

More News

You cannot copy content of this page