ಚಿತ್ರದುರ್ಗ : ಲೈಂಗಿಕ ದೌರ್ಜನ್ಯ ಆರೋಪದಡಿಯಲ್ಲಿ ಫೋಕ್ಸೋ ಪ್ರಕರಣದಡಿ ಬಂಧನಕ್ಕೊಳ್ಳಗಾಗಿರುವ ಮುರುಘಾ ಶರಣರ ಪೊಲೀಸ್ ಕಸ್ಟಡಿ ಇಂದಿಗೆ ಮುಕ್ತಾಯಗೊಳ್ಳಲಿದೆ.
ಮತ್ತೆ ಪೊಲೀಸ್ ಕಸ್ಟಡಿ ಮುಂದುವರೆಸಲು ಪೊಲೀಸ್ ಅಧಿಕಾರಿಗಳು ನ್ಯಾಯಾಲಯಕ್ಕೆ ಮತ್ತೆ ಮನವಿ ಸಲ್ಲಿಸುವ ಸಾಧ್ಯೆಗಳಿದ್ದು, ಇಂದು ಶರಣರನ್ನ ಕೋರ್ಟ್ ಗೆ ಹಾಜರು ಪಡಿಸುವ ಸಾಧ್ಯತೆಇದೆ.
ನ್ಯಾಯಾಲಯ ಶರಣರಿಗೆ ಪೊಲೀಸ್ ಕಸ್ಟಡಿ ನೀಡದಿದ್ದರೆ ನ್ಯಾಯಾಂಗ ಬಂಧನ ಮುಂದುವರೆಯಲಿದೆ. ಇಂದೂ ಕೂಡ ಶರಣರ ಪರ ವಕೀಲರಿಂದ ಮತ್ತೆ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆಗಳು ಹೆಚ್ಚಾಗಿವೆ.
ನಿನ್ನೆ ತಾನೆ ಮುರುಘಾ ಮಠದಲ್ಲಿ ಶರಣರು ತಂಗುತ್ತಿದ್ದ ಕೊಠಡಿಯಲ್ಲಿ ತನಿಖಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಕೆಲವು ಅಮೂಲ್ಯವಾದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ. ಸದ್ಯ ಜಿಲ್ಲಾ ಕಾರಾಗೃಹದಲ್ಲಿರವ ಮುರುಘಾ ಶರಣರು ಕಾರಾಗೃಹ ಸುತ್ತಮುತ್ತ ಬಿಗಿ ಭದ್ರತೆ ಮಾಡಲಾಗಿದೆ.
ಮಕ್ಕಳ ಕಲ್ಯಾಣ ಸಮಿತಿ ಸುಪರ್ಧಿಲ್ಲಿ ಮಠದ ಹಾಸ್ಟೆಲ್ ವಿದ್ಯಾರ್ಥಿಗಳು
ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಮಠದ ಹಾಸ್ಟೆಲ್ ನಲ್ಲಿದ್ದ ವಿದ್ಯಾರ್ಥಿನಿಯರನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಆಯಾ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಯ ಸುಪರ್ಧಿಗೆ ಒಪ್ಪಿಸಿದೆ.

ಎಲ್ಲಾ ವಿದ್ಯಾರ್ಧಿಗಳ ಶಿಕ್ಷಣ ಮತ್ತು ವಸತಿ ಕಲ್ಪಿಸುವ ಹೊಣ್ಣೆಯಲ್ಲಿ ಸಮಿತಿಗೆ ನೀಡಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪಿ ಲೋಕೇಶ್ವರಪ್ಪ ತಿಳಿಸಿದ್ದು, ಮಠದ ಹಾಸ್ಟೆಲ್ ನಲ್ಲಿ ಒಟ್ಟು 105 ವಿದ್ಯಾರ್ಥಿನಿಯರು ಇದ್ದರು. ಗಣೇಶ ಹಬ್ಬದ ಹಿಂದಿನ ದಿನ 54 ಮಕ್ಕಳು ಪಾಲಕರೊಂದಿಗೆ ಊರಿಗೆ ತೆರಳಿದ್ದರು.