B S YEDIYURAPPA IN TROUBLE: ಮತ್ತೆ ಬಿಎಸ್ ವೈ ಗೆ ಸಂಕಷ್ಟ: ಭ್ರಷ್ಟಾಚಾರ ಆರೋಪ ಮರು ವಿಚಾರಣೆಗೆ ಹೈಕೋರ್ಟ್ ಆದೇಶ

ಬೆಂಗಳೂರು : ಬಿಜೆಪಿ ನಾಯಕ ಹಾಗೂ ಮಾಜಿ ಸಿಎಂ ಬಿ. ಎಸ್​ ಯಡಿಯೂರಪ್ಪ ಅವರಿಗೆ (Former Chief Minister BS Yediyurappa) ಮತ್ತೆ ಸಂಕಷ್ಟ ಬಂದೋದಗಿದೆ.
ಭ್ರಷ್ಟಾಚಾರ ಆರೋಪ ಪ್ರಕರಣ (Corruption Case) ಸಂಬಂಧ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಕುಟುಂಬದ ವಿರುದ್ಧ ಮರು ವಿಚಾರಣೆಗೆ ಹೈಕೋರ್ಟ್ (Karnataka High Court) ಆದೇಶ ನೀಡಿದೆ.
ಈ ಹಿಂದೆ ಪ್ರಾಸಿಕ್ಯೂಷನ್​​ಗೆ ಪೂರ್ವಾನುಮತಿ ಸಿಗದ ಕಾರಣ ಈ ಕೇಸ್ ವಜಾಗೊಂಡಿದ್ದರಿಂದ ಮಾಜಿ ಸಿಎಂಗೆ ಕೊಂಚ ರಿಲೀಫ್ ಸಿಕ್ಕಿತ್ತು. ಆದರೆ ಇದೀಗ ಹೈಕೋರ್ಟ್ ಈ ಹಿಂದಿನ ವಜಾ ಮಾಡಿದ ಆದೇಶವನ್ನು ರದ್ದುಪಡಿಸಿ, ಪ್ರಕರಣವನ್ನು ಮರು ವಿಚಾರಣೆಗೆ ಆದೇಶಿಸಿದೆ.
ಆರೋಪ ಎದುರಿಸುತ್ತಿರುವವರು
ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ಅವರ ಪುತ್ರ ಬಿ. ವೈ. ವಿಜಯೇಂದ್ರ,‌ ಅವರ ಅಳಿಯ ಶಶಿಧರ ಮರಡಿ, ಸಂಜಯ್​​ಶ್ರೀ, ಚಂದ್ರಕಾಂತ ರಾಮಲಿಂಗಮ್, ಎಸ್​. ಟಿ. ಸೋಮಶೇಖರ್, ಡಾ. ಜಿ. ಸಿ. ಪ್ರಕಾಶ್, ಕೆ. ರವಿ, ವಿರುಪಾಕ್ಷಪ್ಪ ಯಮಕನಮರಡಿ ಇವರೆಲ್ಲರ ವಿರುದ್ಧ ಭ್ರಷ್ಟಾಚಾರ ಆರೋಪದಡಿ ಕೇಸ್ ದಾಖಲಾಗಿತ್ತು.
ಟಿ. ಜೆ. ಅಬ್ರಹಾಂ ನೀಡಿರುವ ದೂರು ಹಾಗೂ ಅರ್ಜಿ ಸಲ್ಲಿಸಿದ್ದು, ಅಮಿಕಸ್ ಕ್ಯೂರಿಯಾಗಿ ವೆಂಕಟೇಶ್ ಅರಬಟ್ಟಿ ವಾದಿಸಿದ್ದರು. ಇನ್ನು ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ಕೋರಿ ಹೈಕೋರ್ಟ್​ಗೆ ಬಿಎಸ್​ವೈ ಪರ ವಕೀಲ ಸಂದೀಪ್ ಪಾಟೀಲ್ ಮನವಿ ಮಾಡಿದ್ದಾರೆ. ಕಾಲಾವಕಾಶದ ಬಗ್ಗೆ ಜನಪ್ರತಿನಿಧಿಗಳ ನ್ಯಾಯಾಲಯ ತೀರ್ಮಾನಿಸಲಿ ಎಂದು ಬಿ.ಎಸ್.ಯಡಿಯೂರಪ್ಪ ಪರ ವಕೀಲರಿಗೆ ಹೈಕೋರ್ಟ್ ಪ್ರತಿಕ್ರಿಯೆ ನೀಡಿದೆ.

ಕೆಲ ದಿನಗಳ ಹಿಂದಷ್ಟೇ ಮಾಜಿ ಸಿಎಂ ಬಿ. ಎಸ್‌. ಯಡಿಯೂರಪ್ಪ ಮತ್ತು ಅವರ ಕುಟುಂಬದವರ ವಿರುದ್ಧ ಭ್ರಷ್ಟಾಚಾರ ಆರೋಪ ಪ್ರಕರಣವನ್ನು ಸಿಬಿಐ ಅಥವಾ ಎಸ್ಐಟಿ ತನಿಖೆಗೆ ವಹಿಸಬೇಕೆಂದು ಕೋರಿ ಹಾಗೂ ಈ ಬಗ್ಗೆ ಪಿಐಎಲ್ ಸಲ್ಲಿಸುವುದಕ್ಕೆ ಅವಕಾಶ ಕೊಡುವಂತೆ ಟಿ.ಜೆ.ಅಬ್ರಹಾಂ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ಪಿಐಎಲ್ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್​, ಈ ಹಿಂದೆ ಅರ್ಜಿದಾರರು ಖಾಸಗಿ ದೂರು ಸಲ್ಲಿಸಿರುವ ಕಾರಣ ಈ ಅರ್ಜಿಯನ್ನು ಪಿಐಎಲ್ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಅರ್ಜಿಯನ್ನು ತಿರಸ್ಕರಿಸಿತ್ತು.

#BSYEDIYURAPPA #BY VIJENDRA #T J ABHRAHUM #HIGH COURT #SHASHIDHAR MARADI #S T SOMASHEKAR

More News

You cannot copy content of this page