ಬೆಂಗಳೂರು: ಆಹಾರ ಖಾತೆ ಸಚಿವ ಉಮೇಶ್ ಕತ್ತಿ ನಿನ್ನೆ ರಾತ್ರಿ ಹೃದಾಯಾಘಾತದಿಂದ ನಿಧನಹೊಂದಿದ್ದಾರೆ. ವಾಡಿಕೆಯಂತೆ ಯಾವುದೇ ಓರ್ವ ಸಚಿವ ಅಧಿಕಾರದಲ್ಲಿದ್ದಾಗಲೇ ಸಾವನ್ನಪ್ಪಿದರೇ ರಾಜ್ಯಾದ್ಯಂತ ಸರ್ಕಾರದ ವತಿಯಿಂದ ಮೂರು ದಿನಗಳ ಕಾಲ ಶೋಕಾಚರಣೆ ಆಚರಿಸಲಾಗುತ್ತಿದೆ.
ಆದ್ರೆ ಉಮೇಶ್ ಕತ್ತಿ ನಿಧನಕ್ಕೆ ಸರ್ಕಾರ ಕೇವಲ ಒಂದು ದಿನ ಶೋಕಾಚರಣೆ ನಡೆಸುವಂತೆ ಆದೇಶ ಹೊರಡಿಸಿದೆ. ಸರ್ಕಾರದ ಈ ನಡೆಗೆ ಅಪಸ್ವರ ಕೂಡ ಕೇಳಿ ಬಂದಿದೆ.ಯಾಕಂದ್ರೆ ನಾಳೆ ಬಿಜೆಪಿ ವತಿಯಿಂದ ಜನೋತ್ಸವ ಕಾರ್ಯಕ್ರಮವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಹೊರವಲಯದಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕಾರ್ಯಕ್ರಮ ನಡೆದೆ ನಡೆಯುತ್ತೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಎಲ್ಲಾ ಲೀಡರ್ ಗೂ ತಿಳಿಸಿ ಅಂತಾ ತಮ್ಮ ಕಾರ್ಯಕರ್ತರಿಗೆ ಸಚಿವ ಸುಧಾಕರ್ ಸೂಚನೆ ಕೊಟ್ಟಿರೋ ಆಡಿಯೋ ವೈರಲ್ ಆಗಿದೆ.

ಈ ಹಿಂದೆ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ನಡೆದಿದ್ದರಿಂದ ಜನೋತ್ಸವ ಕಾರ್ಯಕ್ರಮವನ್ನು ರದ್ದು ಮಾಡಲಾಗಿತ್ತು. ಈಗ ತಮ್ಮದೇ ಸಂಪುಟದ ಹಿರಿಯ ಸಚಿವರಾಗಿದ್ದ ಉಮೇಶ್ ಕತ್ತಿ ಅಕಾಲಿಕ ಮರಣಹೊಂದಿದ್ದಾರೆ. ಹೀಗಿರುವಾಗ ಕಾರ್ಯಕ್ರಮ ನಡೆಸೋದು ಎಷ್ಟು ಸರಿ ಅನ್ನೋ ಮಾತುಗಳು ಕತ್ತಿ ಅಭಿಮಾನಿಗಳದ್ದಾಗಿದೆ.
#dr k sudhakar #health minister #umesh katti #forst and food minister #janothsava #bjp #state government