KANNADA SERIEL ACTOR MANDYA RAVI PASSES AWAY: ‘ಮಗಳು ಜಾನಕಿಯ ಧಾರವಾಹಿಯ ‘ಚಂದು ಭಾರ್ಗಿ’- ಮಂಡ್ಯ ರವಿ ನಿಧನ

ಬೆಂಗಳೂರು :ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಕಿರುತೆರೆ ಕಲಾವಿದ ಮಂಡ್ಯ ರವಿ ಇಂದು ಸಂಜೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ. ಬೆಂಗಳೂರು ನಗರದ ಬಿಜಿಎಸ್ ಆಸ್ಪತ್ರೆಯಲ್ಲಿ ಕಳೆದ ಹಲವಾರು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ನಿಧನಹೊಂದಿದ್ದಾರೆ.
ಇವರ ನಿಧನದಿಂದ ಬಣ್ಣದಲೋಕಕ್ಕೆ ಸಾಕಷ್ಟು ನಷ್ಟ ಉಂಟಾಗಿದ್ದು, ಕಿರುತೆರೆ ಕಲಾವಿದನನ್ನು ಕಳೆದುಕೊಂಡ ಅವರ ಅಭಿಮಾನಿಗಳು ಹಾಗೂ ಕುಟುಂಂಬ ಶೋಕಸಾಗರದಲ್ಲಿ ಮುಳುಗಿದೆ.
ಮಂಡ್ಯ ರವಿ ಅವರು ಕಿಡ್ನಿ ಸಮಸ್ಯೆಯನ್ನು ಎದುರಿಸುತ್ತಿದ್ದರು. ಈ ಕಾರಣಕ್ಕೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ. ಅವರ ಪಾರ್ಥೀವ ಶರೀರವನ್ನು ಮಂಡ್ಯಕ್ಕೆ ಕೊಂಡೊಯ್ಯಲಾಗುತ್ತಿದೆ ಎಂದು ತಿಳಿದುಬಂದಿದೆ.

ಮಗಳು ಜಾನಕಿಯ ಚಂದು ಭಾರ್ಗಿ ರವಿ ಅಸ್ತಂಗತ ಇನ್ನು 42 ನಾಲ್ಕು ಜನ್ಮಕ್ಕಾಗುವಷ್ಟು ಪ್ರತಿಭೆ ಅತ್ಯಂತ ಆಘಾತಕಾರಿ ಎಂದು ನಿರ್ದೇಶಕ ಟಿ ಎನ್ ಸೀತಾರಾಮ್ ಅವರು ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ರವಿ ಅವರು ಸೀತಾರಾಮ್ ಅವರ ಹಲವಾರು ಧಾರಾವಾಹಿಗಳಲ್ಲಿ ನಟಿಸಿ ಗಮನ ಸೆಳೆದಿದ್ದರು. ಮಗಳು ಜಾನಕಿ ಧಾರಾವಾಹಿಯ ಪಾತ್ರವನ್ನು ವೀಕ್ಷಕರು ಮೆಚ್ಚಿದ್ದರು ಹಾಗೂ ಅವರ ನಟನೆ ಪ್ರತಿಯೊಬ್ಬರ ಗಮನ ಸೆಳೆದಿತ್ತು.

#chandu bhargi #magalu janaki #seriel actor #mandya ravi #t n sitaram #condolence

More News

You cannot copy content of this page