ನವದೆಹಲಿ : ಆಸ್ಟೇಲಿಯಾ ವಿರುದ್ಧ ಸೆ.20 ರಿಂದ ನಡೆಯಲಿರುವ ಟಿ20 ಸರಣಿಯಿಂದ ಭಾರತದ ಕ್ರಿಕೆಟ್ ತಂಡದ ವೇಗದ ಬೌಲರ್ ಮಹಮ್ಮದ್ ಶಮಿ ದೂರ ಉಳಿಯುವ ಸಾಧ್ಯತೆ ಇದೆ.
ಶಮಿ ಅವರು ಕೋವಿಡ್ ಸೋಂಕಿನಿಂದ ಬಳಲುತ್ತಿದ್ದು, ಆಸ್ಟ್ರೇಲಿಯಾದ ವಿರುದ್ಧ ನಡೆಯಲಿರುವ ಟಿ20 ಸರಣಿಯಿಂದ ದೂರ ಉಳಿಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಸೆಪ್ಟೆಂಬರ್ 20 ರಿಂದ ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿ ಆರಂಭವಾಗಲಿದೆ. ಶಮಿ ಅವರ ಸ್ಥಾನಕ್ಕೆ ಮತ್ತೊಬ್ಬ ಆಟಗಾರರಾದ ಉಮೇಶ್ ಯಾದವ್ ತಂಡ ಸೇರಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ತೊಡೆಸಂದಿನ ನೋವಿನಿಂದ ಉಮೇಶ್ ಯಾದವ್ ಬಳಲುತ್ತಿದ್ದರು. ಸಧ್ಯಕ್ಕೆ ಯಾದವ್ ಪಿಟ್ ಆಗಿದ್ದಾರೆ. ಇದುವರೆಗೆ 7 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಆಡಿರುವ ಯಾದವ್, 2019 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟಿ20 ಸರಣಿಯಲ್ಲಿ ಭಾರತದ ತಂಡದ ಭಾಗವಾಗಿದ್ದರು.

ಮಹಮ್ಮದ್ ಶಮಿ ಅವರಿಗೆ ಕೋವಿಡ್ ಸೋಂಕಿನ ಪ್ರಾಥಮಿಕ ಲಕ್ಷಣಗಳಿದ್ದು, ಯಾವುದೇ ಆತಂಕವಿಲ್ಲ. ಆದರೆ, ಐಸೋಲೇಷನ್ ನಲ್ಲಿ ಇರಬೇಕಾಗಿದೆ. ಕೋವಿಡ್ ವರದಿಯು ನೆಗೆಟಿವ್ ಬಂದ ನಂತರ ಭಾರತದ ತಂಡವನ್ನು ಸೇರಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಸದ್ಯಕ್ಕೆ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧ ಸರಣಿಗೆ ಶಮಿ ಮರಳುವುದು ಬಹುತೇಕ ಅನುಮಾನ. ಆದರೆ, ಮುಂದೆ ಆಸ್ಟ್ರೇಲಿಯಾ ಸರಣಿ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಶಮಿ ಅವರು ಭಾರತದ ತಂಡ ಸೇರಿಕೊಳ್ಳಬಹುದು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ದದ ಸರಣಿ ಮುಗಿದ ನಂತರ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗೆ 10 ದಿನಗಳ ಕಾಲಾವಕಾಶವಿದೆ. ಶಮಿ ಅವರು ಕೋವಿಡ್‌ನಿಂದ ಗುಣಮುಖರಾಗಿ ತಂಡ ಸೇರ್ಪಡೆಗೊಳ್ಳುವ ವಿಶ್ವಾಸವಿದೆ ಎಂದು ಅವರು ಮಾಹಿತಿ ನೀಡಿದರು.
#MOHAMMED SHAMI #INDIAN TEAM #FAST BOWLER #TEAM INDIA #UMESH YADAV #AUSTRELIA #T-20 MATCH #COVID19